ನೆಲಮಂಗಲ: ಶ್ರೀ ಸೋಮೇಶ್ವರಸ್ವಾಮಿ ದೇವಾಲಯ ಜೀರ್ಣೋದ್ದಾರ ಸಮಿತಿ ಮಣ್ಣೆ (ಮಾನ್ಯಪುರ), ನೆಲಮಂಗಲ ತಾ. ಬೆಂಗಳೂರು ಗ್ರಾ. ಜಿಲ್ಲೆ. ಇವರ ವತಿಯಿಂದ ಗ್ರಾಮದ ಶ್ರೀ ಸೋಮೇಶ್ವರಸ್ವಾಮಿ ದೇವಾಲಯದ ಮುಂಭಾಗ ನಿರ್ಮಿಸಿರುವ ಪ್ರವೇಶ ದ್ವಾರ ಮತ್ತು ದೇವಾಲಯದ ರಾಜಗೋಪುರ ಕಳಶ ಪ್ರತಿಷ್ಠಾಪನೆಯ ಧಾರ್ಮಿಕ ಕಾರ್ಯಕ್ರಮವನ್ನು ದಿನಾಂಕ 08-12-2023ನೇ ಶುಕ್ರವಾರದಿಂದ 11-12-2023ನೇ ಸೋಮವಾರದವರೆಗೆ ಹಮ್ಮಿಕೊಳ್ಳಲಾಗಿದೆ.
ಸ್ವಸ್ತಿಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕ ವರ್ಷಂಗಳು 1945ನೇ ಶ್ರೀ ಶೋಭಕೃತು ನಾಮ ಸಂವತ್ಸರದ ಕಾರ್ತಿಕ ಮಾಸ ಏಕಾದಶಿ 08-12-2023 ಶುಕ್ರವಾರ ಬೆಳಗ್ಗೆ 09-00ಕ್ಕೆ ಗಂಗಾ ಪೂಜೆ ಪುಣ್ಯಾಹಃ ದೇವಾನಾಂದಿ ಕಾರ್ಯಕ್ರಮಗಳು ಜರುಗಲಿವೆ. ಸಂಜೆ 4-00 ಕ್ಕೆ ಚಂಡಿಕಾ ಪಾರಾಯಣ ನಂತರ ವಾಸ್ತು ಪೂಜೆ ರಾಕ್ಷಜ ಹೋಮ, ಮಹಾಮಂಗಳಾರತಿ ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ.
ದಿನಾಂಕ 09-12-2023 ಶನಿವಾರ ಬೆಳಗ್ಗೆ 07-30ಕ್ಕೆಮಹಾಗಣಪತಿ ಹೋಮ, ನವಗ್ರಹ ಹೋಮ, ಅಮುಖ್ಯ ಹೋಮ, ಕಳಾದಿ ಹೋಮ, ಚಂಡಿಕಾ ಹೋಮ, ಇತ್ಯಾದಿ ಹೋಮಗಳು ನಡೆಯಲ್ಪಡುತ್ತವೆ. ಸಂಜೆ 5-00 ಕ್ಕೆ ಬ್ರಹ್ಮ ಕಳಶ ಪ್ರತಿಷ್ಠಾಪನೆ ಮಹಾಮಂಗಳಾರತಿ ತೀರ್ಥಪ್ರಸಾದ ವಿನಿಯೋಗ ನಡೆಯುತ್ತವೆ.
ತ್ರಯೋದಶಿ 10-12-2023ನೇ ಭಾನುವಾರ ಬೆಳಿಗ್ಗೆ 07-30ಕ್ಕೆ ಶತ ರುದ್ರಾಭಿಷೇಕ ಮತ್ತು ರುದ್ರಹೋಮ, ಮಧ್ಯಾಹ್ನ 11-30 ರಿಂದ 12-15 ರವರಿಗೆ ಶುಭ ಅಭಿಜಿನ್ ಲಗ್ನದಲ್ಲಿ ಮಹಾಕುಂಭಾಭಿಷೇಕ ನಂತರ ಮಹಾಮಂಗಳಾರತಿ ತೀರ್ಥಪ್ರಸಾದ ವಿನಿಯೋಗ ಜರುಗಲಿದೆ. ದಿನಾಂಕ 11-12-2023 ನೇ ಸೋಮವಾರ ಸಂಜೆ: 7.00ಕ್ಕೆ ಕಡೇ ಕಾರ್ತಿಕಮಾಸದ ದೀಪೋತ್ಸವ ಮತ್ತು ಮಹಾಮಂಗಳಾರತಿ ತೀರ್ಥಪ್ರಸಾದ ವಿನಿಯೋಗ ಜರುಗಲಿದೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತಮಹಾಶಯರು ತಮ್ಮ ತನು-ಮನ-ಧನ ಅರ್ಪಿಸಿ ಕಾರ್ಯಕ್ರಮವು ಯಶಸ್ವಿಗೊಳಿಸಬೇಕೆಂದು ದೇವಾಲಯದ ಜೀರ್ಣೋದ್ಧಾರ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.