ಬೆಂಗಳೂರು: 2024 ರ ಮೊದಲ ಸೂರ್ಯಗ್ರಹಣ ಏಪ್ರಿಲ್ 8 ರಂದು ಸೋಮವಾರ ಸಂಭವಿಸಲಿದೆ. ಮೊದಲ ಸೂರ್ಯಗ್ರಹಣ ಬಹಳ ಮುಖ್ಯವಾಗಿರುತ್ತದೆ. ಏಕೆಂದರೆ ಇದು ಸಂಪೂರ್ಣ ಸೂರ್ಯಗ್ರಹಣವಾಗಿದೆ. ಹಾಗಾಗಿ ಜನರಲ್ಲಿ ಈ ಬಗ್ಗೆ ಉತ್ಸಾಹವಿರುತ್ತದೆ.
ಇದರ ಬಗ್ಗೆ ಅನೇಕ ಪ್ರಶ್ನೆಗಳು ಮೂಡುತ್ತವೆ.ಭಾರತೀಯ ಕಾಲಮಾನದ ಪ್ರಕಾರ, ಸೂರ್ಯಗ್ರಹಣ ಸೋಮವಾರ ರಾತ್ರಿ 9.12 ಕ್ಕೆ ಪ್ರಾರಂಭವಾಗುತ್ತದೆ ಮತ್ತು ನಾಳೆ ಬೆಳಗ್ಗೆ 2.22 ರವರೆಗೆ ಇರುತ್ತದೆ.ಅಮೆರಿಕ, ಮೆಕ್ಸಿಕೊ, ಕೆನಡಾ ಮತ್ತು ಉತ್ತರ ಅಮೆರಿಕದ ಹಲವು ದೇಶಗಳಲ್ಲಿ ಸೂರ್ಯಗ್ರಹಣ ಗೋಚರಿಸಲಿದೆ. ಹೆಚ್ಚುವರಿಯಾಗಿ ಗ್ರಹಣವು ಕೋಸ್ಟಾ ಡೊಮಿನಿಕಾ ಮತ್ತು ಫ್ರೆಂಚ್ ಪಾಲಿನೇಷಿಯಾದಲ್ಲಿ ಸಹ ಗೋಚರಿಸುತ್ತದೆ.
2024 ರ ಮೊದಲ ಸೂರ್ಯಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಹಾಗೆಂದ ಮಾತ್ರಕ್ಕೆ ಭಾರತೀಯರು ಬೇಸರವಾಗುವ ಅಗತ್ಯವಿಲ್ಲ. ಏಕೆಂದರೆ ನೀವು ಅದನ್ನು ನಾಸಾದ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ ವೀಕ್ಷಿಸಬಹುದು.
ಸೂರ್ಯಗ್ರಹಣದ ಸಮಯದಲ್ಲಿ, ಸೂರ್ಯನ ಬೆಳಕು ಕಣ್ಮರೆಯಾಗುತ್ತದೆ ಮತ್ತು ಭೂಮಿಯ ಒಂದು ಸಣ್ಣ ಭಾಗದಲ್ಲಿ ತಕ್ಷಣವೇ ಮತ್ತೆ ಕಾಣಿಸಿಕೊಳ್ಳುತ್ತದೆ.ಒಂದು ಕ್ಷಣದಲ್ಲಿ, ಅಯಾನುಗೋಳದ ತಾಪಮಾನ ಮತ್ತು ಸಾಂದ್ರತೆಯು ಇಳಿಯುತ್ತದೆ, ನಂತರ ಏರುತ್ತದೆ, ಅಯಾನುಗೋಳದಲ್ಲಿ ಅಲೆಗಳು ಏರಲು ಕಾರಣವಾಗುತ್ತದೆ.