ಚಿಕ್ಕಬಳ್ಳಾಪುರ: ತಾಲೂಕಿನ ಹಾರೋಬಂಡೆಯ ಶ್ರೀ ಸಾಯಿಬಾಬಾ ದೇವಸ್ಥಾನದಲ್ಲಿ ಶ್ರೀ ಜಿ. ಧರ್ಮಪೀಠ ಟ್ರಸ್ಟ್ ವತಿಯಿಂದ ಭಾನುವಾರ ಹಮ್ಮಿಕೊಂಡದ್ದ ಯುಗಾದಿ ಪ್ರಶಸ್ತಿ ಪುರಸ್ಕಾರ 2024 ಕಾರ್ಯಕ್ರಮದಲ್ಲಿ ತಾಲೂಕಿನ ಶಿಕ್ಷಣ ಪ್ರೇಮಿ, ಸಮಾಜ ಸೇವಕರು, ಬಡವರ ಬಂಧು, ಹಿಂದುಳಿದವರ ಅಭಿವೃದ್ಧಿಯ ಹರಿಕಾರರಾದ ಡಾ. ಎಂ.ವಿ. ಸದಾಶಿವ ಮಂಚನಬಲೆ ಅವರಿಗೆ ನಿವೃತ್ತ ಲೋಕಾಯುಕ್ತ ನ್ಯಾಯಾಧೀಶರಾದ ಸಂತೋಷ್ ಹೆಗ್ಡೆ ಅವರು ಯುಗಾದಿ ಪ್ರಶಸ್ತಿ ಪುರಸ್ಕಾರ ಪ್ರದಾನ ಮಾಡಿ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಜಾಲಪ್ಪ ಮೆಡಿಕಲ್ ಕಾಲೇಜಿನ ಕಾರ್ಯದರ್ಶಿ ಜಿ.ಎಚ್.ಎನ್ ನಾಗರಾಜ್, ಮ್ಯಾನೇಜಿಂಗ್ ಟ್ರಸ್ಟಿ ಶ್ರೀ ಜಿ. ಪ್ರಕೃತಿ ಧರ್ಮಪೀಠ ಟ್ರಸ್ಟ್ ಶ್ರೀನಿವಾಸ್, ಅಧ್ಯಕ್ಷತೆ ವಹಿಸಿದ ಜಾಲಪ್ಪ ಮೆಡಿಕಲ್ ಕಾಲೇಜ್ ಕಾರ್ಯದರ್ಶಿ ಜಿ.ಎಚ್.ಎನ್ ನಾಗರಾಜ್, ಗಣ್ಯರು ಹಾಜರಿದ್ದರು.