ಬೆಂಗಳೂರು: ಈ ಭಾರಿ ರಾಜ್ಯದಲ್ಲಿ ಬಿಸಿಲಿನ ತಾಪಮಾನ ಹೆಚ್ಚುತ್ತಿದ್ದು ಡೆಂಘೀ ಜ್ವರ ಹೆಚ್ಚಾಗುತ್ತಿದೆ. ಬಿಸಿಲಿನ ಜಳದಿಂದಾಗಿ ಡೆಂಘಿ ಜ್ವರ ಸದ್ದಿಲ್ಲದೆ ಜನರ ಜೀವ ಹಿಂಡಲು ಮುಂದಾಗಿದೆ. ಬೆಂಗಳೂರು ಮತ್ತು ರಾಜ್ಯದಲ್ಲಿ ಇತರೆಡೆ ಬಿಸಿಲಿನ ಕಾವು ಹೆಚ್ಚಾಗಿದ್ದು, ತಾಪಮಾನದಲ್ಲಿ ಬದಲಾವಣೆ ಕಂಡುಬರುತ್ತಿದೆ. ಬಿಸಿಲಿನ ಹೊಡೆತದಿಂದಾಗಿ ಕೊರೊನಾ ಹಾಗೂ ಡೆಂಘೀ ಜ್ವರ ಹೆಚ್ಚಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಕಳೆದ ಒಂದು ತಿಂಗಳಿನಿಂದ ದಿನದಿಂದ ದಿನಕ್ಕೆ ಡೆಂಘೀ ಪ್ರಕರಣಗಳು ಹೆಚ್ಚಾಗುತ್ತಿವೆ.
ಕೊರೊನಾ ಪ್ರಕರಣಗಳಿಗಿಂತ ಡೆಂಘೀ ಪ್ರಕರಣಗಳೇ ಹೆಚ್ಚಾಗುತ್ತಿವೆ ಎಂದು ತಜ್ಞರು ಹೇಳತೊಡಗಿದ್ದಾರೆ. ರಾಜ್ಯದಲ್ಲಿ ಕೊರೊನಾಕ್ಕಿಂತ ಹೆಚ್ಚು ಡೆಂಘಿ ಜ್ವರ ಹಾಗೂ ಚಿಕನ್ ಗುನ್ಯಾ ಹಾವಳಿ ಇಡುತ್ತಿದ್ದು, ಮಾರ್ಚ್ ನಿಂದ ನಿರಂತರವಾಗಿ ರಾಜ್ಯದಲ್ಲಿ ಢೇಂಘಿ ಜ್ವರ ಏರಿಕೆಯಾಗ್ತಿದೆ. ಜ್ವರ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ತಲೆಕೆಡಿಸಿಕೊಂಡಿದೆ ಬಿಬಿಎಂಪಿ ಹಾಗೂ ರಾಜ್ಯದಲ್ಲಿ ಕಳೆದ 20 ದಿನಗಳಲ್ಲಿ 246 ಡೆಂಘಿ ಕೇಸ್ ಪತ್ತೆಯಾಗಿದ್ದು 15% ರಿಂದ 20% ರಷ್ಟು ಡೆಂಘಿ ಕೇಸ್‍ಗಳ ಸಂಖ್ಯೆಯಲ್ಲಿ ರಾಜ್ಯದಲ್ಲಿ ಏರಿಕೆ ಕಂಡಿದೆ.
ಕಳೆದ ಒಂದು ವಾರದಲ್ಲಿ ಏಪ್ರಿಲ್ 17-23ರವರೆಗೆ ಒಟ್ಟು 82 ಡೆಂಘಿ ಕೇಸ್ ಪತ್ತೆಯಾಗಿದರೆ ಇದರಲ್ಲಿ ಸಿಂಹಪಾಲು ಬೆಂಗಳೂರಿನಲ್ಲಿ 49 ಕೇಸ್ ಪತ್ತೆಯಾಗಿದೆ. ಇನ್ನು ಏಪ್ರಿಲ್ 10 ರಿಂದ 16 ರವೆರೆಗೆ ರಾಜ್ಯದಲ್ಲಿ 94 ಕೇಸ್ ಪತ್ತೆಯಾಗಿದ್ರೆ ಎಪ್ರಿಲ್ 3 ರಿಂದ 9 ರವರೆಗೆ 80 ಕೇಸ್ ಪತ್ತೆಯಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಡೆಂಘಿ ಜ್ವರ ಕಾಣಿಸಿಕೊಳ್ಳುತ್ತಿದ್ದು ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಿದೆ.
Leave a Review