ರಾಜಾಜಿನಗರ:ಶ್ರೀರಾಮ ಸೇವಾ ಮಂಡಳಿ ವತಿಯಿಂದ ಶ್ರೀ ರಾಮಮಂದಿರದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂಜೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಹಾವಿಷ್ಣು ವೈಕುಂಠ ಮುಖ್ಯದ್ವಾರ ವೈಕುಂಠ ಏಕಾದಶಿಯ ದಿನದಂದು ತೆಗೆಯಲಾಗುವುದು ಅದ್ದರಿಂದ ಶ್ರೀರಾಮಮಂದಿರ ದೇವಸ್ಥಾನ ಶ್ರೀನಿವಾಸ ದೇವರು ದ್ವಾರ ನಿರ್ಮಿಸಲಾಗಿದೆ.
ಭಕ್ತರು ಶ್ರೀನಿವಾಸ ದೇವರ ಮುಖ್ಯದ್ವಾರದಿಂದ ತಲೆಬಾಗಿಸಿ ಸಾಗಿದರೆ ಸಕಲ ಸಂಕಷ್ಟಗಳು ನಿವಾರಣೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ.ಇಂದು ಬೆಳಗ್ಗೆ ಬರುವ ಭಕ್ತಾದಿಗಳಿಗೆ ವಿಶೇಷ ದರ್ಶನ ಸೇವೆ ಮತ್ತು ಶಿವನಾ ಮತ್ತು ವಿಷ್ಣುವಿನ ಮಹಿಮೆ ನೃತ್ಯರೂಪಕ ಭರತನಾಟ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.
ಇಂದು ವಿಶ್ವಾದ್ಯಂತ ಕೊರೋನ ಎಂಬ ಮಹಾಮಾರಿ ಭಯದಲ್ಲಿ ಅತಂಕದಲ್ಲಿ ಇದ್ದಾರೆ. ವೈಕುಂಠ ಏಕಾದಶಿ ಶುಭಾದಿನದಂದು ಶಿವನಾ ಸನ್ನಿಧಾನ ಮತ್ತು ಮಹಾವಿಷ್ಣುವಿನಲ್ಲಿ ಪ್ರಾರ್ಥಿಸುತ್ತ ರೋಗರುಜಿನ ಮುಕ್ತವಾಗಲಿ , ಜನರಿಗೆ ಸುಖ,ಶಾಂತಿ ಲಭಿಸಲಿ ಪ್ರಾರ್ಥಿಸುತ್ತೇನೆ ಎಂದು ಶ್ರೀರಾಮ ಸೇವಾ ಮಂಡಳಿ ಅಧ್ಯಕ್ಷರಾದ ಕೆ.ಎಸ್.ಶ್ರೀಧರ್ ರವರು ಹೇಳಿದರು.