ದೆಹಲಿ: ಮಹಿಳಾ ಮೀಸಲಾತಿ ಮಸೂದೆ ಸಂಬAಧ ಕರೆದಿರುವ ವಿಶೇಷ ಸಂಸತ್ ಅಧಿವೇಶನ ರಾಜಕೀಯ ಲಾಭದಿಂದ ಕೂಡಿದೆ ಎಂದು ಎಐಸಿಸಿ ಅಧಿನಾಯಕಿ ಸೋನಿಯಾಗಾಂಧಿ ಟೀಕಿಸಿದ್ದಾರೆ. ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮಹಿಳಾ ಮೀಸಲಾತಿಗಾಗಿ ಈ ಅಧಿವೇಶನ ಕರೆಯಲಾಗಿದೆ. ಮೇಲ್ನೋಟಕ್ಕೆ ಮಹಿಳಾ ಮೀಸಲಾತಿ ಎಂದು ಹೇಳಿದರೂ ಇದರ ಉದ್ದೇಶವೇ ಬೇರೆಯದ್ದೇ ಆಗಿದೆ ಎಂದು ಕಿಡಿಕಾರಿದ್ದಾರೆ. ಕ್ಷೇತ್ರ ಪುನರ್ ವಿಂಗಡಣೆಗಾಗಿ ಈ ಅಧಿವೇಶನ ಕರೆಯಲಾಗಿದೆ. ತರಾತುರಿಯಲ್ಲಿ ಈ ಕಾರ್ಯವನ್ನು ಮಾಡಲು ಹೊರಟಿದ್ದಾರೆ. ನಾಲ್ಕು ರಾಜ್ಯಗಳ ವಿಧಾನಸಭೆ ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ತರಾತುರಿಯಲ್ಲಿ ಈ ಕೆಲಸ ಮಾಡಲು ಅವರು ಹೊರಟಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.



