ನವದೆಹಲಿ: ಶ್ರೀರಾಮ ನವಮಿ ಪ್ರಯುಕ್ತ ದೇಶದ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯಗಳನ್ನು ತಿಳಿಸಿದ್ದಾರೆ. `ಮರ್ಯಾದಾ ಪುರುಷೋತ್ತಮ’ ಭಗವಾನ್ ರಾಮನ ಜೀವನವು ತ್ಯಾಗ, ತಪಸ್ಸು, ಸಂಯಮ ಮತ್ತು ಸಂಕಲ್ಪವನ್ನು ಆಧರಿಸಿದೆ ಎಂದು ಟ್ವೀಟ್ ಮಾಡುವ ಮೂಲಕ ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ರಾಮನವಮಿಯ ಶುಭಾಶಯ ತಿಳಿಸಿದ್ದಾರೆ.
ರಾಮನ ಜೀವನವು ಪ್ರತಿ ಯುಗದಲ್ಲೂ ಸ್ಫೂರ್ತಿಯಾಗಲಿದೆ. ರಾಮನ ನಡವಳಿಕೆ ನಮ್ಮ ಜೀವನದಲ್ಲಿಯೂ ಅಡಕವಾಗಬೇಕು. ದೇವರ ಆಶೀರ್ವಾದ ನಮ್ಮ ಮೇಲಿರಲಿ ಎಂದು ಹೇಳುತ್ತಾ `ನನ್ನ ಎಲ್ಲಾ ದೇಶವಾಸಿಗಳಿಗೆ ಶ್ರೀ ರಾಮ ನವಮಿಯ ಶುಭಾಶಯಗಳು’ ಎಂದು ಪ್ರಧಾನಿ ನರೇಂದ್ರ ಮೋದಿ ಶುಭ ಕೋರಿದ್ದಾರೆ.
ಹಬ್ಬದ ಸಂದರ್ಭ ಜಾಗರೂಕರಾಗಿದ್ದು ಸೋಂಕು ತಡೆಗಟ್ಟಲು ಚಿಕಿತ್ಸೆ ಮತ್ತು ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ ಎಂದು ಮನವಿ ಮಾಡಿದ್ದಾರೆ.ಜೊತೆಗೆ ದೇಶದ ರಾಷ್ಟ್ರಪತಿ ಕೂಡ ದೇಶದ ಜನತೆಗೆ ರಾಮನವಮಿಯ ಶುಭಾಶಯಗಳನ್ನು ಟ್ವಿಟರ್ ಮೂಲಕ ತಿಳಿಸಿದ್ದಾರೆ. ದೇಶದ ಸಮಸ್ತ ಜನತೆಗೆ ರಾಮ ನವಮಿಯ ಹೃತ್ಪೂರ್ವಕ ಶುಭಾಶಯಗಳು.
ಮರ್ಯಾದಾ ಪುರುಷೋತ್ತಮ ಶ್ರೀರಾಮನ ತ್ಯಾಗ ಮತ್ತು ಸೇವೆಯ ಅಮೂಲ್ಯ ಸಂದೇಶವನ್ನು ಈ ಜಗತ್ತಿಗೆ ನೀಡುತ್ತದೆ. ಎಲ್ಲಾ ಭಾರತೀಯರು ಭಗವಾನ್ ರಾಮನ ಉನ್ನತ ಆದರ್ಶಗಳನ್ನು ಮೈಗೂಡಿಸಿಕೊಂಡು ಭವ್ಯ ಭಾರತವನ್ನು ನಿರ್ಮಿಸಲು ತಮ್ಮನ್ನು ತಾವು ಸಮರ್ಪಿಸಿಕೊಳ್ಳಬೇಕೆಂದು ಎಂದು ಟ್ವೀಟ್ ಮಾಡುವ ಮೂಲಕ ಶುಭಾಶಯ ತಿಳಿಸಿದ್ದಾರೆ.
Leave a Review