This is the title of the web page
This is the title of the web page

ದೊಡ್ಡಕಟ್ಟೆ ಅಮೃತ ಸರೋವರಕ್ಕೆ ರಾಜ್ಯ ತಂಡ ಭೇಟಿ, ಪರಿವಿ ವೀಕ್ಷಣೆ

ರಾಮನಗರ: ಚನ್ನಪಟ್ಟಣ ತಾಲ್ಲೂಕಿನ ವಂದಾರಗುಪ್ಪೆ ಗ್ರಾಮ ಪಂಚಾಯಿತಿಯ ಪೌಳಿದೊಡ್ಡಿ ಗ್ರಾಮದ ಗೌಡನಕಟ್ಟೆ ಅಮೃತ ಸರೋವರ ಹಾಗೂ ವಿರುಪಾಕ್ಷಿಪುರ ಗ್ರಾಮ ಪಂಚಾಯಿತಿ, ಮಂಗಾಡಹಳ್ಳಿ ಗ್ರಾಮದ ದೊಡ್ಡಕಟ್ಟೆ ಅಮೃತ ಸರೋವರಕ್ಕೆ ರಾಜ್ಯ ತಂಡ ಭೇಟಿ ನೀಡಿ ಪರಿವೀಕ್ಷಣೆ ಮಾಡಿದರು.

ವಂದಾರಗುಪ್ಪೆ ಪಂಚಾಯಿತಿಯ ಗೌಡನಕಟ್ಟೆ ಅಮೃತ ಕೆರೆಯನ್ನು ಪರಿವೀಕ್ಷಣೆ ಮಾಡಿದ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವಾಲಯದ ಸಹಾಯಕ ನಿರ್ದೇಶಕರು (ಆಡಳಿತ) ಶಿವಾನಂದ ಬೇವೂರ ಅವರು ತಾಂತ್ರಿಕ ಅಭಿಯಂತರಿಂದ ಕಾಮಗಾರಿಯ ಸಂಪೂರ್ಣ ಮಾಹಿತಿ ಪಡೆದರು. ನಂತರ ಮಾತನಾಡಿ ಕಾಡುಪ್ರಾಣಿಗಳಿಗೆ ಹಾಗೂ ಸ್ಮಶಾನಕ್ಕೆ ಅನುಕೂಲವಾಗುವಂತೆ ನಿರ್ಮಿಸಿರುವ ಅಮೃತ ಸರೋವರದ ಬಗ್ಗೆ ಪ್ರಶಂಸೆ ವ್ಯಕ್ತ ಪಡಿಸಿದರು.

ವಿರುಪಾಕ್ಷಿಪುರ ಗ್ರಾಮ ಪಂಚಾತಿಯಿಯ ಮಂಗಾಡಹಳ್ಳಿ ಗ್ರಾಮದ ದೊಡ್ಡಕಟ್ಟೆ ಅಮೃತ ಸರೋವರವನ್ನು ವೀಕ್ಷಣೆ ಮಾಡಿ ಹೆಚ್ಚು ನೀರು ಸಂಗ್ರಹ ಸಾಮಥ್ರ್ಯ ಹೊಂದಿರುವ ಕಟ್ಟೆಯು ಗ್ರಾಮದ ಜನರಿಗೆ ದನಕರು, ಮೀನುಸಾಕಾಣಿಕೆ ಹಾಗೂ ವಿವಿಧ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಿರುವ ಮಾಹಿತಿಯನ್ನು ಸ್ಥಳಿಯರಿಂದ ಪಡೆದು ಗ್ರಾಮಿಣ ಪ್ರದೇಶಗಳ ಅಭಿವೃದ್ದಿ ಕೆಲಸಗಳಲ್ಲಿ ಮಿಷನ್ ಅಮೃತ ಸರೋವರ ಯೋಜನೆಯು ಒಂದಾಗಿದೆ ಎಂದರು.

ರಾಜ್ಯ ಯೋಜನಾ ಅಭಿಯಂತರರಾದ ಯಶವಂತ್ ಅವರುಗಳನ್ನೊಳಗೊಂಡ ತಂಡ ಕೆರೆಯ ಕಾಮಗಾರಿ ಚಿತ್ರಣ, ಕೆರೆ ಬಳಕೆದಾರರ ಸಂಘದ ಮಾಹಿತಿ, ಕೆರೆ ಅಭಿವೃದ್ಧಿ ಪಡಿಸಿರುವ ಮೂಲ ಉದ್ದೇಶ ಮತ್ತು ಅನುಕೂಲಗಳನ್ನು ಸಂಬಂಧಪಟ್ಟ ಆ್ಯಪ್‍ನಲ್ಲಿ ಅಪ್ಲೋಡ್ ಮಾಡಿದರು.

ಈ ಸಂದರ್ಭದಲ್ಲಿ ಚನ್ನಪಟ್ಟಣ ತಾಲ್ಲೂಕಿನ ಸಹಾಯಕ ನಿರ್ದೇಶಕರಾದ ಸಿದ್ದಲಿಂಗಯ್ಯ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ತಾಂತ್ರಿಕ ಅಭಿಯಂತರರು, ತಾಂತ್ರಿಕ ಸಂಯೋಜಕರಾದ ಸಚಿನ್, ಐಇಸಿ ಸಂಯೋಜನಕರಾದ ಭವ್ಯ, ಬಿಎಫ್.ಟಿ ಹಾಗೂ ಪಂಚಾಯಿತಿ ಸಿಬ್ಬಂದಿಗಳು ಹಾಜರಿದ್ದರು.