ಹೊಸಕೋಟೆ: ನಗರದ ಜಯಚಾಮರಾಜೇಂದ್ರ ವೃತ್ತ (ಹೂಮಂಡಿ ಸರ್ಕಲ್)ನಲ್ಲಿ ವ್ಯಾಪಾರಿ ಯೊಬ್ಬರು ಪ್ರತಿದಿನ ತೆಂಗಿನಕಾಯಿಗಳನ್ನು ರಸ್ತೆಯ ಮಧ್ಯಭಾಗದಲ್ಲಿಟ್ಟುಕೊಂಡು ಮಾರಾಟ ಮಾಡು ತ್ತಿದ್ದು ವಾಹನಗಳ ಸಂಚಾರಕ್ಕೆ, ಪಾದಚಾರಿಗಳ ಓಡಾಟಕ್ಕೆ ಅಡಚಣೆಯಾಗುತ್ತಿದೆ.
ಮಿಷನ್ ಆಸ್ಪತ್ರೆ ರಸ್ತೆಯಿಂದ ಬರುವ ಬಹಳಷ್ಟು ಬಿಎಂಟಿಸಿ ಬಸ್ಗಳು ಡಿಪೋ ಅಥವಾ ಬಿಎಂಟಿಸಿ ಬಸ್ ಟರ್ಮಿನಲ್ಗೆ ತೆರಳಲು ತಿರುವು ತೆಗೆದುಕೊ
ಳ್ಳಲು ಸಹ ಚಾಲಕರು ಹರಸಾಹಸ ಮಾಡಬೇಕಾ ಗಿದೆ. ಈ ಬಗ್ಗೆ ಸಾರ್ವ ಜನಿಕರೊಬ್ಬರು ವ್ಯಾಪಾರಿ ಯನ್ನು ಪ್ರಶ್ನಿಸಿದಾಗ, ನಾವು ತೆರಿಗೆ ಕಟ್ಟಿ ಜಾಗ
ಪಡೆದಿದ್ದೇವೆ ಯಾರೂ ಸಹ ಏನೂ ಮಾಡಲಾಗುವು ದಿಲ್ಲ ಎಂದು ಹೇಳಿದ್ದೇ ಅಲ್ಲದೆ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುವುದು ಸಾಮಾನ್ಯವಾಗಿದೆ.
ಇಷ್ಟೇ ಅಲ್ಲದೆ ಬಹಳಷ್ಟು ವಾಹನ ಸವಾರರು ಅಂಗಡಿಗಳಲ್ಲಿ ವ್ಯಾಪಾರ ಮಾಡಲು ವಾಹನಗಳನ್ನು ರಸ್ತೆಯಲ್ಲಿಯೇ ನಿಲುಗಡೆ ಮಾಡುತ್ತಿರುವುದು ಸಮಸ್ಯೆಯನ್ನು ಮತ್ತಷ್ಟು ಉಲ್ಬಣಗೊಳಿಸಿದೆ.ಇದೇ ರೀತಿ ಎದುರುಗಡೆಯಿರುವ ಅಶ್ವಥಕಟ್ಟೆಯ ತಿರುವಿನಲ್ಲಿಯೂ ಸಹ ಹಣ್ಣು, ಎಲೆ ಮಾರಾಟದ ಗಾಡಿಗಳನ್ನು ಇಟ್ಟುಕೊಂಡಿರುವ ಕಾರಣ ವಾಹನ ಸವಾರರು, ಪಾದಚಾರಿಗಳು ತೀವ್ರಾದ ಸಮಸ್ಯೆ ಎದುರಿಸಬೇಕಾಗಿದೆ.
ಹೊಸಕೋಟೆ ಸಮಸ್ಯೆಗಳ ವಾಟ್ಸ್ಫ್ ಗ್ರೂಫ್ನಲ್ಲಿ ಈ ಬಗ್ಗೆ ದಾಖಲಿಸಿದರೂ ಸಹ ಇದುವರೆವಿಗೂ ಯಾವುದೇ ಪ್ರಯೋಜನವಾಗಿಲ್ಲ. ಈಗಲಾದರೂ ಸಂಬಂಧಪಟ್ಟ ಪುರಸಭೆ ಅಧಿಕಾರಿಗಳು, ಪೊಲೀಸ್ ಇಲಾಖೆಯವರು ನಗರದ ಕೆಇಬಿ ವೃತ್ತ, ಜೆ.ಸಿ.ವೃತ್ತದಲ್ಲಿ ರಸ್ತೆ ಅತಿಕ್ರಮಣ ಮಾಡಿಕೊಂಡಿರುವ ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ, ಪಾದಚಾರಿಗಳ ಓಡಾಟಕ್ಕೆ ಅನುಕೂಲ ಮಾಡಿಕೊಡಬೇಕೆಂದು ನಿವೃತ್ತ ಸರಕಾರಿ ಅಧಿಕಾರಿ ಸೋಮಶೇಖರ್, ಸಾರ್ವಜನಿಕರು ಒತ್ತಾಯಿಸಿದ್ದಾರೆ.