ಬೆAಗಳೂರು: ಹೊಸ ತಲೆಮಾರಿನ ಬ್ಯಾಂಕಿಂಗ್ ತಂತ್ರಜ್ಞಾನ ಪೂರೈಸುತ್ತಿರುವ ಜೀಟಾ ( Zeta), ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ ಚೀಮಸಂದ್ರ ಸರ್ಕಾರಿ ಶಾಲೆಯಲ್ಲಿ ತನ್ನ ಎರಡನೇ ಕಂಪ್ಯೂಟರ್ ಪ್ರಯೋಗಾಲಯ ಆರಂಭಿಸಿದೆ.
ಡಿಜಿಟಲ್ ಸೇರ್ಪಡೆ ಮತ್ತು ತಂತ್ರಜ್ಞಾನ ಆಧಾರಿತ ಶಿಕ್ಷಣ ಮುನ್ನಡೆಸುವ ತನ್ನ ಬದ್ಧತೆಯನ್ನು ಈ ಮೂಲಕ ಜಾರಿಗೊಳಿಸಿದೆ. ಶೈಕ್ಷಣಿಕ ಅಂತರ ಕಡಿಮೆ ಮಾಡಲು ಶ್ರಮಿಸುತ್ತಿರುವ ಸರ್ಕಾರಿಯೇತರ ಸಂಸ್ಥೆಯಾಗಿರುವ ಪ್ರಾಜೆಕ್ಟ್ ಶಿಕ್ಷಾದ ಸಹಯೋಗದಲ್ಲಿ ಕೈಗೊಳ್ಳಲಾಗಿರುವ ಈ ಉಪಕ್ರಮವು, ಡಿಜಿಟಲ್ ಕಲಿಕಾ ಮೂಲಸೌಲಭ್ಯ ಬಲಪಡಿಸುವ ಮತ್ತು ಸರ್ಕಾರಿ ಶಾಲೆಗಳಲ್ಲಿ ಡಿಜಿಟಲ್ ಶಿಕ್ಷಣ ಲಭ್ಯತೆ ಹೆಚ್ಚಿಸುವ ಗುರಿ ಹೊಂದಿದೆ.
ಕಂಪ್ಯೂಟರ್ ಲ್ಯಾಬ್ನ ಈ ವಿಸ್ತರಣಾ ಕಾರ್ಯಕ್ರಮವು ೨೦೨೪ರ ಸೆಪ್ಟೆಂಬರ್ ೫ ರಂದು ಚಿನ್ನಗೇನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪ್ರಾರಂಭವಾದ ಜೀಟಾದ ಮೊದಲ ಪ್ರಾಜೆಕ್ಟ್ ಶಿಕ್ಷಾ ಪ್ರಯೋಗಾಲಯದ ಯಶಸ್ಸು ಆಧರಿಸಿದೆ. ಇದು ೩೦೦ ವಿದ್ಯಾರ್ಥಿಗಳನ್ನು ಮೊದಲ ಬಾರಿಗೆ ಔಪಚಾರಿಕ ಕಂಪ್ಯೂಟರ್ ಶಿಕ್ಷಣಕ್ಕೆ ಪರಿಚಯಿಸಿತು. ಆ ಶಾಲೆಯ ವಿದ್ಯಾರ್ಥಿಗಳು ದೂರ -ನಿಯಂತ್ರಿತ ಕಾರುಗಳಂತಹ ಸೃಜನಶೀಲ ಯೋಜನೆಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಕಾರ್ಯಾಗಾರಗಳಲ್ಲಿ ಭಾಗ ವಹಿಸಿದ್ದಾರೆ. ಡಿಜಿಟಲ್ ಸಾಕ್ಷರತೆ ಮತ್ತು ಆತ್ಮವಿಶ್ವಾಸದಲ್ಲಿ ಗಮನಾರ್ಹ ಸುಧಾರಣೆ ಪ್ರದರ್ಶಿಸಿದ್ದಾರೆ.
ಜೀಟಾದ ಚೀಫ್ ಪೀಪಲ್ ಆಫೀಸರ್ ಶುಭಯು ಸೇನ್ಗುಪ್ತಾ ಅವರು ಮಾತನಾಡಿ, “ಡಿಜಿಟಲ್ ಸೇರ್ಪಡೆಯು ಪ್ರಗತಿಗೆ ಗಮನಾರ್ಹ ಕೊಡುಗೆ ನೀಡುತ್ತದೆ. ಪ್ರಾಜೆಕ್ಟ್ ಶಿಕ್ಷಾದಂತಹ ಉಪಕ್ರಮಗಳು ವಹಿವಾಟನ್ನು ಮೀರಿ ತಂತ್ರಜ್ಞಾನದ ಪ್ರಯೋಜನಗಳನ್ನು ವಿಸ್ತರಿಸಲು ನಮಗೆ ಅವಕಾಶ ಮಾಡಿಕೊಡುತ್ತವೆ” ಎಂದು ಹೇಳಿದ್ದಾರೆ. ಪ್ರಾಜೆಕ್ಟ್ ಶಿಕ್ಷಾ-ದ ಸ್ಥಾಪಕಿ ಮತ್ತು ನಿರ್ದೇಶಕಿ ನೇಹಾ ಚಾವ್ಲಾ ಅವರು ಪ್ರತಿಕ್ರಿಯಿಸಿ- “ಪ್ರಾಜೆಕ್ಟ್ ಶಿಕ್ಷಾದಲ್ಲಿ, ನಾವು ನಿರ್ಮಿಸುವ ಪ್ರತಿಯೊಂದು ಡಿಜಿಟಲ್ ಲ್ಯಾಬ್- ಕಲಿಕೆಯಲ್ಲಿ ಸಮಾನತೆ ನಿಟ್ಟಿನಲ್ಲಿ ಸಾಗುವ ದೃಢ ಹೆಜ್ಜೆಯಾಗಿದೆ ಎಂದು ಹೇಳಿದ್ದಾರೆ.



