ಹರಿದಾಸ ಸಾಹಿತ್ಯದ ಪ್ರವರ್ತಕರಲ್ಲಿ ಶ್ರೀ ನರಹರಿತೀರ್ಥರ ನಂತರದಲ್ಲಿ ಬರುವ ಪ್ರಮುಖ ಯತಿಗಳು ಅನೇಕ ರಚನೆಗಳನ್ನು ದಾಸ ಸಾಹಿತ್ಯವನ್ನು ಕರ್ನಾಟಕ ಸಂಗೀತವನ್ನು ಜೊತೆಗೆ ಹಿಂದುಸ್ಥಾನಿ ಸಂಗೀತವನ್ನು ಪ್ರಭಾವಿತರನ್ನಾಗಿ ಮಾಡಿದವರಲ್ಲಿ ಶ್ರೀ ಶ್ರೀಪಾದರಾಜರು ಪ್ರಮುಖರು. ಶ್ರೀಪದ್ಮನಾಭ ತೀರ್ಥರ ಪರಂಪರೆಯಲ್ಲಿ ಬಂದ ಶ್ರೀ ಶ್ರೀಪಾದರಾಜರ ಆಶ್ರಮದ ಹೆಸರು ಶ್ರೀ ಲಕ್ಷ್ಮಿ ನಾರಾಯಣತೀರ್ಥರು ಎಂದು ಅವರ ಅಂಕಿತ ನಾಮ ರಂಗವಿಠ್ಠಲ ಎಂಬುದಾಗಿ ಇದೆ.
ಶ್ರೀಪಾದರಾಜರನ್ನು ಧ್ರುವರಾಜರ ಅಂಶವೆಂದು ಹೇಳಲಾಗುತ್ತದೆ. ಕೃಷ್ಣ ದೇವರಾಯನ ಗುರುಗಳಾದ ಶ್ರೀ ವ್ಯಾಸರಾಜರು ಶ್ರೀಪಾದರಾಜರ ಶಿಷ್ಯರು
ಚನ್ನಪಟ್ಟಣ ತಾಲ್ಲೂಕಿನ ಅಬ್ಬೂರು ಗ್ರಾಮದಲ್ಲಿ ಕ್ರಿ.ಶ 1406ರಲ್ಲಿ ಶೇಷಗಿರಿಯಪ್ಪ ಮತ್ತು ಗಿರಿಯಮ್ಮನವರಲ್ಲಿ ಮಗನಾಗಿ, ಲಕ್ಷ್ಮಿ ನಾರಾಯಣ ಎಂಬ ಹೆಸರಿನಿಂದ ಹುಟ್ಟಿದ ಶ್ರೀಪಾದರಾಜರ ಉಪನಯನವು ಕ್ರಿ.ಶ 1411ರಲ್ಲಿ ಆಗುತ್ತದೆ.
ಅವರ ಬುದ್ಧಿವಂತಿಕೆ ಮತ್ತು ಜ್ಞಾನವನ್ನು ಮೆಚ್ಚಿ ಶ್ರೀ ಸ್ವರ್ಣವರ್ಣತೀರ್ಥರು ಕ್ರಿ.ಶ 1412ರಲ್ಲಿ ಸನ್ಯಾಸ ನೀಡಿ ಶ್ರೀ ಲಕ್ಷ್ಮಿ ನಾರಾಯಣ ತೀರ್ಥರೆಂದು ನಾಮಕರಣ ಮಾಡುತ್ತಾರೆ. ಮುಂದೆ ಶ್ರೀ ವಿಭುದೇಂದ್ರತೀರ್ಥರಲ್ಲಿ ಅಧ್ಯಯನ ಮಾಡಿ ತಮ್ಮ ಜ್ಞಾನ ಹಾಗೂ ವಿದ್ವತ್ತಿನ ಘನತೆಗೆ ಕೊಪ್ಪರ ಕ್ಷೇತ್ರದಲ್ಲಿ ಶ್ರೀಪಾದರದಲ್ಲಿ ರಾಜರು ಎಂಬ ಶ್ರೀಪಾದರಾಜರೆಂಬ ಬಿರುದನ್ನು ಪಡೆಯುತ್ತಾರೆ.
