This is the title of the web page
This is the title of the web page

ಶ್ರೀರಾಮ ನವಮಿ

ಚೈತ್ರ ಮಾಸದಲ್ಲಿ ಯುಗಾದಿಯ ನಂತರ 9 ದಿನಗಳ ಒಳಗೆ ಬರುವ ಹಬ್ಬವೇ ಶ್ರೀ ರಾಮನವಮಿ .ಚೈತ್ರ ಮಾಸದಲ್ಲಿ ಬರುವ ಈ ನವಮಿ ಹಬ್ಬ ತಂಪನ್ನು ಎರೆದು ಮನವನ್ನು ತಳಿದು ಹೋಗುವುದು. ಈ ಸಂದರ್ಭದಲ್ಲಿ ಎಲ್ಲಾ ಶ್ರೀ ರಾಮರ ದೇವಾಲಯಗಳಲ್ಲಿ ಒಂಬತ್ತೂ ದಿನಗಳ ಕಾಲ ಉತ್ಸವ ನಡೆಸುವರು.ಶ್ರೀ ರಾಮ ನಾಮಪಾರಾಯಣ ದಾಸರ ಶ್ರೀ ರಾಮ ಕೀರ್ತನೆಗಳು, ಭಜನೆ, ಗಾಯನ ಶ್ರೀರಾಮ ಮೂರ್ತಿಗೆ ವಿಧ ವಿಧದ ಅಲಂಕಾರಗಳು ಮೆರವಣಿಗೆ ಮುಂತಾದವು ಜರುಗುತ್ತವೆ.

ಶ್ರೀ ರಾಮನವಮಿಯು ಶ್ರೀ ರಾಮನ ಜನ್ಮದಿನ ವೆಂದು ಪರಿಗಣಿಸಲಾಗುತ್ತೆ. ಹಿಂದುಗಳಿಗೆ ಇದೊಂದು ಪವಿತ್ರವಾದ ಹಬ್ಬ.
” ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ಹರೇ ಹರೇ “” ಈ ಮಂತ್ರವನ್ನು ಜಪಿಸುವ ಪ್ರತಿ ಮನುಜನಿಗೂ ಸಕಲ ಪಾಪಗಳನ್ನು ಸಹ ಕಳೆಯುವುದೆಂದು ಒಂದು ನಂಬಿಕೆ ಹಾಗೂ ನಮ್ಮನ್ನು ರಕ್ಷಿಸುವ ಮಂತ್ರವಾಗಿದೆ ಎಂದು ಹೇಳಲಾಗುತ್ತೆ. ಈ ದಿನದಂದು ರಾಮಕೋಟಿಯನ್ನು ಸಹ ಬರೆಯುವರು.

ಎಲ್ಲಾ ದೇವಾಲಯಗಳಲ್ಲೂ ಪಾನಕ, ಮಜ್ಜಿಗೆ, ಕೋಸಂಬರಿ ಮಾಡಿ ಹಂಚಿ ಖುಷಿ ಪಡುವರು. ಒಂದು ತಿಂಗಳವರೆಗೂ ಆಚರಿಸುವ ಈ ಹಬ್ಬ ಎಲ್ಲರೂ ಕೂಡಿ ಮಾಡುವ ಒಂದು ಸಾಮೂಹಿಕ ಹಬ್ಬವಾಗಿದೆ. ಇಂದಿಗೂ ಸಹ ರಾಮ ಲಕ್ಷ್ಮಣರ ಅಣ್ಣ ತಮ್ಮಂದಿರ ಸಂಬಂಧ ಆದರ್ಶವಾಗಿ ತೆಗೆದುಕೊಳ್ಳುವ, ಜೀವಕ್ಕೆ ಜೀವ ಕೊಡುವ ಅಣ್ಣ ಹಾಕಿದ ಗೆರೆ ತಮ್ಮ ದಾಟುವುದಿಲ್ಲವೆಂದು ಹೇಳಲಾಗುವುದು.

ಶ್ರೀರಾಮನಿಗೆ ಏಕ ಬಾಣಿ ಅಂತಲೂ ಸಹ ಕರೆಯುವರು .ಬಿಟ್ಟ ಬಾಣವನ್ನು ಹಿಂದೆ ತೆಗೆದುಕೊಳ್ಳದೆ ಇನ್ನೊಂದು ಬಾಣವನ್ನು ಉಪಯೋಗಿಸದೆ ಇರುವ ಏಕ ಬಾಣೀ ಶ್ರೀ ರಾಮ, ಮರ್ಯಾದಾ ರಾಮ ,ಆದರ್ಶ ರಾಮ ಎಂತಲೂ ಕರೆಸಿಕೊಳ್ಳುವ ಶ್ರೀ ರಾಮನವಮಿಯ ನವಮಿ ನಮ್ಮ ಹಿಂದುಗಳ ಒಂದು ವಿಶಿಷ್ಟ, ವೈವಿಧ್ಯ ಪೂರ್ಣ ಹಬ್ಬವಾಗಿದೆ.

