ಬೆಂಗಳೂರು: ಸಾಹಿತ್ಯ ಸಂಸ್ಕöÈತಿ ವೇದಿಕೆ ಮತ್ತು ಸಂಪದ ಸಾಲು ಪತ್ರಿಕೆ ವತಿಯಿಂದ ಬೆಂಗಳೂರಿನ ಅಗರದಲ್ಲಿ ರಾಜ್ಯಮಟ್ಟದ ಶತ ಕವಿಗಳ ಕವನ ವಾಚನ ಕಾರ್ಯಕ್ರಮ ದಿನಾಂಕ ೧೮/೦೧/೨೦೨೬ ರ ಭಾನುವಾರದಂದು ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಕವಿಗಳು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮವನ್ನು ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್ ಟಿ ಸೋಮಶೇಖರ್,ಹಿರಿಯ ಸಾಹಿತಿಗಳಾದ ಪ್ರೊ. ಎಸ್ ಜಿ ಸಿದ್ದರಾಮಯ್ಯ,ನಿವೃತ್ತ ಐ ಎ ಎಸ್ ಅಧಿಕಾರಿ ಸೋಮಶೇಖರ್, ಪತ್ರಕರ್ತ ವೆಂಕಟೇಶ ಎಸ್ ಸಂಪ, ಹಿರಿಯ ಜನಪದ ಕಲಾವಿದ ಡಾ . ಅಪ್ಪಗೆರೆ ತಿಮ್ಮರಾಜು,ಸದಾಶಿವಯ್ಯ ಜರಗನಹಳ್ಳಿ,ಶಿವನಂಜಪ್ಪ, ಡಾ.ವಿಜಯಾ ಸುಬ್ಬರಾವ್ ಮುಂತಾದವರು ಭಾಗವಹಿ ಸಲಿದ್ದಾರೆ ಎಂದು ಹಿರಿಯ ಸಾಹಿತಿಗಳಾದ ಸದಾಶಿವಯ್ಯ ಜರಗನಹಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



