ಬೆಂಗಳೂರು: ಶ್ರೀ ಡಾ||ನಿರ್ಮಲಾನಂದನಾಥ ಶ್ರೀಗಳು ಈ ಜಗದ ಬೆಳಕು ಧರ್ಮ ಹಾಗೂ ವಿಜ್ಞಾನ ಎರೆಡೂ ಸಮಾಜದ ಒಳಿತಿಗಾಗಿ ಜೊತೆಯಾಗಿ ಸಾಗಬೇಕೆಂಬ ಚಿಂತನೆಯೊಂದಿಗೆ ಸಮಾಜದ ಒಳಿತಿಗೆ ಶ್ರಮಿಸುತ್ತಿದ್ದಾರೆ ಎಂದು ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಆದಿ ಚುಂಚನಗಿರಿಯಲ್ಲಿ ನಡೆಯುತ್ತಿರುವ ಶ್ರೀ ಡಾ||ನಿರ್ಮಲಾನಂದನಾಥ ಸ್ವಾಮೀಜಿಯವರ 11 ನೇ ಪಟ್ಟಾಭಿಷೇಕ ಮಹೋತ್ಸವ ಹಾಗೂ ಜ್ಞಾನ ವಿಜ್ಞಾನ ತಂತ್ರಜ್ಞಾನ ಮೇಳ 2024 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಶ್ರೀಗಳು ಜ್ಞಾನ ಹಾಗೂ ಪ್ರಗತಿಯ ಸಂಕೇತ, ಸದಾ ವಿಚಾರ ಕ್ರಾಂತಿಯ ಜೊತೆಗೆ ಸಾಮಾಜಿಕ ಅಭಿವೃದ್ಧಿಯತ್ತ ಗಮನ ಹರಿಸುತ್ತಿದ್ದಾರೆ ಎಂದು ಕೃಷಿ ಸಚಿವರು ಹೇಳಿದರು.
ಬದಲಾಗುತ್ತಿರುವ ವಿಜ್ಞಾನ, ತಂತ್ರಜ್ಞಾನ ಶಿಕ್ಷಣದ ಜೊತೆ ಜೊತೆಗೆ ಧರ್ಮ, ಸಂಸ್ಕಾರ, ಸಂಸ್ಕೃತಿಗಳ ವಿಕಾಸವಾಗಬೇಕೆಂಬುದು ಶ್ರೀಗಳ ಆಶಯ, ಇದಕ್ಕಾಗಿಯೇ ಜ್ಞಾನ, ವಿಜ್ಞಾನ, ತಂತ್ರಜ್ಞಾನ ಮೇಳವನ್ನು ಆಯೋಜಿಸಲಾಗಿದೆ ಅಧ್ಯಯನ ಹಾಗೂ ಅನುಭಗಳಿಂದ ಅಪಾರ ಜ್ಞಾನ ಸಂಪಾದಿಸಿರುವ ಶ್ರೀ ನಿರ್ಮಲಾನಂದನಾಥ ಶ್ರೀಗಳು ಮನುಕುಲದ ಉದ್ದಾರಕ್ಕಾಗಿ ಅದೆಲ್ಲವನ್ನು ವಿವೇಕಯುತವಾಗಿ ಬಳಸುತ್ತಿದ್ದಾರೆ. ಇತರರಿಗೂ ಜ್ಞಾನವನ್ನು ಧಾರೆ ಎರೆಯುತ್ತಿದ್ದಾರೆ ಎಂದರು.
ಧರ್ಮ ಹಾಗೂ ವಿಜ್ಞಾನಗಳ ನಡುವೆ ಅಂತರ ಇರಬಾರದು, ಎರಡೂ ಸಮಾಜದ ಒಳತಿಗೆ ಬಳಕಾಗಿ ಮುನ್ನಡೆಯಬೇಕು ಎಂಬುದು ಶ್ರೀಗಳ ನಿಲುವು ನಾವೂ ಅದನ್ನ ಪಾಲಿಸೋಣ ಎಂದು ಎನ್ ಚಲುವರಾಯಸ್ವಾಮಿ ಹೇಳಿದರು.ಕಾರ್ಯಕ್ರಮದಲ್ಲಿ ಇಸ್ರೊ ಸಂಸ್ಥೆಯು 10ನೇ ಅಧ್ಯಕ್ಷರಾದ ಎಸ್.ಸೋಮನಾಥ್ ರವರಿಗೆ ವಿಜ್ಞಾತಂ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಅಭಿನಂದನೀಯ.ಇಂತಹ ಸಮಾರಂಭಗಳು ಸ್ವಾಮಿಜಿಗಳು ಹಾಗೂ ವಿಜ್ಞಾನಿಗಳ ಸಮ್ಮಿಲನಕ್ಕೆ ಕಾರಣವಾಗಿದೆ ಎಂದ ಸಚಿವರು ಹೇಳಿದರು.
ಧರ್ಮವಿಲ್ಲದೆ ವಿಜ್ಞಾನ ಇರಬಾರದು ಹಾಗೇಯೆ ವಿಜ್ಞಾನ ಇಲ್ಲದ ಧರ್ಮವೂ ಸರಿಯಲ್ಲ. ಎರಡರ ನಡುವೆ ಹೊಂದಾಣಿಕೆ ಇರುವುದು ಉತ್ತಮ. ಹಾಗಾಗಿ ಇಂದಿನ ಮಕ್ಕಳು ಮುಂದೆ ವಿಜ್ಞಾನಿಗಳಾಗಿ ದೇಶವನ್ನು ಅಭಿವೃದ್ಧಿಗೊಳಿಸ ಬೇಕು ಎಂದು ಅವರು ಕರೆ ನೀಡಿದರು.