ಕೆ.ಆರ್.ಪುರ: ಕ್ರೀಡೆಗಳು ಯುವಜನರಲ್ಲಿ ಶಿಸ್ತು, ದೈಹಿಕ ಕ್ಷಮತೆ ಹಾಗೂ ತಂಡಭಾವನೆ ಬೆಳೆಸುವಲ್ಲಿ ಮಹತ್ವದ ಪಾತ್ರವಹಿಸುತ್ತವೆ ಎಂದು ಶಾಸಕಿ ಮಂಜುಳಾ ಲಿಂಬಾವಳಿ ಹೇಳಿದರು.
ಮಹದೇವಪುರ ಕ್ಷೇತ್ರದ ಹೂಡಿಯಲ್ಲಿ ಮಾಜಿ ಸಚಿವ ಅರವಿಂದ ಲಿಂಬಾವಳಿ ಹುಟ್ಟುಹಬ್ಬದ ಅಂಗವಾಗಿ ಬಿಜೆಪಿ ಮಹದೇವಪುರ ಗ್ರಾಮಾಂತರ ಮಂಡಲ ಹಾಗೂ ಹೂಡಿ ಸ್ಪೋರ್ಟ್್ಸ ಕ್ಲಬ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಹೊನಲು ಬೆಳಕಿನ ಪುರುಷ ಹಾಗೂ ಮಹಿಳಾ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.
ಕಬಡ್ಡಿ ನಮ್ಮ ದೇಶದ ಪರಂಪರೆಯ ಕ್ರೀಡೆಯಾಗಿದ್ದು, ಗ್ರಾಮೀಣ ಭಾಗದಿಂದ ಅಂತರ
ರಾಷ್ಟಿçÃಯ ಮಟ್ಟದವರೆಗೆ ಬೆಳೆಯುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಕಾರ್ಯಕ್ರಮ ಆಯೋಜಕ ಗ್ರಾಮಾಂತರ ಮಂಡಲ ಅಧ್ಯಕ್ಷ ಹೂಡಿ ಪಿಳ್ಳಪ್ಪ ಮಾತನಾಡಿ, ರಾಜ್ಯದ ಎಲ್ಲಾ ಜಿಲ್ಲೆಗಳ ಕ್ರೀಡಾಳುಗಳು ಪಾಲ್ಗೊಂಡಿದ್ದು ಮೂರು ದಿನ ನಡೆಯಲಿದ್ದು ವಿಜೇತರಿಗೆ ಕೊನೆಯ ದಿನದಂದು ಬಹುಮಾನಗಳನ್ನು ನೀಡಲಿದ್ದೇವೆ. ಮೊದಲನೇ ಬಹುಮಾನವಾಗಿ ಟ್ರೋಫಿಯೊಂದಿಗೆ ೭೫,೦೦೦, ಎರಡನೇ ಬಹುಮಾನವಾಗಿ ಟ್ರೋಫಿಯೊಂದಿಗೆ ೫೦,೦೦೦ ನಗದು ಬಹುಮಾನ ಹಾಗೂ ಮೂರನೇ ಬಹುಮಾನವಾಗಿ ಟ್ರೋಫಿಯೊಂದಿಗೆ ೨೫,೦೦೦ ನಗದು ಬಹುಮಾನ ನೀಡಲಾಗುತ್ತದೆ ಎಂದರು.
ರಾಜ್ಯಮಟ್ಟದ ಹೊನಲು ಬೆಳಕಿನ ಪುರುಷ, ಮಹಿಳಾ ಕಬಡ್ಡಿ ಪಂದ್ಯಾವಳಿಗೆ ಚಾಲನೆ



