ಕೆಂಗೇರಿ: ಪುರಾತನ ಕಾಲದಿಂದಲೂ ಚಾಲ್ತಿಯಲ್ಲಿರುವ ಹಳ್ಳಿಕಾರ್ ದೇಶಿ ಸ್ಪರ್ಧೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಟಿ. ಸೋಮಶೇಖರ್ ಹೇಳಿದರು.
ಕ್ಷೇತ್ರದ ಕೆ.ಗೂಲ್ಲಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚಿನ್ನಕುರ್ಚಿಯಲ್ಲಿ ರಾಜ್ಯಮಟ್ಟದ ಪ್ರಥಮ ವರ್ಷದ ಹಳ್ಳಿಕಾರ್ ಬೆಂಗಳೂರು ರಾಸುಗಳ ಸ್ಪರ್ಧೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಳ್ಳಿಕಾರ್ ರಾಸುಗಳ ಸ್ಪರ್ಧೆಯ ಗ್ರಾಮೀಣ ಸೊಗಡಿನ ಸ್ಪರ್ಧೆಯಾಗಿದೆ ರಾಸುಗಳನ್ನು ಚಿಕ್ಕಂದಿನಿಂದಲೇ ಓಟದ ಬಗ್ಗೆ ತರಬೇತಿಯನ್ನು ನೀಡಿ ಅವುಗಳನ್ನು ಓಟಕ್ಕೆ ಅಣಿ ಮಾಡಿರುತ್ತಾರೆ ನಂತರ ರಾಸುಗಳ ಬೆಳವಣಿಗೆಗೆ ಬೇಕಾದ ಅಹಾರ ಪದಾರ್ಥಗಳನ್ನು ನೀಡಿ ದಷ್ಟ ಪುಷ್ಟವಾಗಿ ಬೆಳೆಯಲು ಪ್ರಾರಂಭಿಸುತ್ತಾರೆ ಇಂತಹ ಹಳ್ಳಿ ಸೊಗಡಿನ ಹಳ್ಳಿಕಾರ್ ಕಲೆಯನ್ನು ಉಳಿಸಿ ಬೆಳೆಸಬೇಕಾದದ್ದು ನಮ್ಮ ಕರ್ತವ್ಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ಜೋಡಿಯ ರಾಸುಗಳು ಭಾಗವಹಿಸಿದ್ದವು ಪ್ರಥಮ ಬಹುಮಾನವನ್ನು ದಿವಂಗತ ಪಟೇಲ್ ನರಸೇಗೌಡರವರ ರಾಸುಗಳು ಪಡೆದುಕೊಂಡಿತು . ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಪಟೇಲ್ ದೇವರಾಜು ಕಾರ್ಯಕ್ರಮದ ಬಹುಮಾನ ಪ್ರಯೋಜಕರಾದ ಕೆ ಎಂ ಮಹೇಶ್ ಮಾಜಿ ಜಿಲ್ಲಾ ಪಂಚಾಯತ ಸದಸ್ಯ ನರಸಿಂಹಮೂರ್ತಿ ಮಾಜಿ ಗ್ರಾ ಪ ಅಧ್ಯಕ್ಷ ವೆಂಕಟೇಗೌಡ ಮುಖಂಡರಾದ ಧರ್ಮಯ್ಯ ಮಾಜಿ ತಾಲ್ಲೂಕು ಪಂಚಾಯತ ಸದಸ್ಯ ಕೆ ವೈ ಶಿವಣ್ಣ ಕುಮಾರ್ ರುದ್ರೇಶ್ ಹಳ್ಳಿಕಾರ್ ರಾಸುಗಳ ಓಟದ ಸ್ಪರ್ಧೆಯ ಅಯೋಜಕರಾದ ಕೃಷ್ಣಮೂರ್ತಿ(ಕಿಟ್ಟಣ್ಣ) ನಂದೀಶ್ ಯಾದವ್ ಮಂಜುನಾಥ್ ಭಾಗವಹಿಸಿದ್ದರು.