ಬೆಂಗಳೂರು: ರಾಜ್ಯದಲ್ಲಿ ನಡೆದ ಎರಡು ವಿಧಾನಸಭಾ ಕ್ಷೇತ್ರಗಳ ಉಪ-ಚುನಾವಣೆ ಮುಗಿದ ಬಳಿಕ ತೆರೆಮರೆಯಲ್ಲಿ ರಾಜಕೀಯ ಪಕ್ಷಗಳ ಲೆಕ್ಕಾಚಾರ ನಡೆಸಿದೆ.ಎರಡಕ್ಕೆ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದರೇ ಏನಾಗುತ್ತದೆ? ಎರಡಕ್ಕೆ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೋತರೆ ಏನಾಗುತ್ತದೆ?
ಬಿಜೆಪಿ ಎರಡಕ್ಕೆ ಎರಡು ಗೆದ್ದರೇ ಏನು? ಸೋತರೇ ಏನು? ಎರಡರಲ್ಲಿ ಒಂದೊAದು ಕ್ಷೇತ್ರವನ್ನು ಎರಡು ಪಕ್ಷಗಳು ಗೆದ್ದರೇ ಏನಾಗುತ್ತದೆ? ಹೀಗೆ ತೆರೆಮರೆಯಲ್ಲಿ ಉಪ- ಚುನಾವಣೆಯ ಮತದಾನದ ಬಳಿಕ ರಾಜಕೀಯ ಲೆಕ್ಕಾಚಾರ ನಡೆಯುತ್ತಿದೆ. ಅಷ್ಟಕ್ಕೂ ಉಪ-ಚುನಾವಣೆಯ ಬಳಿಕ ರಾಜಕೀಯ ಪಕ್ಷಗಳ ಲೆಕ್ಕಾಚಾರ ಹೇಗಿದೆ?
1. ರಾಜ್ಯದಲ್ಲಿ ನಡೆದ ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪ-ಚುನಾವಣೆ.
2. ಉಪ-ಚುನಾವಣೆಯಲ್ಲಿ ಮೊದಲಿಗೆ ನಿರೀಕ್ಷಿಸಿದ ಮಟ್ಟಕ್ಕೆ ಆಗದ ಮತದಾನ.
3. 2ವಿಧಾನಸಭಾ ಕ್ಷೇತ್ರಗಳಲ್ಲೂ ಆಗಿರುವುದೇ ಶೇ.68% ರಷ್ಟು ಮತದಾನ.
4. ಇದರ ಮುಂದುವರಿದ ಭಾಗವಾಗಿ ಎರಡಕ್ಕೆ ಎರಡಲ್ಲೂ ಬಿಜೆಪಿ-ಕಾಂಗ್ರೆಸ್ ಪಕ್ಷಗಳ ಅಭ್ಯರ್ಥಿಗಳ ನಡುವೆ
5. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಯ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಲಿರುವ ಅಲ್ಪಸಂಖ್ಯಾತ ಸಮುದಾಯ ಮತಗಳು.
6. ಈ ಬಾರಿ ನಡೆದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ-ಚುನಾವಣೆಯಲ್ಲಿ ಅಷ್ಟಾಗಿ ಮತಗಳ ಚಲಾವಣೆ ಮಾಡದ ಅಲ್ಪಸಂಖ್ಯಾತ ಸಮುದಾಯದವರು.
7. ಈ ನಿಟ್ಟಿನಲ್ಲಿ ಸಚಿವ ಎಸ್. ಎಸ್.ಮಲ್ಲಿಕಾರ್ಜುನ್ ಅವರ ವರ್ಚಸ್ಸು ಕೆಲಸ ಮಾಡಿದ್ಯಾ? ಎಂಬ ಅನುಮಾನ ತೆರೆಮರೆಯಲ್ಲಿ.
8. ಇದರ ಜೊತೆಗೆ ಅಭ್ಯರ್ಥಿ ಸಮರ್ಥ ಶಾಮನೂರು ಪರ ನಿರೀಕ್ಷಿಸಿದ ಮಟ್ಟಕ್ಕೆ ಮತಗಳು ಕೈ ಕೊಟ್ಟಿದೆ ಎಂಬ ಸ್ಪಷ್ಟ ಸಂದೇಶ.
