ದೇವನಹಳ್ಳಿ: ಕೇಂದ್ರ ಸರ್ಕಾರ ರಾಷ್ಟಿಯ ಉದ್ಯೋಗ ಖಾತರಿ ಯೋಜನೆಯ (ನರೇಗಾ) ಸ್ವರೂಪ ಬದಲಿಸಿ ಜಿ ರಾಮ್ ಜೀ ಎಂದು ಮರುನಾಮಕರಣ ಮಾಡಿರುವ ಕುರಿತು ಇಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೆಹೆಚ್. ಮುನಿಯಪ್ಪ ರವರು ದೇವನಹಳ್ಳಿಯ ಕನ್ನಮಂಗಲ ಗೇಟ್ ಬಳಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ವಿಬಿ ರಾಮದ ಜಿ ಈ ಯೋಜನೆ ಮರುನಾಮಕರಣದ ನಿರ್ಧಾರದ ವಿರುದ್ಧ ಕಾನೂನು ಹೋರಾಟ ಮಾಡಲು ರಾಜ್ಯ ಸರ್ಕಾರ ಸಂಪುಟ ಸಭೆಯಲ್ಲಿ ತೀರ್ಮಾನಿಸಿದೆ
ಡಿಸಂಬರ್ ೧೭ ರಂದು ಕೇಂದ್ರ ಸರ್ಕಾರ ಮನ್ರೇಗ ಹೆಸರನ್ನು ವಿಬಿ ಜಿ ರಾಮ್ ಜಿ ಎಂದು ಮರುನಾಮಕರಣ ಗೊಳಿಸಿದ್ದು ರಾಷ್ಟç ಪಿತ ಮಹಾತ್ಮ ಗಾಂಧಿಯವರ ಹೆಸರು ಬದಲಿಸಿದ್ದಾರೆ
ಬಿಜೆಪಿ ಯವರಿಗೆ ನಮ್ಮ ಪಕ್ಷ ಜಾರಿಗೆ ತಂದಿರುವ ಯೋಜನೆಗಳ ಹೆಸರನ್ನು ಬದಲಿಸುವುದೆ ಇವರ ಸಾಧನೆಯಾಗಿದೆ
ರೈತರ ,ಕಾರ್ಮಿಕರ ,ಹಿತರಕ್ಷಣೆ ಯನ್ನು ಕಾಪಾಡುವುದು ನಮ್ಮ ಪಕ್ಷದ ಜವಾಬ್ದಾರಿ ನಮ್ಮ ಪಕ್ಷ ಜಾರಿಗೆ ತಂದ ೪೦ ಕಾರ್ಯಕ್ರಮ ಗಳು ಭಾರತ ದೇಶದಲ್ಲಿ ವಿಷೇವಾಗಿವೆ . ನಮ್ಮ ಸರ್ಕಾರ ಕೇಂದ್ರದಲ್ಲಿದ್ದಾಗ ಈ ರಾಷ್ಟದ ಸಣ್ಣ ಅತಿ ಸಣ್ಣ ರೈತರ ಸುಮಾರು ೭೨ ಸಾವಿರ ಕೋಟಿ ರೂಗಳ ಸಾಲ ಮನ್ನಾ ಮಾಡಿದೆ ಬಿಜೆಪಿ ಯವರು ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ದೇಶದಲ್ಲಿ ದ್ವೇಷ ಕೋಮುಗಲಬೆ ಅಶಾಂತಿಯನ್ನು ಮತ್ತು ಧರ್ಮ ಧರ್ಮಗಳ ಮಧ್ಯೆ ಉಂಟು ಮಾಡುತ್ತಿದ್ದಾರೆ ಮಾಡುತ್ತಿದ್ದಾರೆ.