ಶ್ರೀಪಾದರಾಜರ ಆರಾಧ್ಯ ಗೋಪಿನಾಥ ದೇವರಾಗಿದ್ದರು. ಮಧ್ವಾಚಾರ್ಯರ ನಂತರದಲ್ಲಿ 8ನೇ ಯತಿಗಳಾಗಿದ್ದ ಇವರು ಅನೇಕ ಗ್ರಂಥಗಳ ರಚನೆಯನ್ನು ಕೀರ್ತನೆಗಳು ಸುಳಾದಿಗಳನ್ನು ರಚಿಸಿದ್ದಾರೆ ಅದರಲ್ಲಿ ಮಧ್ವನಾಮ, ಭ್ರಮರಗೀತ, ನರಸಿಂಹ ದಂಡಕ, ವೇಣುಗೀತ ಇವುಗಳು ಬಹಳ ಪ್ರಸಿದ್ದಿಯನ್ನು ಪಡೆದಿವೆ. ಅವರ ಕೃತಿಗಳಲ್ಲಿ ನಮಗೆ ಉಪಲಬ್ಧವಿರುವುದು “ವಾಗ್ವಜ್ರ” ಎಂಬ ಕೃತಿ ಮಾತ್ರ ಲಭ್ಯವಿದೆ. ಆದರೆ ಅನೇಕ ಕೀರ್ತನೆಗಳು ಇಂದಿಗೂ ಪ್ರಚಲಿತವಾಗಿವೆ.
ಅವರಿಗೆ ಸ್ವಪ್ನದಲ್ಲಿ ರಂಗವಿಠ್ಠಲ ಆಂಕಿತವು ದೊರೆತಿರುತ್ತದೆ. ಪಂಢರಾಪುರಕ್ಕೆ ಹೋದಾಗ ಕನಸಿನಲ್ಲಿ ಭೀಮರತಿ ಪುಷ್ಪವತಿ ಸಂಗಮದಲ್ಲಿ ಒಬ್ಬ ಪಾಮಡವ ರಾಜ ಪೂಜೆ ಮಾಡಿ ಭೂಗತ ಮಾಡಿರುವ ಪ್ರತಿಮೆ ಇದೆ ಅದನ್ನು ತೆಗೆಸಿ ಸ್ವೀಕರಿಸು ಎಂಬಂತೆ ಹೇಳುತ್ತಾರೆ. ಅದನ್ನು ತೆಗೆಸಿದಾಗ ಎರಡು ಸಂಪುಟಗಳು ದೊರೆಯುತ್ತವೆ ಅವುಗಳಲ್ಲಿ ಒಂದರಲ್ಲಿ ರಂಗವಿಠ್ಠಲ ಮೂರ್ತಿ ದೊರೆತರೆ ಇನ್ನೊಂದು ಸಂಪುಷ್ಟವನ್ನು ತೆರೆಯಲಿಕ್ಕೆ ಬರುವುದಿಲ್ಲ, ಇನ್ನೊಮ್ಮೆ ಪೂಜೆ ಮಾಡುತ್ತಿರುವಾಗ ಶ್ರೀ ವ್ಯಾಸರಾಜರಿಗೆ ಆ ಸಂಪುಷ್ಟವನ್ನು ತೆರೆಯಲು ಕೊಟ್ಟಾಗ ಆ ಸಂಪುಷ್ಟದಲ್ಲಿ ಸುಂದರವಾದ ವೇಣುಗೋಪಾಲ ದೇವರ ಮೂರ್ತಿ ದೊರೆಯುತ್ತದೆ. ಆ ಮೂರ್ತಿಯನ್ನು ಶ್ರೀಪಾದರಾಜರು ವ್ಯಾಸರಿಗೆ ನೀಡುತ್ತಾರೆ.
