ವಿಶ್ವ ಗುಬ್ಬಚ್ಚಿ ದಿನದ ಸಂದರ್ಭದಲ್ಲಿ ಟಿವಿಎಸ್ ಮೋಟರ್ ಕಂಪನಿ ಮತ್ತು ಸುಂದರಂ ಕ್ಲೇಟನ್ ಲಿಮಿಟೆಡ್ನ ಸಮಾಜ ಸೇವಾ ಅಂಗವಾದ ಶ್ರೀನಿವಾಸನ್ ಸರ್ವಿಸಸ್ ಟ್ರಸ್ಟ್ (ಎಸ್ಎಸ್ಟಿ) ಗುಬ್ಬಚ್ಚಿ ಸಂರಕ್ಷಣೆಯ ಪ್ರಯತ್ನಗಳನ್ನು ಮುಂದುವರಿಸಲು ಹೆಮ್ಮೆ ಪಡುತ್ತದೆ.
ಶ್ರೀನಿವಾಸನ್ ಸರ್ವಿಸಸ್ ಟ್ರಸ್ಟ್ (ಎಸ್ಎಸ್ಟಿ), ಗುಬ್ಬಚ್ಚಿ ಸಂರಕ್ಷಣೆ ಕಾರ್ಯಕ್ರಮವನ್ನು ಕಳೆದ ವರ್ಷದ 100 ಗ್ರಾಮಗಳಿಂದ ಪ್ರಸಕ್ತ ಹಣಕಾಸು ವರ್ಷ ಹೆಚ್ಚುವರಿಯಾಗಿ 200 ಗ್ರಾಮಗಳಿಗೆ ವಿಸ್ತರಿಸಿದೆ. ತಮಿಳು ನಾಡು, ಕನಾಟಕ, ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶದ ಹಳ್ಳಿಗಳಿಗೆ ಈ ಕಾರ್ಯಕ್ರಮವನ್ನು ಎಸ್ಎಸ್ಟಿ ವಿಸ್ತರಿಸಿದೆ.
ಗುಬ್ಬಚ್ಚಿಗಳಿಗೆ ಅನುಕೂಲಕರವಾದ ವಾತಾವರಣವನ್ನು ಸೃಷ್ಟಿಸಲು ಈ ರಾಜ್ಯಗಳ ಕುಟುಂಬಗಳಿಗೆ ಆಯಾ ಅಗತ್ಯಗಳನ್ನು ಪೂರೈಸುವ (ಕಸ್ಟಮೈಸ್ಡ್) ಸಾವಿರಾರು ಗೂಡುಗಳನ್ನು ಒದಗಿಸುವ ಮೂಲಕ ಸಂರಕ್ಷಣಾ ಕಾರ್ಯಕ್ರಮವನ್ನು ವಿಸ್ತರಿಸಲಾಗಿದೆ. ಗುಬ್ಬಚ್ಚಿ ಸಂರಕ್ಷಣೆ ಕಾರ್ಯಕ್ರಮದ ಅಂಗವಾಗಿ ಶ್ರೀನಿವಾಸನ್ ಸರ್ವಿಸಸ್ ಟ್ರಸ್ಟ್ (ಎಸ್ಎಸ್ಟಿ), ಸಮುದಾಯ ಸಭೆಗಳು ಮತ್ತು ರ್ಯಾಲಿಗಳನ್ನು ನಡೆಸುತ್ತಿದೆ.
ಗುಬ್ಬಚ್ಚಿ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲು ಸ್ಥಳೀಯ ಸ್ವಯಂಸೇವಕರು ಮತ್ತು ಸಮುದಾಯದ ಸದಸ್ಯರ ಬೆಂಬಲ ಪಡೆದು ಇವುಗಳನ್ನು ನಡೆಸಲಾಗುತ್ತಿದೆ. ಇಷ್ಟು ಮಾತ್ರವಲ್ಲದೆ, ಶ್ರೀನಿವಾಸನ್ ಸರ್ವಿಸಸ್ ಟ್ರಸ್ಟ್ (ಎಸ್ಎಸ್ಟಿ), ಸಣ್ಣ ಪ್ರಾಯದಲ್ಲೇ ಮಕ್ಕಳಲ್ಲಿ ಗುಬ್ಬಚ್ಚಿ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಶಾಲೆಗಳಲ್ಲಿ ಚಿತ್ರ ಬಿಡಿಸುವ ಸ್ಪರ್ಧೆಗಳನ್ನು ಸಂಘಟಿಸಿತ್ತು.
ಶ್ರೀನಿವಾಸನ್ ಸರ್ವಿಸಸ್ ಟ್ರಸ್ಟ್ (ಎಸ್ಎಸ್ಟಿ) ಈ ಗ್ರಾಮಗಳಲ್ಲಿ ಗುಬ್ಬಚ್ಚಿ ಸ್ವಯಂಸೇವಕರನ್ನು ಗುರುತಿಸಿದೆ. ಗುಬ್ಬಚ್ಚಿ ಸಂರಕ್ಷಣೆ ಉಪಕ್ರಮಗಳಲ್ಲಿ ಸ್ಥಳೀಯ ಜನ ಸಮುದಾಯದ ಭಾಗವಹಿಸುವಿಕೆಗೆ ಈ ಸ್ವಯಂಸೇವಕರು ಉತ್ತೇಜನ ನೀಡುತ್ತಾರೆ. ಜೀವ ವೈವಿಧ್ಯ ರಕ್ಷಣೆಯ ಮಹತ್ವದ ಕುರಿತು ಜನ ಜಾಗೃತಿ ಮೂಡಿಸಲು ಶ್ರೀನಿವಾಸನ್ ಸರ್ವಿಸಸ್ ಟ್ರಸ್ಟ್ (ಎಸ್ಎಸ್ಟಿ) ಬದ್ಧವಾಗಿದೆ. ಮತ್ತು ತಳ ಮಟ್ಟದ ಈ ಪ್ರಯತ್ನಗಳು ಗುಬ್ಬಚ್ಚಿ ಸಂರಕ್ಷಣೆಯಲ್ಲಿ ಗಣನೀಯ ವ್ಯತ್ಯಾಸವನ್ನು ತರಬಲ್ಲದು ಎನ್ನುವುದು ಎಸ್ಎಸ್ಟಿ ನಂಬಿಕೆಯಾಗಿದೆ.