ಚಿತ್ರದ ನಾಯಕ ಯೂ-ಟ್ಯೂಬ್ ಬ್ಲಾಗರ್ ಆಗಿದ್ದು ಏನಾದರೂ ಸಾಧನೆ ಮಾಡಬೇಕೆಂಬ ಪ್ರಯತ್ನದಲ್ಲಿರುತ್ತಾನೆ ಆದರೆ ತಾನು ಮಾಡುತ್ತಿರುವ ವಿಡಿಯೋಗಳು ಟ್ರೋಲ್ ಪೇಜ್ಗಳಿಗೆೆ ಆಹಾರವಾಗಿ ನಗೆಪಾಟಲಿಗೆ ಗುರಿ ಆಗುತ್ತಾನೆ. ಈ ಮಧ್ಯೆ ಒಂದು ಹುಡುಗಿಯ ಜೊತೆ ಲವ್ ಆಗುತ್ತೆ. ನಾಯಕ ಮಾಡಿದ ಒಂದು ತಪ್ಪಿನಿಂದ ಲವ್ ಬ್ರೇಕಪ್ ಆಗುತ್ತೆ.ಒಂದು ಕಡೆ ತಾನು ಪ್ರೀತ್ಸಿದ ಹುಡುಗಿಯನ್ನು ಮರಳಿ ಪಡೆಯಬೇಕು. ಮತ್ತೊಂದು ಕಡೆ ಯೂ-ಟ್ಯೂಬ್ ಅಲ್ಲಿ ತನ್ನ ವೀವರ್ಸ್ ಗಳಿಗೆ ವಿಭಿನ್ನವಾಗಿ ಏನಾದರೂ ಮಾಡಬೇಕೆಂದು ಯೋಚಿಸುತ್ತಿರುವಾಗ ಒಂದು ಭಯಂಕರವಾದ ಘೋಸ್ಟ್ ಟೌನ್ ಗೆ ಹೋಗಿ ಘೋಸ್ಟ್ ಹಂಟಿAಗ್ ವೀಡಿಯೋ ಮಾಡಲು ನಿರ್ಧರಿಸುತ್ತಾನೆ. ಇದಕ್ಕೆ ಸ್ನೇಹಿತರಿಂದ ವಿರೋಧ ವ್ಯಕ್ತವಾಗುತ್ತದೆ. ನಂತರ ನಾಯಕ ಘೋಸ್ಟ್ ಟೌನ್ ಗೆ ಹೋಗುವನೆ, ತಾನು ಪ್ರೀತ್ಸಿದ ಹುಡುಗಿಯನ್ನು ಮರಳಿ ಪಡೆಯುವನೆ?, ಯೂ-ಟ್ಯೂಬ್ ಬ್ಲಾಗರ್ ಆಗಿ ಸಾಧನೆ ಮಾಡುವನೆ? ಎನ್ನುವುದು ಚಿತ್ರದ ಕಥಾಹಂದರ



