ನೆಲಮಂಗಲ: ತಾಲೂಕಿನ ಸೋಂಪುರ ಹೋಬಳಿಯ ದಕ್ಷಿಣಕಾಶಿ ಶಿವಗಂಗೆಯಲ್ಲಿ ಸಂಕ್ರಾಂತಿ ಉತ್ತರಾಯಣದಲ್ಲಿ ಶ್ರೀ ಗಂಗಾದರೇಶ್ವರಸ್ವಾಮಿಯ ಉತ್ಸವಾದಿಗಳು ನಡೆದರೆ ಹೊಸ ವರ್ಷದ (ಯುಗಾದಿ)ಯ ಹೊನಲಿನಲ್ಲಿ ತಾಯಿ ಶ್ರೀಹೊನ್ನಾದೇವಿ(ಸ್ವರ್ಣಾಂಭ) ಉತ್ಸವಗಳು ಸಂಭ್ರಮದಿಂದ ಪ್ರತಿ ವರ್ಷ ನಡೆಯುತ್ತಾ ಬಂದಿವೆ.
ಹುಣ್ಣಿಮೆಯಿಂದ ಆರತಿ. ಮಡೆ, ರಥೋತ್ಸವ, ತೇಪ್ಪೋತ್ಸವ ಪ್ರಸಿದ್ದ ಎಡೇಹಳ್ಳಿ ವಾನ ದಿನನಿತ್ಯ ಉತ್ಸವಗಳು ನಡೆದು ಜಾತ್ರೆಯ ಕೊನೆಯ ಭಾಗವಾಗಿ ರೈತರ ವಾನ ವಿಜೃಂಭಣೆ ಯಿಂದ ನಡೆಯಿತು.ಸುತ್ತ ಮುತ್ತಲ ಗ್ರಾಮದ ಶಿವಗಂಗೆ, ಕಂಬಾಳು, ಮಾಚನಹಳ್ಳಿ, ಅವ್ವೇರಹಳ್ಳಿ, ಬರಗೇನಹಳ್ಳಿ, ಗಂಗೇನಪುರ, ಗೌರಪುರ ಹಾಗೂ ಶಿವಾನಂದನಗರ ಇನ್ನಿತರ ಗ್ರಾಮಗಳ ರೈತರು ಸೇರಿ ಶ್ರೀನಟರಾಜಸ್ವಾಮಿ ಮತ್ತು ಶ್ರೀಗಂಗಾಧರೇಶ್ವರಸ್ವಾಮಿಯ ದರ್ಬಾರ್ ಅಲಂಕಾರ್ ಹಾಗೂ ಶ್ರೀಹೊನ್ನಾದೇವಮ್ಮನವರ ಹೂವಿನ ಪಲ್ಲಕ್ಕಿ ಉತ್ಸವ(ರೈತರವಾನ) ವಿದ್ಯುತ್ ದೀಪಾಲಂಕಾರ.
ಹೂವಿನ ಅಲಂಕಾರ ಬಾಣಬಿರುಸು ಮತ್ತು ಮದ್ದಿನ ಪ್ರದರ್ಶನ ತಮಟೆ ವಾದ್ಯಗಳೊಂದಿಗೆ ರಸಮಂಜರಿ ಕೀಲುಕುದುರೆ ಹಾಗೂ ವಿವಿಧ ಸಾಂಸ್ಕೃತಿಕ ಕರ್ಯಕ್ರಮ ಗಳೊಡನೆ ಶಿವಗಂಗೆಯ ರಾಜ ಬೀದಿಗಳಲ್ಲಿ ಉತ್ಸವವು ವಿಜೃಂಭಣೆ ಯಿಂದ ನಡೆಯಿತು.ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಬಿ.ಪ್ರಭುದೇವ, ಗ್ರಾಪಂ ಸದಸ್ಯರಾದ ಮನುಪ್ರಸಾದ್, ದೀನೇಶನಾಯಕ, ನಾರಾಯಣಸ್ವಾಮಿ, ಸಂತೋಷಕುಮಾರ, ಶ್ರೀನಿವಾಸ, ಸಮಿತಿ ಅದ್ಯಕ್ಷ ಎಸ್.ನಾಗೇಂದ್ರ ಪ್ರಸಾದ್, ಸದಸ್ಯರು ಗಳಾದ ಎಸ್.ಸಿ.ಹೊನ್ನಗಂಗಶೆಟ್ಟಿ, ಚಂದ್ರಕುಮಾರ, ಬಿ.ಮನೋಹರ್, ಎಂ.ಶೇಖರ್, ನಾಗೇಶನಾಯ್ಕ. ಎಸ್.ಟಿ.ಸಿದ್ದರಾಜು, ಎಚ್.ರಂಗೇಗೌಡ, ಎಸ್.ಜಿ.ಗಂಗಾಧರ್, ರಮೇಶ್, ಮುನಿರಾಜು, ಮಹೇಶ ಸೇರಿದಂತೆ ಸಾವಿರಾರು ಭಕ್ತಾಧಿಗಳು ಪಾಲ್ಗೊಂಡಿದ್ದರು.