ಅಂದು ನಾವು ತಂದ ಮನ್ರೇಗ ಕಾರ್ಯಕ್ರಮ ಮಂಡಲ್ ಪಂಚಾಯತ್ ಸಂದರ್ಭದಲ್ಲಿ ಜಾರಿಗೆ ತಂದುದ್ದು ಈ ಯೋಜನೆಯು ಬಡವರಿಗೆ ಕೂಲಿ ಕಾರ್ಮಿಕರರಿಗೆ ಹಾಗೂ ಬಡವರಿಗೆ ಅನುಕೂಲ ವಾದ ಯೋಜನೆಯಾಗಿತ್ತು ಜನ ಬೆಳಗಾದರೆ ಕೆಲಸ ಕ್ಕೆ ಹೋಗಲು ಮತ್ತು ಭೂಮಿರಹಿತ ಜನರಿಗೆ ಈ ಯೋಜನೆ ಜಾರಿಗೆ ತಂದಿದ್ದು ಇದರ ಸಹಕಾರಿಯಿಂದ ಜಮೀನಿನನಲ್ಲಿ ಬದುಗಳ ನಿರ್ಮಾಣ,ಕೆರೆಗಳಲ್ಲಿ ಹೂಲೆತ್ತುವುದು ಹಾಗೂ ಜಮೀನಿಗಳಲ್ಲಿ ನೀರು ಹಿಂಗುವ ಗುಣಿಗಳ ನಿರ್ಮಾಣ ಮಾಡುವುದು ಇದರ ಪ್ರಮುಖ ಕೆಲಸಗಳಾಗಿತ್ತು ಈ ರಾಷ್ಟದ ಕಟ್ಟ ಕಡೆಯ ವ್ಯಕ್ತಿಗೆ ಉಪಯೋಗವಾಗಲು ನಾವು ಜಾರಿಗೆ ತಂದ ಮನ್ರೇಗ ಜಾರಿಗೆ ಯೋಜನೆಯು ಜನ ನೆಮ್ಮದಿ ಯಾಗಿ ಬದುಕಲು ಜಾರಿಗೆ ತಂದಿದ್ದವಿ ಬದುಗಳ ನಿರ್ಮಾಣ ಚೆಕ್ ಗಳ ನಿರ್ಮಾಣ ಮಾಡಿ ಕೆಲಸ ಮಾಡುವ ಅವಕಾಶ ಇತ್ತು ನಮ್ಮ ರಾಜ್ಯದಿಂದ ಸುಮಾರು ೪ಲಕ್ಷ ಕೋಟಿ ರೂಗಳ ಜಿಎಸ್ಟಿ ಕಟ್ಟುತ್ತಿದ್ದು ಕೇಂದ್ರ ಸರ್ಕಾರ ನಮಗೆ ತೆರಿಗೆ ವಿತರಣೆಯಲ್ಲಿಯೂ ವಿಫಲರಾಗಿದ್ದು ಅವರು ವಿಬಿ ಜಿರಾಮ್ ಜಿ ಮಸೂದೆ ಜಾರಿಗೆ ತಂದು ೨೨೦ ದಿನ ಕೆಲಸ ಕೊಡತಿವಿ ಅಂತರೆ ಮುಂದೆ ಅದನ್ನು ನಿಲ್ಲಿಸುತ್ತಾರೆಮಹಾತ್ಮ ಗಾಂಧಿಯವರ ಹೆಸರನ್ನು ತೆಗೆಯುವಷ್ಟು ಕೀಳು ಮಟ್ಟಕ್ಕೆ ಈ ಬಿಜೆಪಿ ಹೋಗಿದೆ ಅವರ ನಡೆ ಸಿರಿಯಾದಲ್ಲಾ ನಾವು ಮಾಡಿರುವ ಕಾರ್ಯಕ್ರಮ ಮುಂದುವರಿಸಬೇಕು ಮತ್ತು ಈ ಮಸೂದೆ ಹಿಂಪಡೆಯಲು ನಾವು ೫ ಕಿಲೋ ಮೀಟರ್ ಪಾದಯಾತ್ರೆ ಯಲ್ಲಿ ಸುಮಾರು ೧೦ಸಾವಿರ ಜನರನ್ನು ಸೇರಿಸಿ ಸರ್ಕಾರಕ್ಕೆ ಇದರ ಕುಳಿತು ಮನವರಿಕೆ ಮಾಡುತ್ತೇವೆ ಈ ಪಾದಯಾತ್ರೆ ಯಲ್ಲಿ ಎಲ್ಲಾ ಒಕ್ಕೂಟಗಳು ಪಕ್ಷಾತೀತವಾಗಿ ಕೆಲಸ ಮಾಡಬೇಕಾಗಿದೆ ಎಂದರು.
