ಬೆಂಗಳೂರು: ಉತ್ತರ ಪ್ರದೇಶ ರಾಜ್ಯದ ಗೌರವ್ ಶರ್ಮಾ ಎಂಬ ವ್ಯಕ್ತಿಯು ಮಧ್ಯರಾತ್ರಿ ಮೂರು ಗಂಟೆ ಸುಮಾರಿಗೆ ಕೆಲಸ ಮುಗಿಸಿಕೊಂಡು ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಗೋಲ್ಡನ್ ಸಿಮ್ ಅಪಾರ್ಟ್ಮೆಂಟ್, ಹುಸ್ಕೂರ್ ರಸ್ತೆ ಬಳಿ ಹೋಗುತ್ತಿದ್ದಾಗ ಅಪರಿಚಿತ ಮೂರು ಜನ ವ್ಯಕ್ತಿಗಳು ಅಡ್ಡ ಹಾಕಿ ಮೊಬೈಲ್ ಫೋನನ್ನು ದರೋಡೆ ಮಾಡಿರುತ್ತಾರೆ.
ಪಿರಿಯಾದುದಾರ ಗೌರವ್ ಶರ್ಮಾ ಮೊಬೈಲ್ ಕೊಡದಿದ್ದ ಕಾರಣ ಕಟ್ಟಿಗೆಯಿಂದ ಎಡಗಣ್ಣಿಗೆ ಹೊಡೆದ ಪರಿಣಾಮ ತೀವ್ರತರವಾದ ಗಾಯವಾಗಿರುತ್ತದೆ, ಹಾಗೂ ಅವರ ದ್ವಿಚಕ್ರ ವಾಹನವನ್ನು ಸಹ ಡ್ಯಾಮೇಜ್ ಮಾಡಿರುತ್ತಾರೆ.
ಪಿರ್ಯಾದುದಾರರ ಅತ್ರ ಇದ್ದ ವಿವೋ ೨ ಮೊಬೈಲ್ ಫೋನ್ ದರೋಡೆ ಮಾಡಿಕೊಂಡು ಹೋಗಿರುತ್ತಾರೆ, ಮದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿರುತ್ತದೆ.



