ಚಿಕ್ಕಬಳ್ಳಾಪುರ, ಸೆ ೧೬: ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷರಾದ ಡಾ. ಹೆಚ್. ಕೃಷ್ಣರವರು ಹಾಗೂ ಆಯೋಗದ ಸದಸ್ಯರು ಮಂಗಳವಾರ ಚಿಕ್ಕಬಳ್ಳಾಪುರ ನಗರದ ಸರ್ಕಾರಿ ಪ್ರೌಢ ಶಾಲೆಗೆ ಭೇಟಿ ನೀಡಿ ಅಲ್ಲಿನ ಅಡುಗೆ ತಯಾರಿಸುವದಸ್ತಾನು, ಆಹಾರ ಮಾಡುವ ವಿಧಾನ, ಶುಚಿರುಚಿ, ಅಡುಗೆಕೊಠಡಿಯನ್ನು ಪರಿಶೀಲನೆ ಮಾಡಿ ಮಕ್ಕಳ ಜೊತೆ ಸಂವಾದ ನಡೆಸಿದರು.ನಂತರ ಸೆಂಟ್ಜೋಸೆಫ್ ಶಾಲೆಗೆ ಭೇಟಿ ನೀಡಿಅಲ್ಲಿನ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿಆಯೋಗದ ಸದಸ್ಯರಾದ ಲಿಂಗರಾಜಕೋಟೆ, ಸುಮಂತ್ರಾವ್, ಮಾರುತಿ, ಎಂ.ದೊಡ್ಡಲಿAಗಣ್ಣವರ, ಎ.ರೋಹಿಣಿ ಪ್ರಿಯ ಮತ್ತು ಕೆ.ಎಸ್.ವಿಜಯಲಕ್ಷ್ಮೀರವರು ಉಪಸ್ಥಿತರಿದ್ದರು.