ಕೆಂಗೇರಿ: ಕೆರೆಗಳಿಗೆ ನೀರನ್ನು ತುಂಬಿಸುವುದರಿಂದ ಅಂತರ್ಜಲ ವೃದ್ಧಿಯಾಗಿ ನೀರು ಸಮರ್ಪಕವಾಗಿ ಸಿಗಲು ಸಹಕಾರಿಯಾಗುತ್ತದೆ ಎಂದು ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್ ಟಿ ಸೋಮಶೇಖರ್ ಅವರು ತಿಳಿಸಿದರು.
ರಾಜ್ಯಾದ್ಯಂತ ನೀರಿಗೆ ವ್ಯಾಪಕವಾಗಿ ತೊಂದರೆ ಯಾಗುತ್ತಿರುವ ಸಂದರ್ಭದಲ್ಲಿ ಯಶವಂತಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕೆಂಗೇರಿ ಕೆರೆ ದುಬಾಸಿಪಾಳ್ಯ ಕೆರೆ ಗಾಂಧಿನಗರ ಕೆರೆಗೆ ಎಸ್ ಟಿ ಪಿ ಪ್ಲಾಂಟ್ ನಲ್ಲಿ ಶುದ್ಧೀಕರಣ ಗೊಳಿಸದ ಉಳಿದ ನೀರನ್ನು ಕೆರೆಗಳಿಗೆ ತುಂಬಿಸುವ ಮಹತ್ತರ ಕಾರ್ಯವನ್ನು ಮಾಡಲು ಕೆಂಗೇರಿ (ಬುಡ್ಡೆಸೂಪ್ಪು) ಕೆರೆ ಎಂದೇ ಕರೆಯಲಾಗುವ ಕೆರೆಗೆ ನೀರನ್ನು ಹರಿಸುವ ಕೆಲಸವನ್ನು ಮಾಡಲಾಗುತ್ತದೆ ಎಂದು ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್ ಟಿ ಸೋಮಶೇಖರ್ ಅವರು ಕೆರೆಗೆ ನೀರನ್ನು ಹರಿಸುವ ಕಾಮಗಾರಿಯನ್ನು ವೀಕ್ಷಿಸಿ ಮಾತನಾಡಿದ ಅವರು ಮಳೆ ಇಲ್ಲದೇ ನೀರಿಗೆ ಅಹಕಾರ ಉಂಟಾಗಿದೆ.
ಸಾವಿರಕ್ಕೂ ಹೆಚ್ಚು ಅಡಿ ಆಳದವರೆಗೂ ಭೂರ್ವೆಲ್ ಕೂರೆದರು ನೀರು ಬರೆದಿರುವ ಈ ಸಂದರ್ಭದಲ್ಲಿ ಕೆರೆಗಳಿಗೆ ನೀರನ್ನು ತುಂಬಿಸಿದರೆ ಅಂತರ್ಜಲ ಮಟ್ಟ ವೃದ್ಧಿ ಯಾಗುವುದಲ್ಲದೇ ಪ್ರಾಣಿ ಪಕ್ಷಿಗಳಿಗೆ ನೀರು ಕುಡಿಯಲು ಮತ್ತು ಬಿಸಿಲಿನ ತಾಪವನ್ನು ತಣಿಸಿಕೂಳ್ಳಲು ಸಹಕಾರಿಯಾಗುತ್ತದೆ ಅಲ್ಲದೇ ಕೆಂಗೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರಿಗೆ ಯಾವುದೇ ಸಮಸ್ಯೆ ಉಂಟಾಗದಂತೆ ಎಚ್ಚರಿಕೆ ವಹಿಸಬೇಕಾಗುತ್ತದೆ ಎಂದು ತಿಳಿಸಿದರು.
ಹಾಗೆಯೇ ದುಬಾಸಿಪಾಳ್ಯ ಕೆರೆಗೆ ಮತ್ತು ವಳಗೇರಹಳ್ಳಿ ಕೆರೆಗೆ ನೀರನ್ನು ತುಂಬಿಸುವ ಪ್ರಕ್ರಿಯೆಗೆ ಚಾಲನೆ ನೀಡಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಕೆ ವೈ ಕೃಷ್ಣ. ಟಿ ಪ್ರಭಾಕರ್ ಶಿವಕುಮಾರ್ ಪುರುಷೋತ್ತಮ್ ಕೆ ಅರ್ ಮೂರ್ತಿ ಕೆ ಸಿ ಸತೀಶ್ ಪ್ರಕಾಶ್ ನಿರಂಜನ್ ಕಾಂತರಾಜ್ ಸೇರಿದಂತೆ ಹಲವಾರು ಮುಖಂಡರು ಭಾಗವಹಿಸಿದ್ದರು.