ಶ್ರೀರಾಮಸ್ಮರಣೆಯಿಂದ ರಾಮೇಶ್ವರದಿಂದ ಲಂಕೆಗೆ ಸೇತುವೆ ಕಟ್ಟಿದ ಕಥೆ ನಮಗೆಲ್ಲ ತಿಳಿದಿರುವಂತೆ ರಾಮ ನಾಮ ಬರೆದ ಪ್ರತಿ ಕಲ್ಲು ಸಹ ನೀರಿನ ಮೇಲೆ ತೇಲಿ ಸೇತುವೆಯಾಯಿತು ಅಷ್ಟೊಂದು ಶಕ್ತಿ ಈ ರಾಮನಾಮದಲ್ಲಿದೆ ಶ್ರೀರಾಮರಾಮಿತಿ ರಮೇ ರಾಮೇ ಮನೋರಮೆ ಸಹಸ್ರನಾಮ ತತ್ತುಲ್ಯಂ ರಾಮ ನಾಮ ವರಾನನೇ ರಾಮ ನಾಮ ವರಾನನ ಓಂ ನಮಃ ಇತಿ.

ಮಹಾ ವಿಷ್ಣುವಿನ 7ನೇ ಅವತಾರವಾಗಿ ಶ್ರೀರಾಮ ಜನಿಸಿದ ಈ ದಿನದಂದು ಚೈತ್ರ ಮಾಸದ ನವಮಿ ಯಂದು ಶ್ರೀರಾಮ ನನ್ನು ರಾಮನನ್ನು ಪೂಜಿಸಿದರೆ ದುಷ್ಟ ಶಕ್ತಿಯು ಸಹ ದಮನ ಆಗುತ್ತೆ. ರಾಮನವಮಿ ಯಂದು ಮುಂಜಾನೆ ಸ್ನಾನ ವಂದನೆ ಮುಗಿಸಿ ಉಪವಾಸ ಕೈಗೊಂಡು ಮರುದಿನ ಬೆಳಗಿನವರೆಗೂ ಮುಂದುವರಿಸುತ್ತಾರೆ .ಈ ರೀತಿಯ ಉಪವಾಸ ಆತ್ಮ ಶುದ್ಧಿಗೊಳಿಸುವ ಒಂದು ಅತ್ಯುತ್ತಮ ವಿಧಾನ. ಋತುಮಾನಕ್ಕೆ ತಕ್ಕಂತೆ ತಿನಿಸು ಪ್ರಸಾದ ಕೋಸಂಬರಿ ಪಾನಕ ಇದಾಗಿದೆ .

ರಾ ಎಂದರೆ ಬೆಳಗು,
ಮಾ ಎಂದರೆ ಒಳಗೆ.
ನಮ್ಮೊಳಗಿನ ಬೆಳಕು.

ಶ್ರೀರಾಮ ಜಪದಿಂದ ಆ ಭಗವಂತ ನಮ್ಮನ್ನು ಕಾಪಾಡುವ ವಿಶೇಷ ರಾಮನವಮಿಯ ದಿನ ಶ್ರೀರಾಮ ಕೋಟಿಯನ್ನು ಬರೆದರೆ ಓದುವ ಮಕ್ಕಳಲ್ಲಿ ವಿದ್ಯಾಭ್ಯಾಸವು ದ್ವಿಗುಣಗೊಳ್ಳುತ್ತದೆ ಎನ್ನುವ ಒಂದು ನಂಬಿಕೆ ಇದೆ .ಕೋಟಿ ಬರೆಯಲಿಕ್ಕಾಗದಿದ್ದರೂ ಸಹ ಒಂಬತ್ತು ನಾಮಗಳನ್ನು ಬರೆದರೆ ಎಷ್ಟೋ ಅಭಿವೃದ್ಧಿ ಕಾಣುತ್ತಾರೆ ಎಂದು ಹೇಳುವುದು .ಈ ಹಬ್ಬದ ಒಂದು ಭಾಗ ಶ್ರೀ ರಾಮನ ಆದರ್ಶಗಳನ್ನು ಬೆಳೆಸಿಕೊಂಡು ಒಂದು ಒಳ್ಳೆಯ ಉತ್ತಮ ಪ್ರಜೆಯಾಗಿ ಬಾಳುವುದೇ ಆಗಿದೆ.
“ರಾಮ ಮಂತ್ರವ ಜಪಿಸೋ ಹೇ ಮನುಜ, ಶ್ರೀರಾಮ ಮಂತ್ರ ಜಪಿಸೋ” ಎಂದು ಹಾಡುತ್ತೆ ನಮ್ಮ ಜನ್ಮವನ್ನು ಪಾವನಗೊಳಿಸೋಣ.