ನಗರದ ಮಾರತಹಳ್ಳಿಯಲ್ಲಿರುವ ಸಿಎಂಆರ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ದಿನಾಂಕ:-13.12.2023 ರಿಂದ 16.12.2023 ನಾಲ್ಕು ದಿನಗಳ ವರೆಗೆ ನಡೆಯುತ್ತಿರುವ ರಾಜ್ಯಮಟ್ಟದ “ ಸ್ಪರ್ಧಾ-23 ಕ್ರೀಡಾ ಉತ್ಸವವನ್ನು ಎಲ್ಲಾ ಅಂತರ ಕಾಲೇಜು ಹಾಗೂ ಅಂತರರಾಜ್ಯ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದು.
ಈ ಸ್ಪರ್ಧಾ-23 ಕ್ರೀಡಾಕೂಟಕ್ಕೆ ಮಾಜಿ ರಾಜ್ಯಸಭಾ ಸದಸ್ಯರು, ನಿವೃತ್ತ ಐಪಿಎಸ್ ಅಧಿಕಾರಿ, ಸಿಎಂಆರ್ ಸಮೂಹ ಶಿಕ್ಷಣ ಸಂಸ್ಥೆಗಳು ಹಾಗೂ ಸಿಎಂಆರ್ ವಿಶ್ವವಿದ್ಯಾಲಯದ ಅಧ್ಯಕ್ಷರಾದ ಡಾ.ಕೆ.ಸಿ.ರಾಮಮೂರ್ತಿ ಚಾಲನೆನೀಡಿದರು.
ಕ್ರೀಡಾ ಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಡಾ.ಕೆ.ಸಿ.ರಾಮಮೂರ್ತಿ ಕ್ರೀಡೆ ಆಧುನಿಕ ಯುಗದಲ್ಲಿ ಬದುಕಿನ ಭಾಗವಾಗಿದೆ. ಅದರಲ್ಲೂ ವಿದ್ಯಾರ್ಥಿಗಳಿಗೆ ಕ್ರೀಡೆ ಅವಿಭಾಜ್ಯ ಅಂಗವಾಗಿದ್ದು, ಓದಿನ ಜೊತೆ ಜೊತೆಗೆ ಕ್ರೀಡಾ ಕ್ಷೇತ್ರದಲ್ಲೂ ಸಾಧನೆ ಮಾಡಿ ದೇಶದ ಕೀರ್ತಿಯನ್ನು ಬೆಳಗಿಸಬೇಕೆಂದು ಕ್ರೀಡಾಪಟುಗಳಿಗೆ ಸ್ಪೂರ್ತಿ ತುಂಬಿದರು.
ಇದೇ ವೇಳೆ ರಾಜ್ಯಮಟ್ಟದಲ್ಲಿ ಕ್ರೀಡಾ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ನೆನಪಿನ ಟ್ರೋಪಿ ನೀಡಿ ಸನ್ಮಾನಿಸದರು. ಸ್ಫರ್ಧಾ-23 ಕ್ರೀಡಾ ಕೂಟದಲ್ಲಿ ರಾಜ್ಯ ಮತ್ತು ಹೊರ ರಾಜ್ಯಗಳಿಂದ 50 ಕ್ಕೂ ಹೆಚ್ಚು ಕಾಲೇಜುಗಳ 150 ಕ್ಕೂ ಹೆಚ್ಚು ತಂಡಗಳು ವಿವಿಧ ಕ್ರೀಡೆಗಳಾದ ಕ್ರಿಕೆಟ್, ಬಾಸ್ಕೆಟ್ ಬಾಲ್, ಪುಟ್ಬಾಲ್, ವಾಲಿಬಾಲ್, ಟೇಬಲ್ ಟೆನ್ನಿಸ್, ಕಬಡ್ಡಿ, ಹಾಕಿ, ಥ್ರೂ ಬಾಲ್ ಸೇರಿದಂತೆ ಹಲವು ಕ್ರೀಡೆಗಳು ನಡೆಯಲಿವೆ.
ಈ ಕ್ರೀಡಾಕೂಟ ಉದ್ಘಾಟನಾ ಸಮಾರಂಭದಲ್ಲಿ ಸಿಎಂಆರ್ ಐಟಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಸಂಜಯ್ ಜೈನ್, ಉಪಪ್ರಾಂಶುಪಾಲರಾದ ಡಾ.ಬಿ.ನರಸಿಂಹ ಮೂರ್ತಿ, ದೈಹಿಕ ಶಿಕ್ಷಣ ನಿರ್ದೇಶಕ ಶೋಭಿತ್ ಉಪಸ್ಥಿತರಿದ್ದು ಕ್ರೀಡಾಪಟುಗಳಿಗೆ ಶುಭಕೋರಿದರು.