ನೆಲಮಂಗಲ: ತಾಲೂಕಿನ ಬೂದಿಹಾಳ್ ಗ್ರಾಮದಲ್ಲಿರುವ ಶ್ರೀ ಕರಗದಮಹಾಲಕ್ಷ್ಮೀ ಮಾರಮ್ಮ ದೇವಾಲಯದ ಆವರಣದಲ್ಲಿ ಎಸ್ಟಿಬಿ ಎಂಟರ್ ಪ್ರೈಸಸ್ ಮಾಲೀಕರಾದತಿಮ್ಮಬೈಲಮ್ಮ ಬೈಲಪ್ಪ ಹಾಗೂ ಹೇಮಲತಾಆನಂದ್ಕುಮಾರ್ ದಂಪತಿಗಳಿಂದ ಲೋಕ
ಕಲ್ಯಾಣಾರ್ಥವಾಗಿ ಮಂಡಿಗೆರೆ ಶ್ರೀಜಯರಾಮ್ಶಾಸ್ತ್ರೀಗಳ ನೇತೃತ್ವದಲ್ಲಿ ಎರೆಡುದಿನಗಳ ಕಾಲ ಶ್ರೀನವ ಚಂಡಿಮಹಾಯಾಗವನ್ನು ಹಮ್ಮಿಕೊಳ್ಳಲಾಗಿದ್ದು ಶುಕ್ರವಾರ ಮಧ್ಯಾಹ್ನ ಮಹಾಯಾಗದ ಪೂರ್ಣಾಹುತಿಯನ್ನು ಸಂಭ್ರಮ ಸಡಗರದಿಂದ ಅದ್ದೂರಿಯಾಗಿ ನೆರವೇರಿಸಲಾಯಿತು.
ಶ್ರೀನವಚಂಡಿ ಮಹಾಯಾಗದ ಸೇವಾಕರ್ತ ಶ್ರೀಎಸ್ಟಿಬಿ ಎಂಟರ್ ಪ್ರೈಸಸ್ ಮಾಲೀಕ ಗ್ರಾಪಂ ಸದಸ್ಯ ಬಿ. ಆನಂದ್ಕುಮಾರ್ ಮಾತನಾಡಿ ಕೆಲವರ್ಷಗಳಲ್ಲಿ ಎದುರಾಗಿದ್ದ ಕೋವಿಡ್ ಕೊರೋನಾ ಮಹಾಮಾರಿ ನಮ್ಮ ದೇಶವನ್ನಷ್ಟೇ ಅಲ್ಲದೆ ಇಡೀ ಪ್ರಪಂಚವನ್ನು ತಲ್ಲಣಗೊಳಿಸಿತ್ತು, ಪ್ರಸ್ತುತ ಸಮಾಜ ಅನಾರೋಗ್ಯದಿಂದ ಚೇತರಿಕೆಯನ್ನು ಕಾಣುತ್ತಿದೆ, ಆದ್ದರಿಂದ ಸಮಾಜದ ಯಾವುದೇ ಜೀವ
ರಾಶಿಗೂ ಯಾವುದೇ ರೀತಿಯ ಸಮಸ್ಯೆಗಳು ಎದುರಾಗಬಾರದು,
ಸಮಾಜದಲ್ಲಿ ಸದಾ ಶಾಂತಿ ನೆಲಸಬೇಕು ಎಂಬ ಸಂಕಲ್ಪದಿಂದ ಲೋಕಕಲ್ಯಾರ್ಣಾರ್ಥವಾಗಿ ಹಾಗೂ ಬೂದಿಹಾಳ್ ಗ್ರಾಮದ ಅಭಿವೃದ್ದಿ ಮತ್ತು ಗ್ರಾಮದ ಪ್ರತಿಯೊಬ್ಬರಿಗೂ ಭಗವಂತ ಆರೋಗ್ಯಾಯುಷ್ಯ ನೀಡಲಿ ಮತ್ತು ಪರಸ್ಪರರಲ್ಲಿ ಪ್ರೀತಿಗೌರವಗಳು ಹೆಚ್ಚಿ ಗ್ರಾಮದಲ್ಲಿ ಸದಾ ಶಾಂತಿ ನೆಲಸಲಿ ಎಂಬ ಕಾರಣಕ್ಕೆ ನಮ್ಮ ಕುಟುಂಬದ ವತಿಯಿಂದ ನವಚಂಡಿ ಮಹಾಯಾಗವನ್ನು ನೆರವೇರಿಸಲಾಗಿದೆ, ಗ್ರಾಮಸ್ಥ
ರೆಲ್ಲರ ಸಹಕಾರದಿಂದಾಗಿ ಪೂಜೆ ಪೂರ್ಣಾಹುತಿ ಅತ್ಯಂತ ವಿಜೃಂಭಣೆಯಿಂದ ಸಂಪನ್ನವಾಗಿದ್ದು ನಮ್ಮೆಲ್ಲರಿಗೂ ಸಂತಸವಾಗಿದೆ ಎಂದರು.
