ಬೆಂಗಳೂರು: ಸಮಕಾಲೀನ ಫ್ಯಾಷನ್ ಅನ್ನು ಕಾಲಾತೀತ ಕೈಗಡಿಯಾರಗಳ ತಯಾರಿಕೆಗೆ ಸಂಯೋಜಿಸಲು ಹೆಸರುವಾಸಿಯಾಗಿರುವ ಸೋನಾಟಾದ ಉಪ- ಬ್ರ್ಯಾಂಡ್ ಆಗಿರುವ ಪೋಜ್, ಈ ವಸಂತ ಹಾಗೂ ಬೇಸಿಗೆಯ 2024ರ ಋತುವಿಗೆ ತನ್ನ ಇತ್ತೀಚಿನ ಹೊಸ ಸಂಗ್ರಹವನ್ನು ಅನಾವರಣ ಮಾಡಿರುವುದಾಗಿ ಹೆಮ್ಮೆಯಿಂದ ಪ್ರಕಟಿಸಿದೆ.
ವಸಂತ ಋತುವಿನ ರೋಮಾಂಚನಕಾರಿ ವೈವಿಧ್ಯಮಯ ಬಣ್ಣಗಳು ಮತ್ತು ಬೇಸಿಗೆಯ ಸೂರ್ಯಾಸ್ತಗಳ ಚಿನ್ನದ ಹೊಳಪಿನಿಂದ ಸ್ಫೂರ್ತಿ ಪಡೆದ ವಿಶಿಷ್ಟ ಶೈಲಿಗಳ ಆಕರ್ಷಕ ಶ್ರೇಣಿಯನ್ನು ಅನಾವರಣಗೊಳಿಸಿದೆ.ನಿಖರತೆ ಮತ್ತು ಕಾಳಜಿ ಸೇರಿ ತಯಾರಿಸಲಾಗಿರುವ ಈ ಹೊಸ ಸಂಗ್ರಹವು ಎಲ್ಲಾ ಸ್ತ್ರೀ – ಪುರುಷರ ಬದಲಾಗುತ್ತಿರುವ ಪ್ರವೃತ್ತಿಗಳು ಮತ್ತು ಫ್ಯಾಷನ್ ಉತ್ಸಾಹಗಳನ್ನು ಪೂರೈಸಲಿದೆ.
ಗುಣಮಟ್ಟ, ಲಭ್ಯತೆ ಮತ್ತು ಜನಪ್ರಿಯ ಹೊಸ ಅಲೆಯ ವಿನ್ಯಾಸಗಳ ಮೇಲೆ ಗಮನ ಕೇಂದ್ರೀಕರಿಸಿ, ನಾವು ಕೇವಲ ಸಮಯ ಸೂಚಿಸುವ ಸಾಧನವನ್ನಷ್ಟೇ ಪರಿಚಯಿಸಿಲ್ಲ. ನಮ್ಮ ಗ್ರಾಹಕರ ದೈನಂದಿನ ಬದುಕು ಮತ್ತು ಅವರ ವೈಯಕ್ತಿಕ ಜೀವನ ಶೈಲಿಯ ಅಭಿವ್ಯಕ್ತಿಗಳ ಅಗತ್ಯ ಭಾಗಗಳಾಗಿರುವ ಕೈಗಡಿಯಾರಗಳನ್ನು ಮಾರುಕಟ್ಟೆಗೆ ಪರಿಚಯಿಸುವುದನ್ನು ನಾವು ಮುಂದುವರಿಸಲಿದ್ದೇವೆ ಎಂದು ಸೋನಾಟಾ ಬ್ರ್ಯಾಂಡ್ನ ಮುಖ್ಯಸ್ಥ ಪ್ರತೀಕ್ ಗುಪ್ತಾ ಅವರು ಹೇಳಿದ್ದಾರೆ.
ರೂ. 695 ಮತ್ತು ರೂ. 1695 ರ ಮಧ್ಯೆ ಇರುವ ಬೆಲೆಯ, ಸೋನಾಟಾದ ಪೋಜ್ನ ವಸಂತ ಹಾಗೂ ಬೇಸಿಗೆ ಸಂಗ್ರಹವು ಇದೀಗ ಸೋನಾಟಾದ ಅಧಿಕೃತ ಅಂತರ್ಜಾಲ ತಾಣದಲ್ಲಿ ಮತ್ತು ಭಾರತದಾದ್ಯಂತದ ರಿಟೇಲ್ ಮಾರಾಟ ಮಳಿಗೆಗಳಲ್ಲಿ ಖರೀದಿಗೆ ಲಭ್ಯವಿದೆ.