ಯಲಹಂಕ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಯಲಹಂಕ ಇವರ ವತಿಯಿಂದ ಆಯೋಜಿಸಿರುವ ರಾಜ್ಯ ಮಟ್ಟದ ವಿಚಾರಣ ಸಂಕೀರ್ಣವನ್ನು ಡಿ.21 ಗುರುವಾರ ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ಉದ್ಘಾಟಿಸಿದರು.
ಕರ್ನಾಟಕ ಏಕೀಕರಣ ಚಳುವಳಿಯ ಹೆಜ್ಜೆ ಗುರುತುಗಳು ಎಂಬ ವಿಷಯದ ಮೇಲೆ ಡಿಸೆಂಬರ್ 22 ಶುಕ್ರವಾರದಂದು ಸಂಕೀರ್ಣದ ಸಮರೋಪ ಸಮಾರಂಭ ಜರುಗಲಿದ್ದು ಮುಖ್ಯ ಅತಿಥಿಗಳಾಗಿ ಯುವ ಮುಖಂಡರು ವಿಶ್ವವಾಣಿ ಫೌಂಡೇಶನ್ ನ ಕಾರ್ಯದರ್ಶಿಗಳು ಆದ ಅಲೋಕ್ ವಿಶ್ವನಾಥ್ ಆಗಮಿಸಲಿದ್ದು ಸಮಾರೋಪ ಭಾಷಣವನ್ನು ನೆರವೇರಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಚಂದ್ರಪ್ಪ. ಪ್ರಾಂಶುಪಾಲರಾದ ಆಡಿ.ಗೋವಿಂದರಾಜು ಸೇರಿದಂತೆ ಪ್ರಾಧ್ಯಾಪಕರು ಮತ್ತು ಆಡಳಿತ ವೃಂದ ಉಪಸ್ಥಿತರಿದ್ದರು.