ಚಳ್ಳಕೆರೆ: ಭರದಿಂದ ಸಾಗಿದ ಒತ್ತುವರಿ ತೆರವು ಕಾರ್ಯಾಚರಣೆ,ರಾಘ ವೇಂದ್ರ ಎಲೆಕ್ಟಾನಿಕ್ಸ್ಗೆ 3 ದಿನ ಗಡುವು ನೀಡಿದ ನಗರಸಭೆ ಪೌರಯುಕ್ತೆ, ಬೆಂಗಳೂರು ರಸ್ತೆಯ ರಾಘವೇಂದ್ರ ಮೆಟಲ್ ಸ್ಟೋರ್ ಗೂ ತಟ್ಟಲಿ ದೆಯೇ ಅಕ್ರಮ ಒತ್ತುವರಿ ತೆರವಿನ ಬಿಸಿ.
ನಗರದಲ್ಲಿ ಕಳೆದ ಒಂದುವಾರದಿAದ ನಡೆಯುತ್ತಿರುವ ವಾಣಿಜ್ಯ ಮಳಿಗೆಗಳ ಒತ್ತು ತುವರಿ ಹಾಗೂ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಸಾರ್ವಜನಿಕ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ನಗರಸಭೆಯ ದಿಟ್ಟ ಕ್ರಮದ ಬಗ್ಗೆ ನಗರದೆಲ್ಲೆಡೆ ವ್ಯಾಪ ಕ ಚರ್ಚೆಗಳು ನಡೆಯುತ್ತಿದ್ದು,ಮುಂದಿನ ಸರದಿ ಯಾರದ್ದು ಎಂಬ ಕುತೂಹಲ ಜನ ಸಾಮಾನ್ಯರಲ್ಲಿ ಮನೆಮಾಡಿದೆ.
ನಗರದ ಪಾವಗಡ ರಸ್ತೆಯಲ್ಲಿರುವ ಪ್ರಮುಖ ವಾಣಿಜ್ಯ ಮಳಿಗೆಯಾದ ರಾಘವೇಂದ್ರ ಎಲೆಕ್ಟಾನಿಕ್ಸ್ಗೆ’ ಮುಂಭಾಗದ ಒತ್ತುವರಿಯನ್ನು ತೆರವು ಗೊಳಿಸಲು ಅಧಿಕಾರಿಗಳು ಜೆಸಿಬಿ ಯಂತ್ರಗಳೊಂದಿಗೆ ಧಾವಿಸಿದ್ದರು. ಕಾರ್ಯಾಚರಣೆ ಆರಂಭಿಸುವಷ್ಟರಲ್ಲಿ ಸ್ಥಳಕ್ಕಾಗಮಿಸಿದ ಮಳಿಗೆಯ ಮಾಲೀಕರು, ತಾವೇ ಖುದ್ದಾಗಿ ಒತ್ತುವರಿ ತೆರವುಗೊಳಿಸಿ ಕೊಳ್ಳುವುದಾಗಿ ತಿಳಿಸಿ, ಮೂರು ದಿನಗಳ ಕಾಲಾವಕಾಶ ನೀಡುವಂತೆ ಮನವಿ ಮಾಡಿ ಕೊಂಡರು. ಪರಿಸ್ಥಿತಿಯನ್ನು ಅರಿತ ನಗರಸಭೆ ಪೌರಾಯುಕ್ತೆ ನಾಗವೇಣಿ ಅವರು, ಮಾಲೀಕರ ಕೋರಿಕೆಗೆ ಸ್ಪಂದಿಸಿ ಮೂರು ದಿನಗಳ ಅಂತಿಮ ಗಡುವು ನೀಡಿ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಮುಂದೂಡಿದರು.
