ಜಕಾರ್ತ: ಪೂರ್ವ ಇಂಡೋನೇಷ್ಯಾದಲ್ಲಿ ಗುರುವಾರ ಮುಂಜಾನೆ ಭೀಕರ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 7.8 ತೀವ್ರತೆ…
ದಾಖಲಾಗಿದ್ದು, ಸಮುದ್ರ ತೀರದ 1,000 ಕಿಲೋಮೀಟರ್ ವ್ಯಾಪ್ತಿಯಲ್ಲಿ ಸುನಾಮಿ ಸಂಭವಿಸುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ. ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ (USಉS) ವರದಿಯ ಪ್ರಕಾರ, ಸ್ಥಳೀಯ ಕಾಲಮಾನ ಮುಂಜಾನೆ 6:48 (ಉಒಖಿ ಬುಧವಾರ 22:48). ಕೇಂದ್ರಬಿAದು: ಮೊಲುಕ್ಕಾ ಸಮುದ್ರದ ಟೆರ್ನೇಟ್ ದ್ವೀಪದ ಸಮೀಪ. ಆಳ: ಸಮುದ್ರದ ಮೇಲ್ಮೆöÊಯಿಂದ ಸುಮಾರು 35 ಕಿಲೋಮೀಟರ್ ಆಳದಲ್ಲಿ ಭೂಕಂಪ ಸಂಭವಿಸಿದೆ.
ಹವಾಯಿಯಲ್ಲಿರುವ ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರವು, ಭೂಕಂಪದ ಕೇಂದ್ರಬಿAದುವಿನಿAದ 1,000 ಕಿಲೋಮೀಟರ್ ವ್ಯಾಪ್ತಿಯಲ್ಲಿ ಅಪಾಯಕಾರಿ ಸುನಾಮಿ ಅಲೆಗಳು ಏಳುವ ಸಾಧ್ಯತೆಯಿದೆ ಎಂದು ತಿಳಿಸಿದೆ. ಈ ಎಚ್ಚರಿಕೆಯು ಪ್ರಮುಖವಾಗಿ ಈ ಕೆಳಗಿನ ದೇಶಗಳಿಗೆ ಅನ್ವಯಿಸುತ್ತದೆ:
ಉತ್ತರ ಸುಲಾವೆಸಿ ಪ್ರಾಂತ್ಯದ ಮನಾಡೋ ನಗರದಲ್ಲಿ ಪ್ರಬಲ ನಡುಕ ಉಂಟಾಗಿದ್ದು, ಜನರು ಭೀತಿಯಿಂದ ಮನೆಯಿಂದ ಹೊರಬಂದಿದ್ದಾರೆ. ವರದಿಗಳ ಪ್ರಕಾರ ಬೆಳ್ಳಂಬೆಳಗ್ಗೆ ಸಂಭವಿಸಿದ ಈ ನಡುಕದಿಂದಾಗಿ ಗಾಢ ನಿದ್ರೆಯಲ್ಲಿದ್ದ ಜನರು ದಿಕ್ಕಾಪಾಲಾಗಿ ಓಡಿದ್ದಾರೆ. ಶಾಲಾ ಮಕ್ಕಳು ಮತ್ತು ಶಿಕ್ಷಕರು ಸುರಕ್ಷಿತ ಸ್ಥಳಗಳಿಗಾಗಿ ಕಟ್ಟಡಗಳಿಂದ ಹೊರಬಂದಿದ್ದಾರೆ. ನಡುಕವು ಸುಮಾರು ಹೊತ್ತು ಮುಂದುವರಿದಿತ್ತಾದರೂ, ಸದ್ಯಕ್ಕೆ ಯಾವುದೇ ದೊಡ್ಡ ಮಟ್ಟದ ಆಸ್ತಿಪಾಸ್ತಿ ಹಾನಿ ಅಥವಾ ಪ್ರಾಣಾಪಾಯ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.
ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪ



