ಬೆಂಗಳೂರು: ಕರ್ನಾಟಕದ ನತಾಶಾ ಚೇತನ್ ಅವರು ಚೆನ್ನೈನಲ್ಲಿ ನಡೆಯುತ್ತಿರುವ 90ನೇ ರಾಷ್ಟ್ರೀಯ ಬಿಲಿಯರ್ಡ್ಸ್ ಮತ್ತು ಸ್ನೂಕರ್ ಚಾಂಪಿಯನ್ಷಿಪ್ನಲ್ಲಿ ಸಬ್ ಜೂನಿಯರ್ ಬಾಲಕಿಯರ ಸ್ನೂಕರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಫೈನಲ್ನಲ್ಲಿ ನತಾಶಾ ಅವರು ಗುಜರಾತ್ನ ಅನ್ಯಾ ಪಟೇಲ್ ಅವರನ್ನು 3-1 (35-57, 57-43, 55-42, 41-29) ಪರಾಭವಗೊಳಿಸಿದರು.
ಕಳೆದ ವಾರ ಸಬ್ ಜೂನಿಯರ್ ಬಾಲಕಿಯರ ಬಿಲಿಯರ್ಡ್ಸ್ ಪ್ರಶಸ್ತಿಗೆ ನಡೆದ ಅಂತಿಮ ಸುತ್ತಿನಲ್ಲೂ ಇವರಿಬ್ಬರೂ ಮುಖಾಮುಖಿಯಾಗಿದ್ದು, ನತಾಶಾ ಜಯ ಸಾಧಿಸಿದ್ದರು. ಅವರು ಕಳೆದ ಜುಲೈನಲ್ಲಿ ರಿಯಾದ್ನಲ್ಲಿ ನಡೆದಿದ್ದ ಐಬಿಎಸ್ಎಫ್ ಮಹಿಳೆಯರ 21 ವರ್ಷದೊಳಗಿನವರ ವಿಶ್ವ ಸ್ನೂಕರ್ ಚಾಂಪಿಯನ್ಷಿಪ್ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದರು.