ಬೆಂಗಳೂರು: ಟಿಕ್ ಟಾಕ್ ವಿಡಿಯೋ ಹಾಗೂ ರೀಲ್ಸ್ ಮಾಡಿ ಫೇಮಸ್ ಆದ ನಂತರ `ಬಿಗ್ ಬಾಸ್ ಕನ್ನಡ ಒಟಿಟಿ’ ಅವಕಾಶ ಪಡೆದುಕೊಂಡವರು ಸೋನು ಶ್ರೀನಿವಾಸ ಗೌಡ. ಈಗ ಅವರು ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. ಈ ಮಧ್ಯೆ ಅವರು ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದಾರೆ. ಅಕ್ರಮವಾಗಿ ಮಗುವನ್ನು ದತ್ತು ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಬಂಧನವಾಗಿದ್ದಾರೆ.
ಸೋನು ಅವರು ಇತ್ತೀಚೆಗೆ ಮಗುವನ್ನು ದತ್ತು ಪಡೆದಿದ್ದಾರೆ. ಆದರೆ, ಇದಕ್ಕೆ ಯಾವುದೇ ಕಾನೂನು ಕ್ರಮವನ್ನು ಪಾಲಿಸಿಲ್ಲ. ಮಗು ಇಷ್ಟವಾಯಿತು ಎಂದು ಅವಳ ಅಮ್ಮನ ಬಳಿ ಮಾತನಾಡಿ ತಮ್ಮ ಸ್ವಾಧೀನಕ್ಕೆ ತೆಗೆದುಕೊಂಡಿದ್ದರು. ಹೀಗಾಗಿ, ಅವರ ವಿರುದ್ಧ ದೂರು ದಾಖಲಾಯಿತು.ಪೊಲೀಸರು ಎಫ್ಐಆರ್ ದಾಖಲು ಮಾಡಿಕೊಂಡು ಅವರನ್ನು ಬಂಧಿಸಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಾಗಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಮಗುವನ್ನ ದತ್ತು ಪಡೆದು ಸುಳ್ಳು ಪ್ರಚಾರ ಗಿಟ್ಟಿಸಿಕೊಳ್ಳಲು ತಂತ್ರ ಹೆಣೆದಿದ್ದರು ಎಂದು ಮಕ್ಕಳ ರಕ್ಷಣಾಧಿಕಾರಿಗಳಿಂದ ದೂರು ಹಿನ್ನೆಲೆ ಬ್ಯಾಡರಹಳ್ಳಿ ಪೊಲೀಸರು ಸೋನು ಶ್ರೀನಿವಾಸ್ ಗೌಡ ಅವರನ್ನು ಬಂಧಿಸಿದ್ದಾರೆ. ಗುರುವಾರ ರಾತ್ರಿ ಪ್ರಕರಣ ದಾಖಲಿಸಿಕೊಂಡ ಬ್ಯಾಡರಹಳ್ಳಿ ಪೊಲೀಸರು ಇಂದು ಸೋನುವನ್ನು ಬಂಧಿಸಿದ್ದಾರೆ.