ಹನೂರು: ಎಸ್‍ಎಸ್‍ಎಲ್‍ಸಿ ಪರೀಕ್ಷಾ ಕೇಂದ್ರದಲ್ಲಿ ಹಾವು ಪ್ರತ್ಯಕ್ಷವಾದ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಕೆಲಕಾಲ ಆತಂಕ ಹಾಗೂ ಗಲಿಬಿಲಿಗೊಳಗಾದ ಘಟನೆ ಪಟ್ಟಣದ ಜಿ.ವಿ.ಗೌಡ ಪರೀಕ್ಷ ಕೇಂದ್ರದಲ್ಲಿ ಕಂಡು ಬಂದಿತು. ಎಂದಿನಂತೆ ಪರೀಕ್ಷೆ ಪ್ರಾರಂಭಕ್ಕೂ ಮುನ್ನ ವಿದ್ಯಾರ್ಥಿಗಳು ಆಸಿನರಾಗುತ್ತಿದ್ದ ಜಿ.ವಿ.ಗೌಡ ಕಾಲೇಜು ಮುಂಭಾಗದ ಗೇಟಿನ ಸಮೀಪ ಯಾವುದೋ ಪ್ರಾಣಿಯನ್ನು ನುಂಗಿ ಅತ್ತಿತ್ತ ಕದಲದೆ ಭಾರಿ ಗಾತ್ರದ ಹಾವನ್ನು ಕಂಡು ಭಯಭೀತರಾದರು.
ವಿದ್ಯಾರ್ಥಿಗಳ ಭಯ ಮತ್ತು ಆತಂಕವನ್ನು ದೂರ ಮಾಡುವ ದಿಸೆಯಲ್ಲಿ ಜಿ.ವಿ.ಗೌಡ ಪ್ರೌಢಶಾಲೆಯ ಶಿಕ್ಷಕ ವರ್ಗದವರು ಕಾರ್ಯೋನ್ಮುಖರಾಗಿ ಅರಣ್ಯ ಇಲಾಖೆಯ ಸ್ನೇಕ್ ಪ್ರಭುಸ್ವಾಮಿ ಅವರಿಗೆ ಕರೆ ಮಾಡಿ ಕರೆಯಿಸಿಕೊಂಡು ಸುರಕ್ಷಿತವಾಗಿ ಹಾವನ್ನು ಹಿಡಿದು ಕಾಡಿಗೆ ಬಿಡುವ ಮೂಲಕ ಆತಂಕ ದೂರ ಮಾಡಿದರು.
ಬರಿಗೈಲಿ ಕೇರೆ ಹಾವು ಹಿಡಿದದ್ದನ್ನು ಕಂಡು ಕುತೂಹಲಗೊಂಡ ವಿದ್ಯಾರ್ಥಿಗಳು ಯಾವುದೇ ಜಾತಿಯ ಹಾವುಗಳನ್ನು ಚಾಣಾಕ್ಷತೆಯಿಂದ ಹಿಡಿಯುವಲ್ಲಿ ಪರಿಣಿತಿ ಹೊಂದಿರುವ ಅರಣ್ಯ ಇಲಾಖೆಯ ಪ್ರಭುಸ್ವಾಮಿ ವಿಷಕಾರಿ ಅಲ್ಲದ ಕೇರೆ ಹಾವನ್ನು ಯಾವುದೇ ಸಾಧನ ಸಲಕರಣೆ ಇಲ್ಲದೆ ಕೈಯಲ್ಲಿ ಹಿಡಿದದ್ದನ್ನು ಕಂಡು ವಿದ್ಯಾರ್ಥಿಗಳು ಚಕಿತರಾದರು.
Leave a Review