ಐತಿಹಾಸಿಕ “ಹಂಪಿ” ಎಂದರೆ ನೆನಪಾಗುವುದು ಶ್ರೀ ಕೃಷ್ಣದೇವರಾಯರ ರಾಜ್ಯ ಭಾರದ ಚಿತ್ರಗಳು ಅಂದರೆ ವಜ್ರ ವೈಡೂರ್ಯಗಳನ್ನು ಬೀದಿ ಬದಿಗಳ ಸಂತೆಯಲ್ಲಿ ಮಾರುವ ದೃಶ್ಯಗಳು, ಅಲ್ಲದೆ ಹಂಪಿ ಬೆಳವಣಿಗೆಗೆ ಕಾರಣ ಕರ್ತರಾದ ಶ್ರೀ ಕೃಷ್ಣದೇವರಾಯರ ಹೆಸರಾಗಲಿ ಅಥವಾ ಅವರ ಭಾವಚಿತ್ರವಾಗಲಿ ಅವರ ಸ್ಮರಣೆ ಮಾಡದೆ ಅವರ ಬಗ್ಗೆ ಕಿಂಚಿತ್ ಗೌರವ ಸಮರ್ಪಣೆ ಮಾಡದ ಹಂಪಿ ಉತ್ಸವವನ್ನು ಮಾಡುತ್ತಿರುವ ಕರ್ನಾಟಕ ಸರ್ಕಾರಕ್ಕೆ ದಿಕ್ಕಾರವಿರಲಿ ಎಂದು ಕರ್ನಾಟಕ ರಾಜ್ಯ ಸಮಗ್ರ ಬಲಿಜ ವೇದಿಕೆಯ ರಾಜ್ಯಾಧಕ್ಷರಾದ ಶ್ರೀ ಮುನಿಕೃಷ್ಣರವರು ಗುಡುಗಿದ್ದಾರೆ.
ಫೆಬ್ರವರಿ 2 ರಿಂದ 4ರ ವರೆಗೆ ನಡೆಯಲಿರುವ ಹಂಪಿ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳ ಆಹ್ವಾನ ಪತ್ರಿಕೆಯಲ್ಲಿ ಅಥವಾ ಕಾರ್ಯಕ್ರಮ ಪಟ್ಟಿಯಲ್ಲಿಯೇ ಆಗಲಿ ಯಾವುದೇ ಆಗಲಿ ಈ ಸಂಸ್ಕೃತಿ ಇಲ್ಲದ ಇಲಾಖೆಗೆ ಸ್ವಲ್ಪವಾದರೂ ಜವಾಬ್ದಾರಿ ಇದಿದ್ದರೆ ಇಂತಹ ಆಚಾತುರ್ಯ ಮಾಡುತ್ತಿರಲಿಲ್ಲ ಹಂಪಿ ಉತ್ಸವದ ಆಹ್ವಾನ ಪತ್ರಿಕೆಯಲ್ಲಿ 1336 ರಿಂದ 1660 ರವರೆಗೂ ರಾಜ್ಯಾವನ್ನಾಳಿದ ವಿಜಯನಗರದ ಸಾಮ್ರಾಜ್ಯದ ಚಕ್ರವರ್ತಿ ಶ್ರೀ ಕೃಷ್ಣದೇವರಾಯರ ಚಿತ್ರವಾಗಲಿ ಅವರ ಹೆಸರಾಗಲಿ ಹಾಕದೆ ನಿರ್ಲಕ್ಷಿಸಿದೆ.
ಇಂತಹ ಅಸಂಸ್ಕೃತ ಇಲಾಖೆಯ ಸೇವೆಯನ್ನು ಪ್ರತಿಯೊಬ್ಬರೂ ಖಂಡಿಸಲೇ ಬೇಕು ಅಷ್ಟೇ ಅಲ್ಲ ಕಾಟಾಚಾರಕ್ಕೆ ಮಾಡುತ್ತಿರುವ ಉತ್ಸವ ಇದಾಗಿದೆ ಇದಕ್ಕೆ ಬಹಿಷ್ಕಾರದ ರುಚಿ ತೋರಿಸಬೇಕಾಗಿದೆ ಎಂದು ಗೌರವ ಸಲಹೆಗಾರರು ಚಿತ್ರದುರ್ಗದ ಸೂರ್ಯನಾರಾಯಣರವರು ಮನವಿ ಮಾಡಿದ್ದಾರೆಇದನ್ನು ಹಂಪಿ ಉತ್ಸವಕ್ಕೂ ಮೂದಲೂ ಮತ್ತೆ ಶ್ರೀ ಕೃಷ್ಣದೇವರಾಯರ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಪ್ರಕಟಿಸಬೇಕು ಹಾಗೂ ಶ್ರೀ ಕೃಷ್ಣದೇವರಾಯರ 108 ಅಡಿ ವಿಗ್ರಹವನ್ನು ಸ್ಥಾಪಿಸಬೇಕು ಎಂದು ಮಂಡ್ಯ ನಾಗರಾಜು ಆಗ್ರಹಿಸಿದರು.
ಹಂಪಿ ಉತ್ಸವ 2024 ರಲ್ಲಿ ಕರ್ನಾಟಕ ಸರ್ಕಾರ ಹಮ್ಮಿಕೊಂಡಿರುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕರ್ನಾಟಕ ಸಾಮ್ರಾಜ್ಯ ಚಕ್ರೇಶ್ವರ, ಕರ್ನಾಟಕ ರಾಜ್ಯಾ ರಮಾರಮಣ, ದಕ್ಷೀಣಾಪಥೇಶ್ವರ, ಕರ್ನಾಟಕ ಸಾಮ್ರಾಜ್ಯ ಲಕ್ಷ್ಮೀಮನೋಹರ, ಕರ್ನಾಟಕ ಸಾಮ್ರಾಜ್ಯ ಕ್ಷಿತಿಜನಾಥ ಎನಿಸಿ ವಿಶ್ವ ಭಾವಕೈತೆಯ ಸಾಂಕೇತಿಕ ಚಕ್ರವರ್ತಿ ಎನಿಸಿಕೊಂಡಿರುವ “ಶ್ರೀ ಕೃಷ್ಣದೇವರಾಯರ” ಬಗ್ಗೆ ಸಾಹಿತ್ಯ ವಿಮರ್ಶೆಗಳಾಗಲಿ ರೂಪಕಗಳಾಗಲಿ ಇಲ್ಲದೆ ಕೊನೆಗೆ ಅವರ ಭಾವಚಿತ್ರಗಳನ್ನು ಬಳಸದೆ ಅವರ ಹೆಸರಿನಲ್ಲಿ ವೇದಿಕೆಗಳನ್ನು ರಚಿಸದೆ ಮಾಡುತ್ತಿರುವ “ಹಂಪಿ ಉತ್ಸವ” 2024 ಕರ್ನಾಟಕ ರಮಾರಮಣನನ್ನೇ ಮರೆತು ಮಾಡುತ್ತಿರುವ ವಿಷಾದನೀಯ ಎಂದು ಇತಿಹಾಸ ಸಂಶೋಧಕ ಜಗಳೂರು ಕೆ.ರವಿಕುಮಾರ್ ರವರು ವಿಷಾದ ವ್ಯಕ್ತಪಡಿಸಿದ್ದಾರೆ.