ಬೆಂಗಳೂರು: ತಮಿಳುನಾಡಿನ ಮನೀಶ್ಸುರೇಶ್ಕುಮಾರ್ ಮತ್ತು ಕರ್ನಾಟಕದ ಸೋಹಾ ಸಾದಿಕ್ ಬುಧವಾರ ಹೊಸದಿಲ್ಲಿಯ ಡಿಎಲ್ಟಿಎ ಕಾಂಪ್ಲೆಕ್ಸ್ನಲ್ಲಿ ನಡೆಯುತ್ತಿರುವ ೩೦ನೇ ಫೆನೆಸ್ಟಾ ಓಪನ್ ರಾಷ್ಟಿçÃಯ ಟೆನಿಸ್ ಚಾಂಪಿಯನ್ಶಿಪ್ನ ತಮ್ಮ ವಿಭಾಗಗಳಲ್ಲಿ ಮೂರನೇ ಸುತ್ತು ತಲುಪುವ ಮೂಲಕ ತಮ್ಮ ಗೆಲುವಿನ ಓಟವನ್ನು ಮುಂದುವರೆಸಿದರು. ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಮಾಜಿ ಚಾಂಪಿಯನ್ ಅಗಾಧ ಶಕ್ತಿ ಮತ್ತು ವೇಗವನ್ನು ಪ್ರದರ್ಶಿಸಿ ಒಡಿಶಾದ
ದೇಬಾಸಿಸ್ ಸಾಹೂ ಅವರನ್ನು ೬-೨, ೬-೧ ನೇರ ಸೆಟ್ಗಳಿಂದ ಸೋಲಿಸಿ ಪಂದ್ಯಾವಳಿಯ ಮೂರನೇ ಸುತ್ತಿಗೆ ಅರ್ಹತೆ ಪಡೆದರು.
ಮತ್ತೊಂದೆಡೆ, ಮಹಿಳಾ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನಲ್ಲಿ ಮಹಾರಾಷ್ಟçದ ಆಕೃತಿ ಎನ್ ಸೋಂಕುಸಾರೆ ವಿರುದ್ಧ ಸೋಹಾ ಪ್ರಯಾಸದ ಗೆಲುವು ಸಾಧಿಸಿದರು. ನಿಧಾನವಾಗಿ ಆಟ ಆರಂಭಿಸಿದ ನಾಲ್ಕನೇ ಶ್ರೇಯಾಂಕದ ಆಕೃತಿ ಮೊದಲಿಗೆ ೩-೧ ಮುನ್ನಡೆ ಸಾಧಿಸಿದ್ದರು. ತದನಂತರದಲ್ಲಿ ಸೋಹಾ ಮತ್ತೆ ಉತ್ತಮ ಪ್ರದರ್ಶನ ನೀಡಿ ಸತತ ಐದು ಪಂದ್ಯಗಳನ್ನು ಗೆದ್ದು ಮೊದಲ ಸೆಟ್ ಅನ್ನು ತಮ್ಮದಾಗಿಸಿಕೊಂಡರು. ಎರಡನೇ ಸೆಟ್ನಲ್ಲಿ ಆಕೃತಿ ಅದ್ಭುತ ಕಮ್ಬ್ಯಾಕ್ ಪ್ರದರ್ಶನ ನೀಡುವ ಮೊಲಕ ೬-೩ ಅಂಕಗಳೊAದಿಗೆ ಮುನ್ನಡೆದರಾದರು, ಸೋಹಾ ಅವರು ತಮ್ಮ ದೃಢವಾದ ಬೇಸ್ಲೈನ್ ಆಟದ ಮೂಲಕ ತೀಕ್ಷವಾದ ಪ್ರತಿಧಾಳಿಯ ಮೂಲಕ, ನಿರ್ಣಾಯಕ ಪಂದ್ಯದಲ್ಲು ೬-೪ ಅಂಕಗಳೊAದಿಗೆ ಸೋಲಿಸಿದರು ಮತ್ತು ಕಠಿಣ ಸ್ಪರ್ಧೆಯಲ್ಲಿ ೬-೩, ೩-೬, ೬-೪ ಅಂಕಗಳೊAದಿಗೆ ಜಯಗಳಿಸಿದರು.
