ಹುಬ್ಬಳ್ಳಿ: ನಾಳೆ ರಾಜ್ಯದಲ್ಲಿ ಲೋಕಸಭಾ ಚುನಾವಣೆ ಸಂಬಂಧ 2ನೇ ಹಂತದ ಮತದಾನ ನಡೆಯಲಿದೆ.ಮತದಾನಕ್ಕಾಗಿ ಎಲ್ಲಾ ರೀತಿಯ ಸಿದ್ಧತೆ ನಡೆದಿದ್ದು, ಮತಗಟ್ಟೆಯತ್ತ ಮತಗಟ್ಟೆ ಅಧಿಕಾರಿಗಳು ಇಂದು ತೆರಳುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ ಮಸ್ಟರಿಂಗ್ ಕಾರ್ಯ ಆರಂಭ ಆಗಿದ್ದು. ಲ್ಯಾಮಿಂಗ್ಟನ್ ಶಾಲೆಯಲ್ಲಿ ಸೆಂಟ್ರಲ್ ಕ್ಷೇತ್ರದ ಮಸ್ಟರಿಂಗ್ ಕಾರ್ಯ ಆರಂಭವಾಗಿದೆ.
ಶಾಲೆಯತ್ತ ಬರುತ್ತಿರುವ ಚುನಾವಣಾ ನಿಯೋಜನಾ ಅಭ್ಯರ್ಥಿಗಳು. ಧಾರವಾಡ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರದಲ್ಲಿ ಮಸ್ಟರಿಂಗ್ ಕಾರ್ಯ ಆರಂಭಿಸಲಾಗಿದೆ. ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ಶಂಕರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಕುಂದಗೋಳ.ವಿಧಾನ ಸಭಾ ಕ್ಷೇತ್ರದಲ್ಲಿ ಹರಿಭಟ್ಟ ಪಿಯು ಕಾಲೇಜು ಕುಂದಗೋಳ, ಹುಬ್ಬಳ್ಳಿ – ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದಲ್ಲಿ ವಿದ್ಯಾನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಹುಬ್ಬಳ್ಳಿ,
ಧಾರವಾಡ ಗ್ರಾಮೀಣ ವಿಧಾನ ಸಭಾ ಕ್ಷೇತ್ರದಲ್ಲಿ ಬಾಷಲ್ ಮಿಷನ್ ಇಂಗ್ಲಿಷ್ ಮೀಡಿಯಂ ಮಾಧ್ಯಮ ಪ್ರೌಢಶಾಲೆ, ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದಲ್ಲಿ ಆರ್ ಎಲ್ ಎಸ್ ಪದವಿ ಪೂರ್ವ ಕಾಲೇಜು ಧಾರವಾಡ, ಕಲಘಟಗಿ ವಿಧಾನಸಭಾ ಕ್ಷೇತ್ರದಲ್ಲಿ ಸರ್ಕಾರಿ ಹಿರಿಯ ಗಂಡು ಮಕ್ಕಳ ಶಾಲೆಯಲ್ಲಿ ಮಸ್ಟರಿಂಗ್ ಎಂಟು ವಿಧಾನಸಭಾ ಕ್ಷೇತ್ರಗಳ ಒಟ್ಟು 1901 ಮತಗಟ್ಟೆಗಳ ಮಸ್ಟರಿಂಗ್ ಕಾರ್ಯ ನಡೆದಿದೆ.
ನಿಯೋಜಿತ ಸಿಬ್ಬಂದಿಗೆ 4602 ಬ್ಯಾಲೆಟ್, 2429 ಕಂಟ್ರೋಲ್ ಯುನಿಟ್, 2559 ವಿವಿಪ್ಯಾಟ್ಗಳ ವಿತರಣೆ ಸಹ ಮಾಡಲಾಗಿದೆ.ಚುನಾವಣೆ ಕಾರ್ಯಕ್ಕೆ 200 ಕೆಎಸ್ ಆರ್ ಟಿಸಿ ಬಸ್, 65 ಕ್ರುಷರ್, 110 ಮ್ಯಾಕ್ಸಿ ಕ್ಯಾಬ್ ವ್ಯವಸ್ಥೆ ಮಾಡಲಾಗಿದೆ.1935 ಪಿಆರ್ ಓ, 1935 ಎಪಿಆರ್ ಓ, 3870 ಪಿಓ, 346 ಎಮ್ ಓ ಸಿಬ್ಬಂದಿ ನಿಯೋಜನೆ ಮಾಡಿದ್ದು, ಒಟ್ಟು 8086 ಚುನಾವಣೆ ಕರ್ತವ್ಯ ನಿರ್ವಹಿಸಲಿರುವ ಸಿಬ್ಬಂದಿ ಮಸ್ಟರಿಂಗ್ ಕೇಂದ್ರ ಬಳಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.