ಭಾರತದ ಅಗ್ರ ಶಾಟ್ಪಟ್ ಪಟು ಕರಣ್ವೀರ್ ಸಿಂಗ್ ಮತ್ತು ಡಿಸ್ಕಸ್ ಥ್ರೋಪಟು ಕಿರ್ಪಾಲ್ ಸಿಂಗ್ ಸೇರಿದಂತೆ ಹಲವು ಕ್ರೀಡಾಪಟುಗಳಿಗೆ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕದ (ನಾಡಾ) ಶಿಸ್ತು ಸಮಿತಿ ನಾಲ್ಕು ವರ್ಷಗಳ ಕಾಲ ನಿಷೇಧ ಹೇರದೆ.
ಉದ್ದೀಪನ ಮದ್ದು ಸೇವನೆ ಪ್ರಕರಣದಲ್ಲಿ ಸಿಲುಕಿದ್ದ ಕರಣ್ವೀರ್ ಮತ್ತು ಕಿರ್ಪಾಲ್ ಅವರ ವಿರುದ್ಧ ನಿಷೇಧದ ಆದೇಶವನ್ನು 2023ರ ಡಿಸೆಂಬರ್ 29ರಂದು ಶಿಸ್ತು ಸಮಿತಿಯು ಹೊರಡಿಸಿತ್ತು.
ಆದರೆ, ನಿಷೇಧಕ್ಕೆ ಒಳಗಾದ ಅಥ್ಲೀಟ್ಗಳ ಪಟ್ಟಿಯನ್ನು ಗುರುವಾರ ನಾಡಾ ಬಿಡುಗಡೆ ಮಾಡಿದೆ. ಕಿರ್ಪಾಲ್ ಅವರ ನಿಷೇಧ ಅವಧಿ 2023ರ ಜುಲೈ 7ರಿಂದ ಮತ್ತು ಕರಣ್ವೀರ್ ಅವಧಿ 2023ರ ಜುಲೈ 26ರಿಂದ ಆರಂಭವಾಗಿದೆ. ಕಳೆದ ಜುಲೈನಲ್ಲಿ ನಾಡಾ ನಿಷೇಧ ಹೇರಿದ್ದ 20 ಕ್ರೀಡಾಪಟುಗಳ ಪಟ್ಟಿಯಲ್ಲಿ ಇವರಿಬ್ಬರೂ ಸೇರಿದ್ದಾರೆ.
ನಿಷೇಧಕ್ಕೆ ಒಳಗಾದ ಇತರ ಕ್ರೀಡಾಪುಟಗಳು: ಮಲಾಕ್ ಸಿಂಗ್ (ರೋವರ್), ಅಕ್ಷಯ್, ಹರ್ದೀಪ್ ಸಿಂಗ್ ಬ್ರಾರ್, ಮೊಹ್ಸಿನ್ ಗುಲಾಬ್ ಅಲಿ, ರಾಹುಲ್ ಸೇವ್ತಾ (ಜುಡೋಕಾ), ರೋಹಿತ್ ಸಿಂಗ್ ತೋಮರ್, ದುರ್ಗೇಶ್ ಕುಮಾರ್ (ಕಬಡ್ಡಿ), ರಂಜೀತ್ ಭಾಟಿ (ಪ್ಯಾರಾ ಅಥ್ಲೆಟಿಕ್ಸ್).