ಗಾಂಧಿನಗರ: ತೇರಾಪಂಥ ಭವನದಲ್ಲಿ ಅಖಿಲ ಭಾರತೀಯ ಶ್ರೀ ಸ್ವಾಮಿ ಸಮರ್ಥ ಗುರುಪೀಠವತಿಯಿಂದ ರಾಷ್ಟ್ರೀಯ ಆಧ್ಯಾತ್ಮಿಕ ಸತ್ಸಂಗ ಮತ್ತು ಜೀವನದಲ್ಲಿ ಬರುವ ಸಮಸ್ಯೆಗಳಿಗೆ ಪರಿಹಾರ ಕುರಿತು ಆಧ್ಯಾತ್ಮಿಕ ಚಿಂತಕರಾದ ನಿತೀನ್ ಮೋರೆರವರ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಖ್ಯಾತ ಆಧ್ಮಾತ್ಮಿಕ ಚಿಂತಕರಾದ ನಿತೀನ್ಎಸ್.ಮೋರೆರವರು, ಶ್ರೀಸ್ವಾಮಿ ಸಮರ್ಥ ಗುರುಪೀಠದ ಭಕ್ತರು ದೀಪ ಬೆಳಗಿಸಿ ಉದ್ಘಾಟನೆ
ಮಾಡಿದರು. ಆದ್ಮಾತ್ಮಿಕ ಚಿಂತಕ ನಿತೀನ್ ಮೋರೆರವರು ಮಾತನಾಡಿ ಮನುಷ್ಯ ತನ್ನ ಜೀವನದಲ್ಲಿ ಆಧ್ಯಾತ್ಮಿಕವನ್ನು ಆಳವಡಿಸಿಕೊಳ್ಳಬೇಕು.
ಒಳ್ಳೆಯ ಮನಸ್ಸು, ಒಳ್ಳೆಯ ಗುಣ ಹೊಂದಿರಬೇಕು ಇದರಿಂದ ಆರೋಗ್ಯವಂತರಾಗಿ ಬಾಳಬಹುದು. ಶ್ರೀ ಸಮರ್ಥ ಗುರೂಜೀ
ರವರು ಮಾರ್ಗದರ್ಶನದಲ್ಲಿ ಸಾಗಬೇಕು. ಮಕ್ಕಳ ಶಿಕ್ಷಣ ಮತ್ತು ಮೌಲ್ಯಧಾರಿತ ಜೀವನಸಾಗಿಸಲು ದೇವರ ಮತ್ತು ಗುರುಗಳ ಆಶೀರ್ವಾದ ಇರಬೇಕು. ಮನುಷ್ಯ ಮದ್ಯಪಾನ ಮತ್ತು ಧೂಮಪಾನ ಕೆಟ್ಟ ಚಟಗಳಿಂದ ದೂರವಿರಬೇಕು.
ಆರೋಗ್ಯವಂತ ನೆಮ್ಮದ್ದಿ ಜೀವನ ಸಾಗಿಸಲು ಆಧ್ಯಾತ್ಮಿಕದ ಮೊರೆ ಹೋಗಬೇಕು. ವಿಜ್ಞಾನ ಎಷ್ಟೆ ಬೆಳದರು, ಆಧ್ಯಾತ್ಮಿಕ ಬೆರೆತರೆ ಅಭಿವೃದ್ದಿ ಪಥದ ವೇಗ ಹೆಚ್ಚುತ್ತದೆ. ಸಮಾಜದಲ್ಲಿ ಬದಲಾವಣೆ ತರಬೇಕು ಎಂದರೆ ಎಲ್ಲರು ಸಹಕಾರ ನೀಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಂದಕುಮಾರ್ ಭೋಸಲೇ, ಸುಪ್ರಿಯಾ ಕೊಳೆ, ಮಿಥುನ್ ನಿಕ್ಕಮ್, ದೀಪಕ್ ಜಾದವ್, ಸುನಿಲ ಬಂನ್ಸೋಡೆ, ಕಮಲಾ ಪಾಟೀಲ್, ಅಶೋಕ್ ಚಿತೃಕ್ ಪಾಲ್ಗೊಂದಿದ್ದರು.