ತೆರವು ಕಾರ್ಯಾಚರಣೆಯ ಬಿಸಿ ಏರುತ್ತಿದ್ದಂತೆಯೇ,ನಗರದ ಬೆಂಗಳೂ ರು ರಸ್ತೆಯಲ್ಲಿರುವ ರಾಘವೇಂದ್ರ ಮೆಟಲ್ ಸ್ಟೋರ್ ಕುರಿತಾಗಿ ಸಾರ್ವ ಜನಿಕರಿಂದ ದೂರುಗಳ ಸುರಿ ಮಳೆಯೇ ಹರಿದುಬಂದಿದೆ. ಈ ಮಳಿಗೆಯು ತಾಲ್ಲೂಕು ಪಂಚಾಯತ್ ವಾಣಿಜ್ಯ ಮಳಿಗೆಗಳ ವ್ಯಾಪ್ತಿಗೆ ಸೇರಿದ್ದ ರೂ,ಸಾರ್ವಜನಿಕರ ಓಡಾಟಕ್ಕೆ ಮೀಸಲಾದ ರಸ್ತೆಯ ಫುಟ್ಪಾತ್ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿ ದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಇದರ ಬೆನ್ನಲ್ಲೇ, ಸಂತೆಪೇಟೆ ಉದ್ಯಾನವನದ ಜಾಗವನ್ನೂ ಸಹ ಒತ್ತುವರಿ ಮಾಡಲಾಗಿದೆ ಎಂದು ಸಾರ್ವಜನಿಕರು ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ಸಾರ್ವಜನಿಕರ ದೂರುಗಳ ಕುರಿತು ಪ್ರತಿಕ್ರಿಯಿಸಿರುವ ನಗರಸಭೆ ಪೌರಾಯುಕ್ತೆ ನಾಗ ವೇಣಿ, ಸಂತೆಪೇಟೆ ಉದ್ಯಾನವನ ಹಾಗೂ ಇತರ ಒತ್ತುವರಿ ಆರೋಪಗಳಿಗೆ ಸಂಬAಧಿಸಿದAತೆ ಈಗಾಗಲೇ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಕೂಲಂಕಷ ತನಿಖೆ ನಡೆಯುತ್ತಿದ್ದು, ವರದಿ ಬಂದ ತಕ್ಷಣವೇ ಒತ್ತುವರಿದಾರರ ವಿರುದ್ಧ ಯಾವುದೇ ಮುಲಾಜಿಲ್ಲದೆ ನಿರ್ದಾ ಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಒಟ್ಟಾರೆಯಾಗಿ ಚಳ್ಳಕೆರೆ ನಗರದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಭರದಿಂದ ಸಾಗಿದ್ದು, ಮುಂಬರುವ ದಿನಗಳಲ್ಲಿ ನಿಯಮ ಉಲ್ಲಂಘಿಸಿರುವ ಇನ್ನಷ್ಟು ಮಳಿಗೆಗಳ ವಿರುದ್ಧ ಜೆಸಿಬಿ ಗರ್ಜಿಸುವ ಸಾಧ್ಯತೆ ದಟ್ಟವಾಗಿದೆ. ರಸ್ತೆ ಹಾಗೂ ಫುಟ್ಪಾತ್ ಅತಿಕ್ರಮಿಸಿ ಕೊಂಡಿರುವ ಒತ್ತುವ ರಿದಾರರ ಎದೆಯಲ್ಲಿ ನಗರಸಭೆಯ ಈ ಕಾರ್ಯಾಚರಣೆ ನಡುಕ ಹುಟ್ಟಿ ಸಿದೆ.
ಸಂತೆ ಪೇಟೆ ಉದ್ಯಾನ ವನವನ್ನು ತಾ ಲ್ಲೂಕು ಪಂಚಾಯಿತಿ ವಾಣಿಜ್ಯ ಮಳಿಗೆಯಲ್ಲಿ ಇರುವ ಬಾಡಿಗೆದಾರರು ಅಕ್ರಮ ಒತ್ತುವರಿ ಮಾಡಿ ದ್ದು,ಇದರ ಬಗ್ಗೆ ತಾಲ್ಲೂಕು ಪಂಚಾ ಯಿತಿ ಇ.ಓ ಗಮನಕ್ಕೆ ನಾವು ತಂದಿ ದ್ದು,ಈ ಬಗ್ಗೆ ಇಓ ಸ್ಥಳ ಪರಿಶೀಲನೆ ನೆಡೆಸಿದ್ದು,ವರದಿ ಬಂದ ಕೂಡಲೇ ಯಾವುದೇ ಮುಲಾಜು ಇಲ್ಲದೇ,ಅಕ್ರಮ ಒತ್ತುವರಿದಾರರ ವಿರುದ್ಧ ಕಾನೂನು ಕ್ರಮ ಹಾಗೂ ಅವರು ನಿರ್ಮಿಸಿರು ಕಟ್ಟಡ ತೆರವು ಗೊಳಿಸಿತ್ತೇನೆ ಎಂದು ನಗರಸಭೆ ಪೌರಯುಕ್ತೆ ಡಾ:ನಾಗವೇಣಿ ತಿಳಿಸಿದರು.
ಭರದಿಂದ ಸಾಗಿದೆ ಒತ್ತುವರಿ ತೆರವು ಕಾರ್ಯಾಚರಣೆ: ರಾಘವೇಂದ್ರ ಎಲೆಕ್ಟಾನಿಕ್ಸ್ಗೆ 3ದಿನ ತೆರವಿಗೆ ಗಡುವು ಅಕ್ರಮ ಒತ್ತುವರಿದಾರರಿಗೆ ನಡುಕ