9. ಇದು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ಪ್ಲಸ್ ಪಾಯಿಂಟ್ ಆಯ್ತಾ? ಎಂಬ ವಾತಾವರಣ ಸೃಷ್ಟಿಯಾಗಿದೆ.
10. ಇನ್ನು ಬಾಗಲಕೋಟೆ ವಿಚಾರದಲ್ಲಿ ಖುದ್ದು ಸಿಎಂ ಸಿದ್ದರಾಮಯ್ಯನವರೇ ಆಖಾಡಕ್ಕೆ ಎರಡ್ಮೂರು ಬಾರಿ ಇಳಿದಿರುವುದು ನೋಡಿದ್ರೆ, ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಷ್ಟಾಗಿ ಗೆಲುವೊನ ವಾತಾವರಣ ಇಲ್ಲದೇ ಇದ್ದಿದ್ದು.
11. ಈಗ ಎರಡಕ್ಕೆ ಎರಡಲ್ಲಿ ಕಾಂಗ್ರೆಸ್ ಗೆದ್ದರೇ, ಯಾವುದೇ ಬದಲಾವಣೆ ನಿರೀಕ್ಷೆ ಇಲ್ಲ.
12. ಒಂದು ವೇಳೆ ಎರಡಕ್ಕೆ ಎರಡರಲ್ಲಿ ಕಾಂಗ್ರೆಸ್ ಸೋತರೇ, ನಾಯಕತ್ವ ಬದಲಾವಣೆ ವಿಚಾರ ಮುನ್ನೆಲೆಗೆ ಬರಬಹುದು.
13. ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳು ಕಳೆಯುತ್ತಿದೆ.
14. ಈಗ ಇದು ಮುಂದಿನ ಸಾರ್ವತ್ರಿಕ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ದಿಕ್ಸೂಚಿ ಎಂದು ಮಂಡಿಸಿ, ನಾಯಕತ್ವ ಬದಲಾವಣೆ ಮುನ್ನೆಲೆಗೆ ಬರಬಹುದು.
15.ಎರಡಕ್ಕೆ ಎರಡಲ್ಲೂ ಕಾಂಗ್ರೆಸ್ ಗೆದ್ದರೇ ಯಾವುದೇ ಸಮಸ್ಯೆ ಇಲ್ಲ.
16. ನಾಯಕತ್ವ ಬದಲಾವಣೆ ಮುಗಿದ ಅಧ್ಯಾಯ ಎಂಬುದು ಚರ್ಚೆಗೆ ಬರಬಹುದು.
17. ಇನ್ನು 50:50 ಆದ್ರೆ, ಎರಡು ವಿಧಾನಸಭಾ ಕ್ಷೇತ್ರಗಳ ಪೈಕಿ, ಎರಡು ಪಕ್ಷಗಳು ತಲಾ ಒಂದೊAದು ಕ್ಷೇತ್ರದಲ್ಲಿ ಗೆದ್ದರೇ ಸಮಾಧಾನಕರ ಬಹುಮಾನ, ಎರಡು ಪಕ್ಷಕ್ಕೂ.
18. ಇನ್ನು ಬಿಜೆಪಿ ಎರಡಕ್ಕೆ ಎರಡಲ್ಲೂ ಗೆದ್ದರೇ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರರ ಸ್ಥಾನ ಮುಂದುವರಿಕೆ.
19. ಇತ್ತ ಎರಡಕ್ಕೆ ಎರಡಲ್ಲೂ ಬಿಜೆಪಿ ಸೋತರೇ, ಅಲ್ಲಿ ನಾಯಕತ್ವ ಬದಲಾವಣೆ ಚರ್ಚೆಗೆ ಮುನ್ನೆಲೆಗೆ ಬರಬಹುದು.
20. ಇನ್ನು ಎರಡು ಪಕ್ಷಗಳಲ್ಲೂ ಸದ್ಯ 50:50 ನಿರೀಕ್ಷೆಯೇ ಹೆಚ್ಚಾಗಿದ್ದು, ಮೇ 4 ರಂದು ಸ್ಪಷ್ಟ ಚಿತ್ರಣ ಸಿಗಲಿದೆ.



