ಬೆಂಗಳೂರು: 18 ನೇ ಲೋಕಸಭಾ ಚುನಾವಣೆಯ ಅಂಗವಾಗಿ 2024ರ ಎರಡನೇ ಹಂತದ 14 ಲೋಕಸಭಾ ಕ್ಷೇತ್ರಗಳಿಗೆ ಇದೇ ತಿಂಗಳ 7 ರಂದು ನಡೆಯುವ ಚುನಾವಣೆಗೆ ರಾಜ್ಯ ಪೊಲೀಸ್ ಇಲಾಖೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಚುನಾವಣೆ ನಡೆಸಲು ಸಜ್ಜಾಗಿದೆ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್ ರವರು ತಿಳಿಸಿದ್ದಾರೆ. ಸುಮಾರು ಎರಡುವರೆ ಕೋಟಿಗೂ ಅಧಿಕ ಮತದಾರರು ಮತ ಚಲಾಯಿಸಲು ಅರ್ಹರಾಗಿದ್ದಾರೆ.
45695 ಪೊಲೀಸ್ ಸಿಬ್ಬಂದಿಯನ್ನು 28581 ಮತಗಟ್ಟೆಗಳಿಗೆ ಹಾಗು ಇತರೆ ಕರ್ತವ್ಯಗಳಿಗೆ/ ಗಸ್ತು ಪಡೆಯಾಗಿ ನಿಯೋಜಿಸಲು ರೂಪು ರೇಷ ಸಿದ್ದ ಗೊಳಿಸಿದೆ. ಗದಗ, ಹಾವೇರಿ, ಬೆಳಗಾವಿ ಸೇರಿದಂತೆ ಒಟ್ಟು 14 ಲೋಕಸಭಾ ಕ್ಷೇತ್ರಗಳಿಗೆ ಮೇ 7 ರಂದು ಬೆಳಿಗ್ಗೆ 7 ರಿಂದ ಸಂಜೆ 6 ರವರೆಗೆ ಮತದಾರರಿಂದ ಮತಚಲಾವಣೆ ನಡೆಯಲಿದೆ.
133 ಡಿವೈಎಸ್ಪಿ, 370 ಪೊಲೀಸ್ ಇನ್ಸ್ಪೆಕ್ಟರ್ ಗಳು, 988 ಪಿಎಸ್ಐ ಗಳು, 1841 ಎಎಸ್ಐ ಗಳು, 10042 ಮುಖ್ಯಪೇದೆಗಳು, 17221 ಪೊಲೀಸ್ ಪೇದೆಗಳು ಮತ್ತು15100 ಗೃಹರಕ್ಷಕ ದಳದ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ.ಇದಲ್ಲದೆ ಇನ್ನೂ ಹೆಚ್ಚುವರಿಯಾಗಿ 65 ಕೇಂದ್ರ ಮೀಸಲು ಪಡೆ ಪೊಲೀಸ್ ದಳವನ್ನು ಸಹ ಸುಗಮವಾಗಿ ಮತದಾರರು ಮತ ಚಲಾಯಿಸಲು ನೇಮಿಸಲಾಗಿದೆ.
ಒಟ್ಟು 28581 ಮತಗಟ್ಟೆಗಳನ್ನು ಎರಡು ಭಾಗವಾಗಿ ವಿಂಗಡಿಸಿ, ಅದರಲ್ಲಿ 4712 ಬೂತ್ ಗಳನ್ನು ನಿರ್ಣಾಯಕ ಬೂತ್ ಗಳನ್ನಾಗಿ ಮತ್ತು 23869 ಬೂತ್ಗಳನ್ನು ಸಾಮಾನ್ಯ ಬೂತ್ಗಳಾಗಿರುತವೆ. 1664 ಪೊಲೀಸ್ ವಲಯದ ಮೊಬೈಲ್ಗಳಾಗಿರುತ್ತವೆ. 348 ಪೊಲೀಸ್ ಪಡೆ ಕ್ಷಿಪ್ರ ಪಡೆಯಾಗಿ ಇರುತ್ತವೆ. ಇದಲ್ಲದೇ, 348 ಪೊಲೀಸ್ ಚೆಕ್ ಪೋಸ್ಟ್ಗಳನ್ನು ಸಹ ಹಾಕಲಾಗಿದೆ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್ ರವರು “ಇಂದು ಸಂಜೆಗೆ” ನೀಡಿದ ವಿಶೇಷ ಸಂದರ್ಶನದಲ್ಲಿ ತಿಳಿಸಿರುತ್ತಾರೆ.