ಜ್ಞಾನ ಗಂಗಾ ಸಾಹಿತ್ಯ ಮತ್ತು ಸಾಂಸ್ಕೃತಿಕ ರಂಗ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ನೆಲಮಂಗಲ ಹಾಗೂ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು, ಜಿಲ್ಲಾ ಘಟಕ, ವಿಜಯನಗರ ಇವರ ಸಹಯೋಗದಲ್ಲಿ ಹಂಪಿ ಕಮಲಾಪುರದ ಪಾಂಡುರಂಗ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ “ಹಂಪಿಯಲ್ಲಿ ಕಲ್ಲಿನ ರಥ, ನಮ್ಮದು ಕನ್ನಡ ಪಥ” ರಾಜ್ಯಮಟ್ಟದ ಕವಿ ಕಲಾವಿದರ ಸಮ್ಮೇಳನದಲ್ಲಿ ಮೂರು ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಯಿತು.
11 ವರ್ಷದ ಪುಟಾಣಿ ಪೋರಿ ಹೃತ್ವಿಕ ಪ್ರಿಯದರ್ಶಿನಿ ವಿರಚಿತ ‘ಚಿಗುರು’ ಕವನ ಸಂಕಲನ, ಮಣ್ಣೆ ಮೋಹನ್ ಸಂಪಾದಕತ್ವದ ‘ಹಂಪಿಯಲ್ಲಿ ಕಲ್ಲಿನ ರಥ, ನಮ್ಮದು ಕನ್ನಡ ಪಥ’ ಕವನ ಸಂಕಲನ, ವಿ ಶ್ರೀನಿವಾಸ್ ವಾಣಿಗರಳ್ಳಿ ಬರೆದಿರುವ ‘ಸಾಧನೆಗೆ ಸಾಲು ಸಾಲು ಮೆಟ್ಟಿಲುಗಳು’ ಕೃತಿಗಳು ಲೋಕಾರ್ಪಣೆಗೊಂಡವು.
ಲೇಖಕ ಚಿಂತಕ ಅಂಕಣಕಾರ ಮಣ್ಣೆ ಮೋಹನ್ ಕೃತಿಗಳನ್ನು ಅನಾವರಣಗೊಳಿಸಿದರು. ನೆಲಮಂಗಲ ತಾಲೂಕು ಕಸಾಪ ಅಧ್ಯಕ್ಷ ಪ್ರಕಾಶ್ ಮೂರ್ತಿ, ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆ ಕಸಾಪ ಅಧ್ಯಕ್ಷ ನಿಷ್ಟಿ ರುದ್ರಪ್ಪ, ಚಟುಕು ಸಾಹಿತ್ಯ ಪರಿಷತ್ ವಿಜಯನಗರ ಜಿಲ್ಲಾಧ್ಯಕ್ಷರಾದ ಹಾಲ್ಯಾನಾಯ್ಕ, ಹೊಸಪೇಟೆ ಟೈಮ್ಸ್ ಪತ್ರಿಕೆ ಸಂಪಾದಕಿ ರೇಖಾ ಪ್ರಕಾಶ್, ಫ್ರೆಸ್ ಕ್ಲಬ್ ಕೌನ್ಸಿಲ್ ರಾಜ್ಯಾಧ್ಯಕ್ಷರಾದ ರಾಘವೇಂದ್ರ ಆಚಾರ್, ಪ್ರಧಾನ ಕಾರ್ಯದರ್ಶಿ ಆಶಾ, ನೆಲಮಂಗಲ ಕಸಾಪ ಪ್ರಧಾನ ಕಾರ್ಯದರ್ಶಿ ಡಾ ಸದಾನಂದ ಆರಾಧ್ಯ, ಡಾ ಶಿವಲಿಂಗಯ್ಯ, ವೀರಸಾಗರ ಭಾನುಪ್ರಕಾಶ್, ಕೆ ಸಿ ರಮೇಶ್, ಕುಮಾರ್, ಚಂದ್ರಶೇಖರಯ್ಯ ರೋಣದಮಠ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.