ಚಿಕ್ಕಬಳ್ಳಾಪುರ: ನಗರದ ಭಗತ್‍ಸಿಂಗ್ ನಗರದ ಶ್ರೀ ಧರ್ಮರಾಯಸ್ವಾಮಿ ರವರ 39ನೇ ವರ್ಷದ ಹೂವಿನ ಕರಗ ಮಹೋತ್ಸವ ನಗರದ ಪ್ರಮುಖ ಬೀದಿಗಳಲ್ಲಿ ಇಡೀ ರಾತ್ರಿ ಸಂಚರಿಸಿತು.
ಆಂಧ್ರಪ್ರದೇಶದ ಕುಪ್ಪಂನ ಶ್ರೀ ಬಾಲಾಜಿ ರವರು ಇಡೀ ರಾತ್ರಿ ನಗರದ ಬೀದಿಗಳಲ್ಲಿ ಹೂವಿನ ಕರಗ ಹೊತ್ತು ವಿವಿಧ ಭಂಗಿಗಳಲ್ಲಿ ನೃತ್ಯ ಮಾಡುತ್ತಾ ಸಂಚರಿಸಿ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಪ್ರೇಕ್ಷಕರನ್ನು ಮನರಂಜಿಸಿದರು. ರಾತ್ರಿ 10.30ಕ್ಕೆ ಶ್ರೀಧರ್ಮರಾಯರ ಕರಗಕ್ಕೆ ಆರೋಗ್ಯ ಮತ್ತು ಕುಟುಂಬ ಇಲಾಕೆ ಸಚಿವ ಡಾ.ಕೆ.ಸುಧಾಕರ್ ರವರು ಚಾಲನೆ ನೀಡಿ ಮಾತನಾಡಿದರು. ಕರಗ ಹೊತ್ತ ಶ್ರೀ ಬಾಲಾಜಿ ರವರು ನಗರದಲ್ಲಿ ಪ್ರಮುಖ ವೃತ್ತಗಳಲ್ಲಿ ಜನರ ಮನರಂಜನೆಗಾಗಿ ಏರ್ಪಡಿಸಿದ್ದ ಆಕೇಷ್ಟ್ರಗಳ ವೇದಿಕೆಯಲ್ಲಿ ನೃತ್ಯ ಮಾಡಿ ಜನಮನ ಗೆದ್ದರು.
ಕಾರು, ಮ್ಯಾಕ್ಸಿಕ್ಯಾಬ್ ಚಾಲಕರ ಸಂಘ, ಮತ್ತು ಊರಿನ ಹಲವು ಕಡೆ ಅನ್ನಸಂತರ್ಪಣೆ, ಪಾನಕ ಹೆಸರುಬೇಳೆ ಹಂಚುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕರಗದ ಪ್ರಯುಕ್ತ ನಗರದ ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಕರಗದ ಮುಂದುವರೆದ ಭಾಗವಾಗಿ ಇಂದು ಸೋಮವಾರ ಮದ್ಯಾಹ್ನ 1 ಗಂಟೆಗೆ ಭುವನೇಶ್ವರಿ ವೃತ್ತದಲ್ಲಿ ಶ್ರೀ ಬಾಲಾಜಿ ರವರು ಒನಕೆ ಕರಗದ (ಓಕುಳಿ ಕರಗ) ಹೊತ್ತು ನೃತ್ಯಮಾಡಿ ನೆರೆದಿದ್ದ ಅಪಾರ ಸಂಖ್ಯೆ ಭಕ್ತರುಗಳನ್ನು ರಂಜಿಸಿದರು.
ಈ ಸಂದರ್ಭದಲ್ಲಿ ರವಿ, ರಾಜಣ್ಣ, ಶ್ರೀಧರ್, ಮುಕೇಶ್, ಸುರೇಶ್, ಅರವಿಂದ, ಅಪ್ಪು, ರಾಜು ಮುಂತಾದವರು ಪಾಲ್ಗೊಂಡಿದ್ದರು.
Leave a Review