ಶ್ರೀಪಾದರಾಜರ ಮಹಿಮೆ ಅಪಾರ . ಶ್ರೀ ಶ್ರೀಪಾದರಾಜರು ಗೋಪಿನಾಥ ದೇವರಿಗೆ ದಿನ ನಿತ್ಯವೂ 64 ಭಕ್ಷಗಳನ್ನು ತಯಾರಿಸಿ ನೈವೇದ್ಯ ಮಾಡುತ್ತಿದ್ದರು. ಆಗಿನ ಕಾಲದಲ್ಲಿ ಈ ರೀತಿಯ ವೈಭವ ರಾಜರಿಗೆ ಮಾತ್ರ ಇದ್ದಿತು. ಕುಚೇಷ್ಟೆ ಮಾಡುವ ಜನರಿಗೆ ಒಮ್ಮೆ ಶ್ರೀಪಾದರಾಜರ 64 ಭಕ್ಷ್ಯ ನೈವೇದ್ಯ ಮಾಡುವ ಸಂಕಲ್ಪವನ್ನು ತಪ್ಪಿಸಲು ಯಾವುದೋ ಊರಿಗೆ ಪ್ರಯಾಣ ಬಳಸಬೇಕೆಂದು ಕೇಳಿಕೊಂಡಾಗ ನಡುವೆ ಕಾಡಿನಲ್ಲಿ ತಂಗುವ ಪ್ರಸಂಗ ಬಂದಿತು.
ಆದರೆ ಕುಚೇಷ್ಟೆ ಮಾಡುವವರಿಗೆ ಉತ್ತರ ಎಂಬಂತೆ ಅಂದು ಒಬ್ಬ ರಾಜ ಪ್ರಯಾಣ ಮಾಡುತ್ತಾ ಶ್ರೀಪಾದರಾಜರು ಇದ್ದ ಕಾಡಿಗೆ ಬಂದಂತಹವನಾಗಿ 64 ಭಕ್ಷ್ಯಗಳ ಭಿಕ್ಷೆ ಮಡಿಸಿ ಗುರುಗಳ ಸಂಕಲ್ಪವು ನಿರ್ವಿಘ್ನವಾಗಿ ನಡೆಯುವಂತೆ ಭಗವಂತ ನೆರವೇರಿಸುತ್ತಾನೆ. ಇಂದಿಗೂ ಕೂಡ ಶ್ರೀಪಾದರಾಜರ ಸ್ಮರಣೆ ಮಾಡಿದವರು ಹಾಗೂ ಅವರು ಬರೆದ ಮಧ್ವನಾಮ ಪಾರಾಯಣ ಮಾಡಿದವರು ಉಪವಾಸ ಇರುವದಿಲ್ಲ ಎಂಬ ಬಲವಾದ ನಂಬಿಕೆ ಇದೆ.
ಅವರ ಸಮಕಾಲೀನ ಯತಿಗಳು ಶ್ರೀ ಬ್ರಹ್ಮಣ್ಯತೀರ್ಥರು, ಶ್ರೀ ವ್ಯಾಸರಾಜರು, ಶ್ರೀ ವಿಭುದೇಂದ್ರ ತೀರ್ಥರು ಇವರಲ್ಲಿದೆ ಶ್ರೀ ಪುರಂದರ ದಾಶರು, ಸಾಳುವ ನರಸಿಂಹ ಭೂಪಾಲ, ಸೋಮನಾಥ ಕವಿ ಮೊದಲಾದವರು ಅಗಿದ್ದಾರೆ. ಒಮ್ಮೆ ಕ್ರಿ.ಶ 1468ರಲ್ಲಿ ಸಾಳುವ ನರಸಿಂಹನಿಗೆ ಬ್ರಹ್ಮಹತ್ಯಾ ದೋಷವು ಬಂದಿರುತ್ತದೆ ಅದನ್ನು ಶ್ರೀಪಾದರಾಜರು ನಿವಾರಣೆಯನ್ನು ಮಾಡುತ್ತಾರೆ.
ದಾಸ ಸಾಹಿತ್ಯಕ್ಕೆ ಶ್ರೀಪಾದರಾಜರ ಕೊಡುಗೆ ಬಹಳ ಮಹತ್ವದ್ದಾಗಿದೆ. ಶ್ರೀಪಾದರಾಜರು ಕ್ರಿ.ಶ 1504ರಲ್ಲಿ ಮುಳಬಾಗಿಲಿನಲ್ಲಿ ನರಸಿಂಹತೀರ್ಥದ ಬಳಿಯಲ್ಲಿ ಜೇಷ್ಠಮಾಸದ ಶುಕ್ಲ ಪಕ್ಷದ ತ್ರಯೋದಶಿಯಂದು ವೃಂದಾವನಸ್ಥರಾಗಿರುತ್ತಾರೆ.