ನಮ್ಮ ಸರ್ಕಾರ ಕ್ಯಾಬಿನೆಟ್ ನಲ್ಲಿ ತೀರ್ಮಾನಿಸಿದ್ದು ಸರ್ಕಾರಕ್ಕೆ ತಿಳಿಸಿ ಈ ಮಸೂದೆ ವಾಪಸ್ ತರಲು ನಾವು ಈ ಹೋರಾಟಗಳನ್ನು ನಿರಂತರವಾಗಿ ಮಾಡಬೇಕಾಗುತ್ತದೆ
ಈ ಪಾದಯಾತ್ರೆಯಲ್ಲಿ ಇದರಲ್ಲಿ ನಾವೆ ಮೊದಲಿಗೆ ನಮ್ಮ ಬೆಂಗಳೂರು ಗ್ರಾಮಾಂತರ ಜಿಲ್ಲೆ ಯಲ್ಲಿ ಮೊದಲಿಗೆ ಮಾಡುತ್ತಿದ್ದು ಇದು ಯಾವುದೇ ಕಾರಣಕ್ಕೂ ನಾವು ಸಹಿಸುವುದಿಲ್ಲ ಎಂದರು
ಮಹಾತ್ಮ ಗಾಂಧಿಯವರ ಹೆಸರು ಬದಲಿಸುವುದು ಭಾತರದ ಯಾವೊಬ್ಬ ವ್ಯಕ್ತಿಯೂ ಸಹಿಸಲ್ಲಾ ಅವರ ಸಾಧನೆ ಬಹಳಷ್ಟು ಇರುವುದರಿಂದ ಅವರ ಹೆಸರು ಉಳಿಸಲು ನಾವು ಸದಾ ಹೋರಾಟಗಳನ್ನು ಮಾಡಬೇಕಾಗಿದೆ ಇದು ನಿರಂತರವಾಗಿ ನಡೆಯಲಿದೆ ಎಂದರು
ಈ ಸಂಧರ್ಭದಲ್ಲಿ ಎಐಸಿಸಿ ಕಾರ್ಯದರ್ಶಿ ಹಾಗೂ ಬೆಂಗಳೂರು ಉಸ್ತುವಾರಿ ಅಭಿಷೇಕ್ ದತ್ ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವೆಂಕಟೇಶ್ ,ವಿಜಯಪುರ ಬ್ಲಾಕ್ ಕಾಂಗ್ರೆಸ್ ನ ಮಂಜುನಾಥ್, ಬಯ್ಯಪ್ಪಾ ಅಧ್ಯಕ್ಷರಾದ ಶಂತಕುಮಾರ್,ನಿರ್ದೇಶಕರಾದ ಪ್ರಸನ್ನಕುಮಾರ್,ಮಂಜುನಾಥ್,ರಾಮಚಂದ್ರಪ್ಪ ಹಾಗೂ ಗ್ಯಾರಂಟಿ ಅಧ್ಯಕ್ಷರಾದ ರಾಜಣ್ಣ, ಚಿನ್ನಪ್ಪ,ರವಿಸಿದ್ದಪ್ಪ, ಸಾಗರ್ ,ನಾಗೇಶ್,ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಉಪಸ್ಥಿತರಿದ್ದರು.
ಜಿ ರಾಮ್ ಜೀ ಮಸೂದೆ ಜಾರಿಯ ಕೇಂದ್ರದ ನಡೆಗೆ ಖಂಡಿಸಿ ರಾಜ್ಯಾದ್ಯಂತ ಹೋರಾಟ: ಮುನಿಯಪ್ಪ



