ದೇವನಹಳ್ಳಿ: ವೈಕುಂಠ ಏಕಾದಶಿ ದಿನವು ಹಿಂದೂ ಧರ್ಮದಲ್ಲಿ ಮಹತ್ವ ಪೂರ್ಣ ಹಾಗೂ ಧಾರ್ಮಿಕ ಸದ್ಗುಣವನ್ನು ಉಂಟು ಮಾಡುವ ಕಾರ್ಯಕ್ರವಾಗಿದ್ದು, ವಿಷ್ಣುವನ್ನು ಇಂದು ಪೂಜೆಗಿಟ್ಟು ಭಕ್ತರು ಉಪವಾಸದ ವೃತವನ್ನು ಆಚರಿಸುತ್ತಾರೆಂದು ಆಲೂರು ದುದ್ದನಹಳ್ಳಿ ಹಾಲು ಉತ್ಪಾಧಕರ ಸಹಕಾರ ಸಂಘದ ಮಾಜಿ ಅದ್ಯಕ್ಷ ಮುನೇಗೌಡ ಹೇಳಿದರು.
ದೇವನಹಳ್ಳಿ ತಾಲ್ಲೂಕು ಕುಂದಾಣ ಹೋಬಳಿಯ ಆಲೂರು ದುದ್ದನಹಳ್ಳಿ ಗ್ರಾಮದಲ್ಲಿ ವೈ ಕುಂಠ ಏಕಾದಶಿ ಪ್ರಯುಕ್ತ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಗ್ರಾಮಸ್ಥರೆಲ್ಲರು ದೇವರಿಗೆ ವಿಷೇಶ ಪೂಜೆಯಲ್ಲಿ ಭಾಗವಹಿಸಿ ಮಾತನಾಡಿ, ನಮ್ಮ ಗ್ರಾಮದಲ್ಲಿ ಧಾರ್ಮಿಕ ಹಬ್ಬ-ಹರಿದಿನಗಳಲ್ಲಿ ಸಹಸ್ತ್ರಾರು ಭಕ್ತರು ಸ್ವಾಮಿಗೆ ವಿಷೇಶ ಪೂಜೆ, ಅಭಿಷೇಕ ಸಲ್ಲಿಸುವ ಮೂಲಕ ಸಂಕಷ್ಟಗಳು ದೂರ ಮಾಡಲು ದೇವರಲ್ಲಿ ಪ್ರಾರ್ಥಿಸುತ್ತಾರೆ.
1972 ರಲ್ಲಿ ಶ್ರೀ ಆಂಜಿನೇಯ ಸ್ವಾಮಿ ನಿರ್ಮಿಸಿದ್ದು, ಶಿಥಿಲ ಹಾಗೂ ಕಿರಿದಾಗಿದ್ದ ಗರ್ಭ ಗುಡಿಯನ್ನು ಧಾನಿಗಳ ಸಹಕಾರದ ಜತೆಗೆ ಭಕ್ತರ ಇಷ್ಟಾರ್ಥದಂತೆ ರಾಜಗೋಪುರ, ದೇವಸ್ಥಾನ ಒಳಾಂಗ ಣವನ್ನು ನಿರ್ಮಿಸಲಾಗಿದೆ.ಗ್ರಾಮದಲ್ಲಿ ಸುಖ, ಶಾಂತಿ, ನೆಮ್ಮದಿ ಜತೆಗೆ ಜನ, ಜಾನುವಾರು ಹಾದಿಯಾಗಿ ಸಕಲ ಜೀವರಾಶಿಗಳು ಸಂಮೃದ್ದಿ, ಸಹಬಾಳ್ವೆಯಿಂದ ಬದುಕಲು ಭಗವಂತನ ಕೃಪೆ ಅತ್ಯವಶ್ಯಕ ವಾಗಿದೆ. ಸುತ್ತ-ಮುತ್ತಲಿನಿಂದ ಬರುವ ಭಕ್ತರಿಗೆ ಅಗತ್ಯ ಸೌಕರ್ಯಗಳನ್ನು ದೇವಸ್ಥಾನ ಆಡಳಿತ ಮಂಡಳಿಯಿಂದ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಆಲೂರು ದುದ್ದನಹಳ್ಳಿ ಶ್ರೀ ಆಂಜಿನೇಯ ಸ್ವಾಮಿ ಭಕ್ತಾದಿಗಳಾದ ಪಾರ್ವ ತಮ್ಮ, ಮಧನ್ಗೌಡ, ಪ್ರೀಯಾಂಕ, ದೇವಸ್ಥಾನದ ಪ್ರಧಾನ ಅರ್ಚಕ ನಾರಾಯಣ ಆಚಾರ್, ಸೇರಿದಂತೆ ನೂರಾರು ಭಕ್ತಾದಿಗಳು ಇದ್ದರು.