ಪ್ರದಾನ ಅರ್ಚಕ ಮಂಡಿಗೆರೆ ಜಯ ರಾಮ್ ಶಾಸ್ತ್ರೀ ಮಾತನಾಡಿ ನವಚಂಡಿ ಮಹಾತಾಯಿ ಸಕಲ ಜೀವರಾಶಿಗೂ ಒಳಿತನ್ನು
ಮಾಡಲಿ, ಮಹಾಯಗ ಅಪರಿಮಿತವಾದದ್ದು,9 ಪಾರಾಯಣ 700 ಶ್ಲೋಕಗಳನ್ನು ಪಠಣಮಾಡುವ ಮೂಲಕ ಮಹಾಚಂಡಿಯನ್ನು ಸಂಪನ್ನಗೊಳಿಸಲಾಗಿದೆ, ಲೋಕದ ಒಳಿಗಾಗಿ ಎರೆಡು ದಿನಗಳಕಾಲ ವಿಶೇಷವಾದ ಪೂಜೆಯನ್ನು ಆಯೋಜಿಸಲಾಗಿತ್ತು, ಸಪ್ತಶತಿ ಆರಾಧನೆ ಮಾಡಲಾಗಿದೆ , ಎಲ್ಲಾ ಹೋಮ ಹವನಗಳಿಗಿಂತ ನವಚಂಡಿ ಹೋಮ ವಿಶೇಷ ಮತ್ತು ಶ್ರೇಷ್ಟವಾದದ್ದು, ಮಾರ್ಕಂಡೇಯ ಪುರಾಣದಲ್ಲಿ ದೇವಿ ಆರಾಧನೆ ಒಂದು ಭಾಗವಾಗಿದೆ ಎಂದರು.
ಗಣ್ಯರುಭಾಗಿ: ಕ್ಷೇತ್ರದ ಶಾಸಕ ಎನ್.ಶ್ರೀನಿವಾಸ್, ವಿಧಾನಪರಿಷತ್ ಮಾಜಿ ಸದಸ್ಯ ಇ.ಕೃಷ್ಣಪ್ಪ, ನೆಲಮಂಗಲ ಯೋಜನಾ ಪ್ರಾಧಿಕಾರದ ಮಾಜಿಅಧ್ಯಕ್ಷ ಎನ್.ಪಿ.ಹೇಮಂತ್ಕುಮಾರ್, ಬೂದಿಹಾಳ್ ಗ್ರಾಪಂ ಮಾಜಿಅಧ್ಯಕ್ಷ ಎಂ.ಕೆ.ನಾಗರಾಜು, ಎಪಿಎಂಸಿ ನಿರ್ದೇಶಕ ವಿ.ಗೋವಿಂದರಾಜು, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ಕೆ.ತಿಮ್ಮೇಗೌಡ್ರು ರಾಜಣ್ಣ, ರೈತರ ಹಿತರಕ್ಷಣಾ ಸಮಿತಿ ಕಾರ್ಯದರ್ಶಿ ಲಕ್ಷ್ಮಿವೆಂಕಟೇಶ್, ವಕೀಲರ ಸಂಘದ ಉಪಾಧ್ಯಕ್ಷ ಬಿ.ಟಿ.ಮೋಹನ್ಕುಮಾರ್, ಗ್ರಾಪಂ ಸದಸ್ಯೆ ಶೈಲಜಾ ಮಂಜುನಾಥ್ಗೌಡ ಮತ್ತಿತರರು ಪೂಜೆಯಲ್ಲಿ ಭಾಗವಹಿಸಿದ್ದರು.
ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಬಿ.ಟಿ.ಮಂಜುನಾಥ್ಗೌಡ, ತಿಮ್ಮೇಗೌಡ್ರು, ಮಾರೇಗೌಡ್ರು, ವೇಣುಗೋಪಾಲ್, ಮಾಜಿ ಬಿಟಿ ನಟರಾಜ್, ವೇಣುಗೋಪಾಲ್. ಯಶಸ್ಗೌಡ ಸೇರಿದಂತೆ ಗ್ರಾಮಸ್ಥರು ಪೂಜೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವೀಗೊಳಿಸಿದರು.ಕಾರ್ಯಕ್ರಮದ ಅಂಗವಾಗಿ ಶ್ರೀಕರಗದಮಹಾಲಕ್ಷ್ಮಿ ಮಾರಮ್ಮ ದೇವಿಗೆ ವಿವಿಧ ಪುಷ್ಪಗಳಿಂದ ವಿಶೇಷವಾಗಿ ಅಲಂಕಾರಮಾಡಲಾಗಿದ್ದು ವಿವಿಧ ಬಗೆಯ ಪುಷ್ಪಗಳು ಭಕ್ತರನ್ನು ಆಕರ್ಷಿಸಿತು, ಪೂಜೆಯಲ್ಲಿ ಭಾಗವಹಿಸಿದ್ದ ಭಕ್ತಾಧಿಗಳಿಗೆ ಹೇಮಲತಾ ಆನಂದ್ಕುಮಾರ್ ಕುಟುಂಬದವರಿಂದ ಅನ್ನಸಂಥರ್ಪಣೆಯನ್ನು ಹಮ್ಮಿಕೊಳ್ಳಲಾಗಿತ್ತು.