ತುಮಕೂರು: ನೂರಕ್ಕೆ ನೂರು ಟಿಕೆಟ್ ಸಿಗಲಿದೆ. ನಾನು ಮಾಡುವ ಸೇವೆಗೆ ಟಿಕೆಟ್ ಸಿಗಲಿದೆ. ನನ್ನ ಕಾರ್ಯಕರ್ತರು ಆತಂಕ ಪಡುವ ಅಗತ್ಯವಿಲ್ಲ. ಟಿಕೆಟ್ ನನಗೆ ಖಚಿತ,ಖಚಿತ. ದೆಹಲಿಯಲ್ಲಿ ಎಲ್ಲರಿಗೂ ಮನವಿ ಮಾಡಲಾಗಿದೆ. ಟಿಕೆಟ್ ಸಿಗುವುದು ಖಚಿತವಾಗಿದೆ. ನಾಮಿನೇಷನ್ ಪೈಲ್‍ಮಾಡಲು ಸಿದ್ದತೆ ನಡೆಸಿಕೊಳ್ಳಲಾಗಿದೆ.
ಒಂದು ವೋಟು,ಇನ್ನೊಂದು ನೋಟಿಗೆ ಜೋಳಿಗೆ ಹಾಕಿಕೊಂಡಿದ್ದೇನೆ. ಪ್ರಜಾಪ್ರಭುತ್ವ ಉಳಿಸಲು ನನ್ನ ಜೊತೆ ಬಂದು ಪ್ರಚಾರ ಮಾಡಲಿ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಹೇಳಿದ್ದಾರೆ.
ಬಿಜೆಪಿ ಟಿಕೆಟ್ ಘೋಷಣೆ ಸಾಧ್ಯತೆ ಹಿನ್ನೆಲೆ ಮಾಜಿ ಸಚಿವ ಸೊಗಡು ಶಿವಣ್ಣ ಎರಡು ಜೋಳಿಗೆ ಹಾಕಿಕೊಂಡು ಖಾಸಗಿ ಹೊಟೇಲ್?ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕಿವಿಗೆ ಕೇಳಲಿ ಎಂದು ತಮಟೆ ವಾಧ್ಯವು ಕೊಟ್ಟಿದೆ. ಎಲ್ಲಾ ಬಂದುಗಳು ಬಾಯಿಬಿಟ್ಟು ಹೇಳುತ್ತಿದ್ದಾರೆ.ನೀವು ಸ್ಪರ್ಧೆ ಮಾಡಿ ಅಂತಾ. ಕಣ್ಣು ಮುಂದೆ ಪ್ರಜಾಪ್ರಭುತ್ವ ನಾಶ ಆಗುತ್ತಿರುವುದು ಕಾಣುತ್ತಿದೆ ಎಂದರು.
Leave a Review