ಕನಕಪುರ: ನಗರದ ರೂರಲ್ ಪದವಿ ಕಾಲೇಜಿನಲ್ಲಿ ಸೋಮವಾರ ವಿಶೇಷ ಕಾರ್ಯಗಾರ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಮನೋಶಾಸ್ತçಜ್ಞ ಡಾಕ್ಟರ್ ಶ್ರೀಧರ್ ಮೂರ್ತಿ ಇತ್ತೀಚಿನ ದಿನಗಳಲ್ಲಿ ಮಾನವ ಸಮೂಹ ಹೆಚ್ಚಿನ ಒತ್ತಡದ ಜೀವನದಲ್ಲಿ ಸಾಗುತ್ತಿದೆ ಇದರಿಂದ ಖಿನ್ನತೆ ಸಮಸ್ಯೆಗಳು ನಿಮಾನ್ಸ್ ನಲ್ಲಿ ಹೆಚ್ಚಾಗಿ ದಾಖಲಾಗುತ್ತಿವೆ.
ಸಣ್ಣ ವಯಸ್ಸಿನ ಮಕ್ಕಳಿಗೆ ಮೊಬೈಲ್ ವ್ಯಸನಕ್ಕೆ ಹೆಚ್ಚು ದಾಸರಾಗುತ್ತಾರೆ. ರಾತ್ರಿ ೯ ರ ನಂತರ ಅಥವಾ ವಾರದಲ್ಲಿ ಒಂದು ದಿನ ಮೊಬೈಲ್ ಬಳಕೆಯನ್ನು ಕಡಿಮೆ ಮಾಡುವುದು ಉತ್ತಮ ಇದರಿ ದ ಉತ್ತಮ ನಿದ್ರೆಯನ್ನು ಪಡೆಯಬಹುದು ಎಂದರು. ಮನಸಿನ ಒತ್ತಡ ಕಡಿಮೆ ಮಾಡಲು ಯೋಗ ಧ್ಯಾನದಂತಹ ಅಭ್ಯಾಸಗಳು ಸಹಾಯ ಮಾಡುತ್ತವೆ. ಜನಸಮುದಾಯ ಮತ್ತೊಬ್ಬರ ಮೇಲಿನ ಅಸೂಯೆಯಿಂದ ಮಾನಸಿಕ ರೋಗಕ್ಕೆ ತುತ್ತಾಗುತ್ತಿರುವುದು ವಿಷಾದನೀಯವಾಗಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ರೂರಲ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ ಎಂ ಟಿ ಬಾಲಕೃಷ್ಣ, ಉಪ ಪ್ರಾಂಶುಪಾಲರಾದ ಶ್ರೀ ದೇವರಾಜು, ಪ್ರೊ. ಪುಟ್ಟರಾಜು, ಪ್ರೊ. ಸಿದ್ಧರಾಮೇಗೌಡ, ವಿಜೇಂದ್ರ, ಎ ಪಿ ಪ್ರಕಾಶ್, ಹಿರಿಯ ಉಪನ್ಯಾಸಕರು ಹಾಗೂ ಪದವಿ ಕಾಲೇಜಿನ ಮತ್ತು ಎಸ್ ಕರಿಯಪ್ಪ ಕೃಷಿ ಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ದರು.
“ರೂರಲ್ ಕಾಲೇಜಿನಲ್ಲಿ ವಿಶೇಷ ಉಪನ್ಯಾಸ”
		

		
		
		
