ನೆಲಮಂಗಲ: ಕರ್ನಾಟಕವನ್ನು ಅತಿ ದೀರ್ಘಕಾಲ ಆಳಿದ ಗಂಗರಸರ ರಾಜಧಾನಿಯಾಗಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆ, ನೆಲಮಂಗಲ ತಾಲೂಕಿನ ಮಣ್ಣೆ (ಮಾನ್ಯಪುರ) ಗ್ರಾಮದಲ್ಲಿ ದಿನಾಂಕ. 28/04/2004 ರಿಂದ 05/05/2004 ರವರೆಗೆ ಶ್ರೀ ಮಣ್ಣೆಮ್ಮದೇವಿ ಮಹಾಸಂಸ್ಥಾನ ಜಾತ್ರಾ ಮಹೋತ್ಸವ ನಡೆಯಲಿದೆ.
ದಿ. 28-04-2024ನೇ ಭಾನುವಾರ ಶ್ರೀ ಗಣೇಶನ ದೇವಾಲಯದಲ್ಲಿ ರುದ್ರಾಭಿಷೇಕ ಹಾಗೂ ಶ್ರೀ ಮಣ್ಣೆಮ್ಮದೇವಿಗೆ ರುದ್ರಾಭಿಷೇಕ ಹಾಗೂ ದುರ್ಗಾಹೋಮ ವಿಶೇಷ ಪೂಜೆ, ಸಂಜೆ ಶ್ರೀ ಚೌಡೇಶ್ವರಿ ಅಮ್ಮನವರಿಗೆ ಬೆಲ್ಲದಾರತಿ ಉತ್ಸವ. ದಿ. 29-04-2024ನೇ ಸೋಮವಾರ ಶ್ರೀ ಸೋಮೇಶ್ವರ ಸ್ವಾಮಿಗೆ ಬೆಲ್ಲದಾರತಿ ಮತ್ತು ಉತ್ಸವ, ದಿ.30-04-2004ನೇ ಮಂಗಳವಾರ ಶ್ರೀ ಮಣ್ಣೆಮ್ಮ ದೇವಿಗೆ ಮಡಿಲಕ್ಕಿ ಸೇವೆ ಹಾಗೂ ಸಂಜೆ ವಿಜೃಂಭಣೆಯ ಮೆರವಣಿಗೆಯೊಂದಿಗೆ ಉಪಾರ ಉತ್ಸವ,
ದಿ. 01-05-2024ನೇ ಬುಧವಾರ ಶ್ರೀ ಮಣ್ಣೆಮ್ಮದೇವಿಗೆ ಮಡಿಲಕ್ಕಿ ಸೇವೆ ಹಾಗೂ ಸಂಜೆ ಬಲಿ ಪೂಜೆ ಮತ್ತು ರಾಶಿ ಉತ್ಸವ, ದಿ. 02-05-2024ನೇ ಗುರುವಾರ ಶ್ರೀ ಮಣ್ಣೆಮ್ಮದೇವಿಗೆ ಲಿಂಗಧಾರಣೆಯೊಂದಿಗೆ ತವರುಮನೆ ಮಣ್ಣೆ ಗ್ರಾಮದ ಮಡಿಲಕ್ಕಿ ಸೇವೆ, ದಿ. 03-05-2024ನೇ ಶುಕ್ರವಾರ ಶ್ರೀ ಮಣ್ಣೆಮ್ಮ ದೇವಿಗೆ ತಂಬಿಟ್ಟಿನ ಆರತಿ ಹಾಗೂ ಅಗ್ನಿಕೊಂಡೋತ್ಸವ ಮತ್ತು ಸಂಜೆ ಕುಕ್ಕಲಮ್ಮ ದೇವಿಗೆ ತಂಬಿಟ್ಟಿನ ಆರತಿ ಉತ್ಸವ,
ದಿ. 04-05-2024ನೇ ಶನಿವಾರ ಮಧ್ಯಾಹ್ನ 3 ಗಂಟೆಗೆ ಗಂಗರಸರ ನಾಡಿನ ದೇವತೆ ಶ್ರೀ ಮಣ್ಣೆಮ್ಮದೇವಿ ಅಮ್ಮನವರ ಮಹಾ ರಥೋತ್ಸವ, ದಿ.05-05-2024ನೇ ಭಾನುವಾರ ಶ್ರೀ ಆಂಜನೇಯ ಸ್ವಾಮಿಗೆ ಬೆಲ್ಲದಾರತಿ ಹಾಗೂ ಶ್ರೀ ಮಣ್ಣೆಮ್ಮದೇವಿಯ ಉತ್ಸವ ಜರುಗಲಿದೆ ಎಂದು ಶ್ರೀ ಮಣ್ಣೆಮ್ಮದೇವಿ ಕಮಿಟಿಯ ಪ್ರಕಟಣೆ ತಿಳಿಸಿದೆ.