ಡಿಸಿಎಂ ಶ್ರೀರಾಮ್ ಲಿಮಿಟೆಡ್ ಸಹಯೋಗದೊಂದಿಗೆ, ಆಲ್ ಇಂಡಿಯಾ ಟೆನಿಸ್ ಅಸೋಸಿಯೇಷನ್ (ಎಐಟಿಎ) ಮತ್ತು ದೆಹಲಿ ಲಾನ್ ಟೆನಿಸ್ಅ ಸೋಸಿಯೇಷನ್ (ಡಿಎಲ್ಟಿಎ) ಆಶ್ರಯದಲ್ಲಿ ನಡೆಯುತ್ತಿರುವ ಫೆನೆಸ್ಟಾ ಓಪನ್ ಭಾರತದ ಅತಿದೊಡ್ಡ ದೇಶೀಯ ಟೆನಿಸ್ ಚಾಂಪಿಯನ್ಶಿಪ್ ಆಗಿದ್ದು, ದೇಶಾದ್ಯಂತದ ಉನ್ನತ ಸ್ಪರ್ಧಿಗಳಿಗೆ ತಮ್ಮ ಸಾಮರ್ಥ್ಯವನ್ನು ಓರೆಗೆ ಹಚ್ಚಲು ಕೈಬೀಸಿ ಕರೆಯುತ್ತಿದೆ. ಏತನ್ಮಧ್ಯೆ, ಮಹಾರಾಷ್ಟçದ ಆಕಾಂಕ್ಷಾ ನಿಟ್ಟುರ್
ಕೂಡ ಪಂದ್ಯಾವಳಿಯಲ್ಲಿ ತನ್ನ ಉತ್ತಮ ಫಾರ್ಮ್ ಮುಂದುವರಿಸಿದರು, ಎರಡನೇ ಶ್ರೇಯಾಂಕದ ಸೋಹಿನಿ ಸಂಜಯ್ ಮೊಹಾಂತಿ ಅವರನ್ನು ೬-೧, ೭-೬ (೨) ನೇರ ಸೆಟ್ಗಳಿಂದ ಸೋಲಿಸಿ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಮೂರನೇ ಸುತ್ತು ತಲುಪಿದರು. ಪಂಜಾಬ್ನ ಸಾಹಿರಾ ಸಿಂಗ್ ತಮ್ಮ ಎರಡನೇ ಸುತ್ತಿನ ಪಂದ್ಯದ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿದ್ದು, ಜೀತೇಶ್ ಕುಮಾರಿಯನ್ನು ೬-೩, ೬-೨ ನೇರ ಸೆಟ್ಗಳಿಂದ ಪರಾಭವಗೊಳಿಸಿದರು.
ಪ್ರಮುಖ ಪ್ರಶಸ್ತಿಗಳ ಹೊರತಾಗಿ, ವಿಜೇತರುಒಟ್ಟು ೨೧.೫೫ ಲಕ್ಷಕ್ಕೂ ಅಧಿಕ ಮೊತ್ತವನ್ನು ಪಡೆಯಲಿದ್ದಾರೆ. ಜೂನಿಯರ್ ಆಟಗಾರರಿಗೆ ಕಿಟ್ ಭತ್ಯೆಗಳು ಸಹ ಸಿಗಲಿವೆ. U ೧೬ ಮತ್ತು U ೧೪ ಸಿಂಗಲ್ಸ್ ಸ್ಪರ್ಧೆಗಳಲ್ಲಿ ವಿಜೇತರು ಮತ್ತು ರನ್ನರ್ ಅಪ್ ಆದವರಿಗೆ ತಲಾ ೨೫,೦೦೦ ಟೆನಿಸ್ ವಿದ್ಯಾರ್ಥಿವೇತನ ದೊರೆಯಲಿದೆ.