ಬೊಮ್ಮನಹಳ್ಳಿ: ನಾನು ನಿಮ್ಮ ಮನೆಯ ಮಗಳಾಗಿ ನಿಮ್ಮ ಸೇವೆಗಾಗಿ ಬಂದಿದ್ದಿನಿ, ನನಗೆ ಆಶೀರ್ವದಿಸಿ ಗೆಲ್ಲಿಸಿ ಎಂಬುದಾಗಿ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯರೆಡ್ಡಿ ಮನವಿ ಮಾಡಿದರು.ಅವರು ಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸೌಮ್ಯರೆಡ್ಡಿ ಭರ್ಜರಿ ರೋಡ್ ಶೋ ಹಾಗೂ ಬೈಕ್ ರ್ಯಾಲಿ ಯಲ್ಲಿ ಭಾಗವಹಿಸಿ ಮಾತನಾಡಿದರು.
24×7 ನಾನು ನಿಮ್ಮ ಸೇವೆಗಾಗಿ ಸಿದ್ದ :- ನಾನು ಬಾಲ್ಯದಿಂದಲೂ ಬಡವರು, ದಲಿತರು ಹಾಗೂ ಹಿಂದುಳಿದ ವರ್ಗದವರ ಬಗ್ಗೆ ಅಪಾರ ಅಭಿಮಾನ ಮತ್ತು ಕಾಳಜಿ ಇಟ್ಟುಕೊಂಡು ಬೆಳೆದ್ದಿನಿ, ವಿವಿಧ ಸಾಮಾಜಿಕ ಸೇವೆ ಕಾರ್ಯಗಳಲ್ಲಿ ತೊಡಗಿಸಿಕೊಂಡು ತಂದೆಯ ಅವರ ಮಾರ್ಗ ದರ್ಶನದಲ್ಲಿ ರಾಜಕೀಯ ಪ್ರವೇಶಿಸಿ ಶಾಸಕಿಯಾಗಿ ಹಲವಾರು ಜನಪರ ಕಾರ್ಯಗಳನ್ನು ರೂಪಿಸಿದ್ದಿನಿ ಈಗ ಕೇಂದ್ರದಲ್ಲಿ ನನ್ನ.
ಸೇವೆಯನ್ನು ಮಾಡಿ ರಾಜ್ಯಕ್ಕೆ ಮತ್ತು ರಾಜ್ಯದ ಜನತೆಗೆ ಆಗುತ್ತಿರುವ ಅನ್ಯಾಯಗಳಿಗೆ ನ್ಯಾಯಕೊಡಿಸಿ ರಾಜ್ಯದ ಗೌರವವನ್ನು ಎತ್ತಿಹಿಡಿದು ನಿಮ್ಮೆಲ್ಲರ ಋಣ ತೀರಿಸುತ್ತಿನಿ ಎಂಬುದಾಗಿ ಭರವಸೆಯನ್ನು ನೀಡಿದರು.ಇದೇ ಸಂದರ್ಭದಲ್ಲಿ ಹೆಚ್.ಎಸ್.ಆರ್. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಟಿ.ವಾಸುದೇವಾರೆಡ್ಡಿ, ಕೆಪಿಸಿಸಿ ಪ್ರಚಾರ ಸಮಿತಿ ಸಂಚಾಲಕ ಕೆ.ವಾಸುದೇವಾರೆಡ್ಡಿ, ಹಿರಿಯ ಮುಖಂಡರಾದ ಕೂಡ್ಲು ಬಾಬುರಾಜ್, ಬೊಮ್ಮನಹಳ್ಳಿ ಕಾಂಗ್ರೆಸ್ ಮುಖಂಡರಾದ ಉಮಾಪತಿ ಶ್ರೀನಿವಾಸ್ ಗೌಡ, ರಾಜ್ಯ ಯುವ ಕಾಂಗ್ರೆಸ್ ರಾಜ್ಯ ಸಮಿತಿ ಕಾರ್ಯದರ್ಶಿ ಡಾ.ಅನಿಲ್ ರೆಡ್ಡಿ ಇನ್ನೂ ಮುಂತಾದವರು ಹಾಜರಿದ್ದರು,