ಯಲಹಂಕ: ಹರಿಯಾಣದಲ್ಲಿ ಮಾರ್ಚ್ 23ರಿಂದ ಆರಂಭವಾಗಲಿರುವ 69ನೇ ಹಿರಿಯರ ರಾಷ್ಟ್ರೀಯ ಕಬಡ್ಡಿ ಚಾಂಪಿಯನ್‍ಶಿಪ್‍ನಲ್ಲಿ ಪಾಲ್ಗೊಳ್ಳಲಿರುವ ನಾಯಕಿ ಎಂ.ಬಿ.ಆತ್ಮೀಯ ನೇತೃತ್ವದ ಕರ್ನಾಟಕ ರಾಜ್ಯ ಹಿರಿಯರ ಮಹಿಳಾ ಕಬಡ್ಡಿ ತಂಡವು ಸೋಮವಾರ ಪ್ರಯಾಣ ಬೆಳೆಸಿತು.
ಸರಸ್ವತಿ, ಪಿ.ಆರ್.ಪ್ರೀತಿ, ನಿಹಾರಿಕಗೌಡ, ಅರ್ಚನಾ, ವಿನುಶ್ರೀ, ಸಿಂಧುಶ್ರೀ, ಎಂ.ಪವಿತ್ರ, ಎಂ.ಹರ್ಷಿತಾ (ಉಪ ನಾಯಕಿ), ಸ್ವಾತಿ, ದೀಪಾ ಹಾಗೂ ಗೀತಾ ತಂಡದಲ್ಲಿದ್ದಾರೆ.ತರಬೇತುದಾರ ನಾರಾಯಣಸ್ವಾಮಿ ಹಾಗೂ ಸಹ ತರಬೇತುದಾರ ಆರ್. ರಮೇಶ ತಂಡದೊಂದಿಗೆ ತೆರಳಿದ್ದಾರೆ ಎಂದು ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಎ.ಮುನಿರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Review