ಬೆಂಗಳೂರು: ಕರ್ನಾಟಕದ ಸಾರಿಗೆ ಇಲಾಖೆಯು 2025 ರಲ್ಲಿ ಕರ್ನಾಟಕದಾದ್ಯಂತ 5,947 ಚಾಲನಾ ಪರವಾನಗಿಗಳನ್ನು (DL) ಅಮಾನತುಗೊಳಿಸಿದೆ. ರಾಜ್ಯದ ಆರು ಸಾರಿಗೆ ವಿಭಾಗಗಳಲ್ಲಿ, ಬೆಂಗಳೂರು ನಗರವು 4,479 ಪ್ರಕರಣಗಳೊಂದಿಗೆ ಅಗ್ರಸ್ಥಾನದಲ್ಲಿದೆ.
ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆ ಮತ್ತು ಇತರ ಸಂಚಾರ ಉಲ್ಲಂಘನೆಗಳು ಸೇರಿದಂತೆ 1,512 ಪ್ರಕರಣಗಳು ಇನ್ನೂ RTO ಗಳಲ್ಲಿ ಬಾಕಿ ಉಳಿದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕ್ರಿಸ್ಮಸ್ ರಜಾದಿನಗಳು ಮತ್ತು ಹೊಸ ವರ್ಷದ ಮುನ್ನಾದಿನದಂದು ಇಲಾಖೆಯು ಪರಿಶೀಲನೆ ತೀವ್ರಗೊಳಿಸುವುದರಿಂದ 2025 ರ ವೇಳೆಗೆ ಅಮಾನತು ಪ್ರಕರಣಗಳ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ.
ಮದ್ಯಪಾನ ಮಾಡಿ ಚಾಲನೆ ಮಾಡಿದ್ದಕ್ಕಾಗಿ 4,735 ಡಿಎಲ್ ಅಮಾನತುಗಳಾಗಿವೆ, ಕುಡಿದು ಚಾಲನೆ ಮಾಡುವುದರಿಂದ ಪಾದಚಾರಿಗಳು ಮತ್ತು ಇತರರ ಜೀವಕ್ಕೂ ಅಪಾಯವನ್ನುಂಟು ಮಾಡುತ್ತದೆ. ಹೀಗಾಗಿಶಿಸ್ತು ತರಲು, ಡ್ರಂಕ್ ಅಂಡ್ ಡ್ರೈವ್ ಮೊದಲ ಅಪರಾಧದಲ್ಲಿ ಚಾಲನಾ ಪರವಾನಗಿಯನ್ನು ಇಲಾಖೆ ಅಮಾನತುಗೊಳಿಸುತ್ತದೆ” ಎಂದು ಸಾರಿಗೆ ಸಚಿವ ಆರ್ ರಾಮಲಿಂಗಾ ರೆಡ್ಡಿ ಹೇಳಿದರು.
ಸಂಚಾರ ಇಲಾಖೆಯಿಂದ ವರದಿಗಳನ್ನು ಸ್ವೀಕರಿಸಿದ ನಂತರ, ಅವುಗಳನ್ನು ಸಂಬಂಧಪಟ್ಟ ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ ಕಳುಹಿಸಲಾಗುತ್ತದೆ ಮತ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬೆಂಗಳೂರು ನಗರ ವಿಭಾಗದ ಸಾರಿಗೆ ಇಲಾಖೆಯ ಜಂಟಿ ಆಯುಕ್ತೆ ಎಂ. ಶೋಭಾ ತಿಳಿಸಿದ್ದಾರೆ.



