ಮೈಸೂರು: ಮುಡಾ ಹಗರಣ ವಿಚಾರದಲ್ಲಿ ನ್ಯಾಯ ಸಿಗುತ್ತೆ, ಎದೆಗುಂದ ಬೇಡಿ ಎಂದು ಕಾಂಗ್ರೆಸ್ನವ್ರೇ ಹೇಳಿದ್ದಾರೆ ಎಂದು
ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಹೇಳಿದ್ದಾರೆ.
ಮುಡಾ ಸೈಟ್ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಕುಟುಂಬಕ್ಕೆ ಜನಪ್ರತಿನಿಧಿ ನ್ಯಾಯಾಲಯದಿಂದ ರಿಲೀಫ್ ಸಿಕ್ಕ ವಿಚಾರವಾಗಿ ಮೈಸೂರಿನಲ್ಲಿ ಮಾತನಾಡಿದ ಅವರು, ಈ ವೇಳೆ ಜನಪ್ರತಿನಿಧಿ ನ್ಯಾಯಾಲಯದ ಆದೇಶ ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ ಹಾಕುತ್ತೇನೆ. ನನ್ನ ಜೊತೆ ಈಗಲೂ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿಯ ಬಹಳಷ್ಟು ಜನ ಸಂಪರ್ಕದಲ್ಲಿ ಇದ್ದಾರೆ. ಅವರೆಲ್ಲ ಎದೆ ಗುಂದ ಬೇಡಿ ನ್ಯಾಯ ಸಿಕ್ಕೆ ಸಿಗುತ್ತದೆ ಎಂದು ಧೈರ್ಯ ತುಂಬಿದ್ದಾರೆ.
ಮೂಡಾ ಸೈಟ್ ವಿಚಾರದಲ್ಲಿ ಸಿಎಂ ಹಾಗೂ ಅವರ ಕುಟುಂಬ ತಪುö್ಪ ಮಾಡಿರುವುದು ನಿಜ. ಸಿಎಂ ಕುಟುಂಬಕ್ಕೆ ಶಿಕ್ಷೆ ಕೊಡಿಸುವವರೆಗೂ ಹೋರಾಟ ಮಾಡ್ತಿನಿ. ೫೦:೫೦ ಅನುಪಾತದಲ್ಲಿ ಸೈಟ್ ಪಡೆದ ಎಲ್ಲರಿಗೂ ಸಂಕಷ್ಟ ಕಟ್ಟಿಟ್ಟ ಬುತ್ತಿ. ಎಲ್ಲಾ ಸೈಟ್ ಸರ್ಕಾರಕ್ಕೆ ವಾಪಸ್ ಕೊಡಿಸುತ್ತೇನೆ ಎಂದು ಹೇಳಿದ್ದಾರೆ.
ಎದೆ ಗುಂದ ಬೇಡಿ ನ್ಯಾಯ ಸಿಕ್ಕೆ ಸಿಗುತ್ತದೆ ಕಾಂಗ್ರೆಸ್ ನಾಯಕರ ಭರವಸೆ: ಸ್ನೇಹಮಯಿ ಕೃಷ್ಣ



