ಕನಕಪುರ: ಭರತ ಭೂಮಿ ಕಂಡ ಆಚಾರ್ಯತ್ರಯರಲ್ಲಿ ಒಬ್ಬ ರಾದ ಆಗಿದ್ದ ಶ್ರೀ ರಾಮಾನುಜಾಚಾರ್ಯರ ಜಯಂತಿಯನ್ನು ನಗರದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.ನಗರದ ಕೋಟೆ ಹೆಬ್ಬಾಗಿಲಿನಲ್ಲಿರುವ ಶ್ರೀ ಕೋದಂಡರಾಮ ದೇವಾಲಯದಲ್ಲಿ ತ್ರಿಮತಸ್ಥ ವೈಷ್ಣವ ಬಂಧುಗಳು ಅದ್ದೂರಿ ಯಾಗಿ ಆಚರಿಸಲಾಯಿತು,
ಶ್ರೀ ರಾಮಾನುಜಾಚಾರ್ಯರ ಜಯಂತಿ ಅಂಗವಾಗಿ ಬೆಳಗ್ಗೆ ಯಿಂದಲೇ ದೇವಾಲಯದಲ್ಲಿ ವಿಶೇಷ ಪೂಜೆ, ಪುನಸ್ಕಾರ ಸೇರಿದಂತೆ ವಿವಿಧ ಧಾರ್ಮಿಕ ಆಚರಣೆಗಳನ್ನು ನೇರ ವೇರಿಸಲಾಯಿತು,ದೇವಾಲಯದ ಅಂಗಳದಲ್ಲಿ ಶ್ರೀ ರಾಮಾನುಜಾಚಾರ್ಯರ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿವಿಧ ಹೂವುಗಳಿಂದ ಅಲಂಕರಿಸಿ ಪೂಜಿಸಲಾಯಿತು, ಮಹಿಳಾ ಭಜನಾ ಮಂಡಳಿ ಸದಸ್ಯರು ಶ್ರೀ ಗಳ ಭಕ್ತಿ ಕೀರ್ತನೆಗಳನ್ನು ಹಾಡಿ ತಮ್ಮ ಭಕ್ತಿ ಪ್ರದರ್ಶಿಸಿದರು.
ದೇವಾಲಯದ ಅರ್ಚಕರು ಪೂಜೆ ನೆರವೇರಿಸಿ ಹಿಂದೂ ಧರ್ಮದ ಶ್ರೇಷ್ಠ ತತ್ವಜ್ಞಾನಿಗಳಲ್ಲಿ ಒಬ್ಬರಾಗಿದ್ದ ಶ್ರೀಗಳು ಸಮಾಜದಲ್ಲಿದ್ದ ಅಸ್ಪ್ರಶ್ಯತೆಯನ್ನು ತೊಡೆದು ಹಾಕಲು ಶ್ರಮಿಸಿದ ಮಹಾಮಹಿಮರು 11ನೇ ಶತಮಾನದಲ್ಲಿ ಸುಮಾರು 1017ನೇ ಇಸವಿಯ ಆಸುಪಾಸಿನಲ್ಲಿ ತಮಿಳು ನಾಡಿನ ಶ್ರೀ ಪೆರಂಬುದೂರಿನಲ್ಲಿ ತಮಿಳು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಇವರು ವಿಶಿಷ್ಟಾದ್ವೈತ ಸಿದ್ಧಾಂತ ವನ್ನು ಸಾರಿದ ಮಹಾನ್ ಗುರುವಾಗಿ, ತತ್ವಜ್ಞಾನಿಯಾಗಿ ಬಾಳಿದರು. ಉತ್ತರ ಮತ್ತು ದಕ್ಷಿಣ ಭಾರತದ ವೈಷ್ಣವ ಪಂಥವನ್ನು ಒಗ್ಗೂಡಿಸಿ ವಿಷ್ಣುವಿನ ಆರಾಧನೆ ಮತ್ತು ಧಾರ್ಮಿಕ ನಂಬಿಕೆ ಗಳನ್ನು ಬಲಗೊಳಿಸಿದರು, ತಮ್ಮ ಸುದೀರ್ಘ 120 ವರ್ಷಗಳ ಜೀವನದಲ್ಲಿ ವಿಷ್ಣುವನ್ನು ಪೂಜಿಸುವುದು ಮೋಕ್ಷವನ್ನು ಪಡೆಯಲು ಇರುವ ಏಕೈಕ ಮಾರ್ಗ ಎಂದು ತಿಳಿಸಿದ ಮಹಾನ್ ಚೇತನ ಎಂದರು.
ರಾಮಾನುಜಾಚಾರ್ಯರು ಸುಮಾರು 12 ವರ್ಷಗಳ ಕಾಲ ಕರ್ನಾಟಕದ ಮೇಲುಕೋಟೆಯಲ್ಲಿ ನೆಲೆಸಿ ಅಲ್ಲಿ ಅವರು ತಮ್ಮ ವಿಶಿಷ್ಟಾದ್ವೈತ ಸಿದ್ಧಾಂತವನ್ನು ಪ್ರಚಾರ ಮಾಡಿದರು ಇಂದಿಗೂ ಮೇಲುಕೋಟೆಯು ವೈಷ್ಣವ ಸಂಪ್ರದಾಯದ ಕೇಂದ್ರವಾಗಿದೆ,11ನೇ ಶತಮಾನದ ಮಹಾನ್ ಸಂತ ರಾಮಾನುಜಾಚಾರ್ಯರ 216 ಅಡಿ ಎತ್ತರದ ಪ್ರತಿಮೆ ಹೈದರಾಬಾದ್ನ ಮುಚಿಂತಲ್ನಲ್ಲಿ ಪ್ರತಿಷ್ಠಾಪಿಸಲಾಗಿದೆ ಈ ಪ್ರತಿಮೆ ಸಮಾನತೆಯ ಸಂಕೇತ ವಾಗಿದ್ದು ಭಾರತದಲ್ಲಿ ಸಮಾನತೆಯ ಸಂದೇಶವನ್ನು ಸಾರಿದ ಅವರನ್ನು ಗುರು,
ದಾರ್ಶನಿಕ ಮತ್ತು ಸಮಾಜ ಸುಧಾರಕ ಎಂದು ಇಂದಿಗೂ ಪೂಜಿಸಲಾಗುತ್ತಿದೆ,ಅವರು ಭೋದಿಸಿದ ವಿಶಿಷ್ಟಾದ್ವೈತ ಸಿದ್ಧಾಂತವು ಇಂದಿಗೂ ಭಾರತದ ಜನಪ್ರಿಯ ಅಧ್ಯಾತ್ಮ ಮಾರ್ಗವಾಗಿ ಪ್ರಕಾಶಿ ಸುತ್ತಿದೆ ಎಂದು ತಿಳಿಸಿದರು.ಶ್ರೀ ರಾಮಾನುಜಾಚಾರ್ಯರ ಮೂರ್ತಿಯನ್ನು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ನಂತರ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.